ವೀರಾಜಪೇಟೆ, ಡಿ. ೧೯: ಚೆಕ್ ಬೌನ್ಸ್ ಪ್ರಕರಣದಲ್ಲಿ ಸೋಮವಾರಪೇಟೆ ತಾಲೂಕಿನ ಎಚ್.ಜೆ. ನವೀನ್ ಕುಮಾರ್ ಅವರನ್ನು ಜಿಲ್ಲಾ ನ್ಯಾಯಾಲಯ ವಿಚಾರಣೆ ನಡೆಸಿ ನಿರ್ದೋಷಿ ಎಂದು ತೀರ್ಪು ನೀಡಿದೆ.

ವೀರಾಜಪೇಟೆ ನಗರದ ನಿವಾಸಿ ಪಿ.ಬಿ. ವಿಜಯಕುಮಾರ್ ಅವರು ಸೋಮವಾರಪೇಟೆ ತಾಲೂಕಿನ ಎಚ್.ಜೆ. ನವೀನ್ ಕುಮಾರ್ ಅವರ ವಿರುದ್ಧ ವಿರಾಜಪೇಟೆ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಸಿಸಿ ಸಂಖ್ಯೆ ೮೧೩/೧೬ ರಂತೆ ಒಂದು ಲಕ್ಷ ಇಪ್ಪತ್ತು ಸಾವಿರ ಹಣ ವಸೂಲಾತಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿ ನವೀನ್ ವಿರುದ್ಧ ಆರೋಪ ಸಾಬೀತಾಗಿದ್ದು ಅವರ ಒಂದು ಲಕ್ಷ ಇಪ್ಪತ್ತು ಸಾವಿರ ಹಣಕ್ಕೆ ಬದಲಾಗಿ ಒಂದು ಲಕ್ಷ ಐವತ್ತಮೂರು ಸಾವಿರ ಹಾಗೂ ಆರು ತಿಂಗಳ ಸೆರೆವಾಸ ಅನುಭವಿಸುವಂತೆ ದಿನಾಂಕ ೧೬-೧-೨೪ ರಂದು ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ನವೀನ ಅವರು ವೀರಾಜಪೇಟೆ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಎಸ್ ನಟರಾಜ ಅವರು ವಾದ ಪ್ರತಿವಾದವನ್ನು ಆಲಿಸಿ ಈ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂದು ಕೆಳ ನ್ಯಾಯಾಲಯದ ತೀರ್ಪನ್ನು ವಜಾಗೊಳಿಸಿ ಆರೋಪಿ ನವೀನ್ ಕುಮಾರ್ ಅವರು ಹಣವನ್ನು ನೀಡಲು ಹಾಗೂ ಶಿಕ್ಷೆಗೆ ಭಾದ್ಯಸ್ಥನಲ್ಲ ಎಂದು ಹಾಗೂ ನಿರ್ದೋಷಿ ಎಂದು ತೀರ್ಪು ನೀಡಿದ್ದಾರೆ. ನವೀನ್ ಕುಮಾರ್ ಪರ ವೀರಾಜಪೇಟೆ ವಕೀಲ ವಿ.ಜಿ. ರಾಕೇಶ್ ವಾದ ಮಂಡಿಸಿದರು.