ಸೋಮವಾರಪೇಟೆಯಲ್ಲಿ ಜೇಸೀ ಸುವರ್ಣ ಸಂಭ್ರಮ
ಸೋಮವಾರಪೇಟೆ, ಡಿ. ೧೯: ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳಲು ಹಾಗೂ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಜೇಸೀ ಸಂಸ್ಥೆ ಉತ್ತಮ ವೇದಿಕೆಯಾಗಿದ್ದು, ಇಂದು ಪ್ರಪಂಚದಾದ್ಯAತ ಸೇವಾ ಕಾರ್ಯದಲ್ಲಿ ಜೇಸೀ ಮುಂಚೂಣಿಯಲ್ಲಿದೆ ಎಂದು ಸೋಮವಾರಪೇಟೆ ಜೇಸೀ ಸಂಸ್ಥೆಯ ಸ್ಥಾಪಕಾಧ್ಯಕ್ಷ (೧೯೭೬) ಎಸ್.ಸಿ. ಮದನ್ ಮೋಹನ್ ಅಭಿಪ್ರಾಯಿಸಿದರು.
ಇಲ್ಲಿನ ಜಾನಕಿ ಸಭಾಂಗಣದಲ್ಲಿ ಆಯೋಜಿಸಿದ್ದ ಸೋಮವಾರಪೇಟೆ ಜೇಸೀ ಸಂಸ್ಥೆಯ ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಸೇವೆಯ ಉದ್ದೇಶದಿಂದ ಸ್ಥಾಪನೆಗೊಂಡ ಜೇಸೀ ಸಂಸ್ಥೆಯು ತನ್ನ ಧ್ಯೇಯೋದ್ಧೇಶಗಳ ಈಡೇರಿಕೆಗಾಗಿ ಇಂದಿಗೂ ಅವಿರತ ಶ್ರಮಿಸುತ್ತಿದೆ. ವ್ಯಕ್ತಿತ್ವ ವಿಕಸನದೊಂದಿಗೆ ಸ್ವಾಸ್ಥö್ಯ ಸಮಾಜ ನಿರ್ಮಾಣ ಕಾರ್ಯದಲ್ಲಿ ಸಂಸ್ಥೆ ಸದಾ ಮುಂದಿದೆ ಎಂದರು.
ಸಮಾಜದಲ್ಲಿ ಗೌರವಯುತ ಬದುಕು ಎಲ್ಲರ ಹಕ್ಕಾಗಿದೆ. ಇದನ್ನು ಸಾಕಾರಗೊಳಿಸುವ ಸಂಕಲ್ಪ ಜೇಸೀ ಸಂಸ್ಥೆಯದ್ದು ಎಂದ ಅವರು, ನಾಯಕತ್ವ, ಸೇವಾ ಮನೋಭಾವನೆ, ಸಮಾಜದ ಬೇಕು ಬೇಡಿಕೆಗಳ ಬಗ್ಗೆ ಗಮನ ಹರಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ. ೫೦ ವರ್ಷಗಳಲ್ಲಿ ಸಂಸ್ಥೆಯು ಲಕ್ಷಾಂತರ ಸೇವಾ ಕಾರ್ಯಗಳನ್ನು ಅನುಷ್ಠಾನಗೊಳಿಸಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸೋಮವಾರಪೇಟೆ ಜೇಸೀ ಸಂಸ್ಥೆ ಅಧ್ಯಕ್ಷೆ ಜಗದಾಂಭ ಗುರುಪ್ರಸಾದ್ ಮಾತನಾಡಿ, ಜೇಸೀ ಸಂಸ್ಥೆಗೆ ೫೦ ವರ್ಷಗಳು ತುಂಬಿರುವ ಹೆಮ್ಮೆಯ ಕ್ಷಣಗಳಿಗೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಸೋಮವಾರಪೇಟೆ ಘಟಕದಿಂದ ಹತ್ತಾರು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಜೇಸೀ ಸಪ್ತಾಹದ ಮೂಲಕ ವಿವಿಧ ಸ್ತರಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮಾಜ ಸೇವೆಯನ್ನೇ ಧ್ಯೇಯವಾಗಿಸಿಕೊಂಡ ಸಂಸ್ಥೆಯು ಜಗತ್ತಿಗೆ ಮಾನವೀಯತೆ, ಸೇವಾ ಮನೋಭಾವದ ಸಂದೇಶ ಸಾರುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜೇಸೀ ವಲಯ ಅಧ್ಯಕ್ಷ ವಿಜಯ್‌ಕುಮಾರ್, ಜೆಎಸಿ ವಲಯಾಧ್ಯಕ್ಷ ಯೋಗೇಶ್, ನಿಯೋಜಿತ ವಲಯಾಧ್ಯಕ್ಷ ಪ್ರಜ್ವಲ್ ಜೈನ್, ಉದ್ಯಮಿ ಸುವಿಧ್, ಜೇಸೀ ಮಾಜಿ ಅಧ್ಯಕ್ಷ ಕೆ.ಎನ್. ತೇಜಸ್ವಿ, ಎಸ್.ಆರ್. ವಸಂತ್, ಕಾರ್ಯದರ್ಶಿ ವಿನುತಾ ಸುದೀಪ್, ಲೇಡಿ ಜೇಸೀ ಅಧ್ಯಕ್ಷೆ ಜ್ಯೋತಿ ರಾಜೇಶ್, ಜೂನಿಯರ್ ಜೇಸೀ ಅಧ್ಯಕ್ಷೆ ದಿಶಾ ಗಿರೀಶ್, ಸುವರ್ಣ ಸಂಭ್ರಮ ಕಾರ್ಯಕ್ರಮದ ಯೋಜನಾ ನಿರ್ದೇಶಕ ಕೆ.ಜೆ. ಗಿರೀಶ್ ಅವರುಗಳು ಉಪಸ್ಥಿತರಿದ್ದರು.
ಜೇಸೀ ಸಂಸ್ಥೆಗೆ ೫೦ ವರ್ಷಗಳು ತುಂಬಿದ ಹಿನ್ನೆಲೆ ಸಂಸ್ಥೆಯ ಅಧ್ಯಕ್ಷರುಗಳಾಗಿ ಸೇವೆ ಸಲ್ಲಿಸಿದವರ ಸೇವೆಯನ್ನು ಸ್ಮರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ೪೨ ಮಂದಿ ಮಾಜಿ ಅಧ್ಯಕ್ಷರುಗಳನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಮಾಜಿ ಅಧ್ಯಕ್ಷರುಗಳಾದ ಅರುಣಾಚಲ, ರಾಮ್‌ಶೆಟ್ಟಿ, ಜೆ.ಸಿ. ಮಮತ, ತೇಜಸ್ವಿ ಸೇರಿದಂತೆ ಇತರರು ಮಾತನಾಡಿ, ಸಂಸ್ಥೆಯ ಧ್ಯೇಯೋದ್ಧೇಶಗಳು, ಪ್ರಸ್ತುತ ಸಮಾಜಕ್ಕೆ ಜೇಸೀಯ ಅವಶ್ಯಕತೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.
೧೯೭೬ರಲ್ಲಿ ಆರಂಭಗೊAಡ ಸೋಮವಾರಪೇಟೆ ಜೇಸೀ ಸಂಸ್ಥೆಯು ೫೦ ವರ್ಷಗಳನ್ನು ಪೂರೈಸಿದ್ದು, ಹಿರಿಯ ಜೇಸೀ ಸದಸ್ಯರೊಂದಿಗೆ ಯುವ ಸದಸ್ಯರುಗಳು, ಕುಟುಂಬದವರು ಸುವರ್ಣ ಸಂಭ್ರಮದಲ್ಲಿ ಭಾಗಿಯಾಗಿ ಸಂಭ್ರಮಿಸಿದರು.