ಹೆಬ್ಬಾಲೆ, ಡಿ. ೨೧: ಹೆಬ್ಬಾಲೆ ಸಮೀಪದ ಸೊಳೆಕೋಟೆ (ಹನುಮಂತನಗರ) ಗ್ರಾಮದ ನಿವಾಸಿ ಮತ್ತು ಉದ್ಯಮಿಗಳಾದ ಹೇಮಂತ್ ಕುಮಾರ್ ಅವರು ಶಾಲೆಯಲ್ಲಿರುವ ಎಲ್ಲಾ ಮಕ್ಕಳಿಗೆ ಉಚಿತ ಗುರುತಿನ ಚೀಟಿಯನ್ನು ವಿತರಿಸಿದರು. ತಮ್ಮ ಪುತ್ರ ಯದುವೀರನ ನೆನಪಿಗಾಗಿ ಈ ಒಂದು ಕೊಡುಗೆಯನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ದಾನಿಗಳಾದ ಹೇಮಂತ್ ಕುಮಾರ್, ಎಸ್ಡಿಎಂಸಿ ಅಧ್ಯಕ್ಷ ಪ್ರದೀಪ್, ಶಾಲಾ ಮುಖ್ಯ ಶಿಕ್ಷಕ ಹೆಚ್.ಎಂ. ವೆಂಕಟೇಶ್. ಸಹಶಿಕ್ಷಕರಾದ ರಮ್ಯಾ, ಶಿವಾನಂದ, ಪ್ರತಿಮಾ, ರಶ್ಮಿಕ ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದು, ಗುರುತಿನ ಚೀಟಿ ಪಡೆದುಕೊಂಡರು.