ನಾಪೋಕ್ಲು, ಡಿ. ೨೧: ನಿಲುಗಡೆಗೊಂಡಿದ್ದ ಮಾರುತಿ ಓಮ್ನಿ ಕಾರಿಗೆ ಲಾರಿ ಗುದ್ದಿ ಪಲ್ಟಿಯಾದ ಘಟನೆ ಗೂನಡ್ಕದಲ್ಲಿ ನಡೆದಿದೆ.

ಮಡಿಕೇರಿ-ಮಂಗಳೂರು ರಾಷ್ಟಿçÃಯ ಹೆದ್ದಾರಿಯ ಕೊಡಗು-ದಕ್ಷಿಣ ಕನ್ನಡ ಗಡಿಭಾಗದ ರಸ್ತೆಯಲ್ಲಿ ಸುಳ್ಯದ ಕಡೆ ತೆರಳುತ್ತಿದ್ದ ಲಾರಿ ಹಾಗೂ ಗೂನಡ್ಕದ ರಸ್ತೆ ಬದಿ ನಿಂತಿದ್ದ ಕಾರಿಗೆ ಗುದ್ದಿದೆ. ಲಾರಿಯಡಿ ಕಾರು ಸಿಲುಕಿದ್ದು, ಕಾರು ಚಾಲಕ ಸಮೀಪದ ಅಂಗಡಿಯಲ್ಲಿದ್ದ ಕಾರಣದಿಂದಾಗಿ ಅಪಾಯದಿಂದ ಪಾರಾಗಿದ್ದಾರೆ. ಅನಂತರ ಜೆಸಿಬಿ ಯಂತ್ರದ ಮೂಲಕ ಲಾರಿಯನ್ನು ಮೇಲೆತ್ತಲಾಯಿತು. ಶಿವಮೊಗ್ಗದ ಲಾರಿ ಚಾಲಕ ಗಂಭೀರ ಗಾಯಗೊಂಡಿದ್ದು, ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.