ಪೊನ್ನAಪೇಟೆ, ಡಿ. ೨೨: ಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈ ಫೈಯರ್ಸ್ ತಂಡದ ವತಿಯಿಂದ ವಿಯೋಮನ್ ಇಂಡಿಯಾ ಪ್ರೆöÊವೇಟ್ ಲಿಮಿಟೆಡ್ ಅವರ ಸಹ ಪ್ರಾಯೋಜಕತ್ವದಲ್ಲಿ ವಿ. ಬಾಡಗದ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ೪ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ೨ನೇ ದಿನದ ಪಂದ್ಯಾವಳಿಯಲ್ಲಿ ಒಟ್ಟು ೫ ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಂಡವು.

ಬಿಟ್ಟಂಗಾಲ, ಬಿ.ಶೆಟ್ಟಿಗೇರಿ ಮತ್ತು ಹಾತೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ಐನ್‌ಮನೆ ಹೊಂದಿರುವ ಕೊಡವ ಕುಟುಂಬ ತಂಡಗಳಿಗಾಗಿ ನಡೆಯುತ್ತಿರುವ ಈ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಸೋಮವಾರದಂದು ಚೇಂದAಡ, ಮಳವಂಡ, ಕಳ್ಳಿಚಂಡ, ಚೇಂದಿರ ಮತ್ತು ಕೊಂಗAಡ ತಂಡಗಳು ಮುಂದಿನ ಹಂತಕ್ಕೆ ಹಾದಿ ಸುಗಮಗೊಳಿಸಿಕೊಂಡವು. ಮೊದಲ ಪಂದ್ಯದಲ್ಲಿ ಚೇಂದAಡ ತಂಡವು ತೀತಮಾಡ ತಂಡವನ್ನು ೫-೧ ಗೋಲುಗಳಿಂದ ಸೋಲಿಸಿತು. ವಿಜೇತ ತಂಡದ ಪರವಾಗಿ ಅತಿಥಿ ಆಟಗಾರ ಮೇರಿಯಂಡ ರಾಯ್ ೧೭ನೇ ಮತ್ತು ೩೫ನೇ ನಿಮಿಷದಲ್ಲಿ, ಮತ್ತೋರ್ವ ಅತಿಥಿ ಆಟಗಾರ ತಿಮ್ಮಣ್ಣ ೧೯ನೇ ಮತ್ತು ೨೬ನೇ ನಿಮಿಷದಲ್ಲಿ ಹಾಗೂ ತಂಡದ ಬೋಪಣ್ಣ ೨೯ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡದ ಗೆಲುವಿನ ಅಂತರ ಹೆಚ್ಚಿಸಿದರು. ಪರಾಜಿತ ತೀತಮಾಡ ತಂಡದ ಪರವಾಗಿ ಅತಿಥಿ ಆಟಗಾರ ಕಾರ್ಯಪ್ಪ ೧೨ನೇ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿದರು. ೨ನೇ ಪಂದ್ಯದಲ್ಲಿ ಮಳವಂಡ ತಂಡವು ಕೇಳಪಂಡ ತಂಡವನ್ನು ೩-೧ ಗೋಲುಗಳಿಂದ ಮಣಿಸಿತು. ವಿಜೇತ ತಂಡದ ಪರವಾಗಿ ೯ನೇ ನಿಮಿಷದಲ್ಲಿ ಅತಿಥಿ ಆಟಗಾರ ಮುತ್ತಪ್ಪ, ೩೧ನೇ ನಿಮಿಷದಲ್ಲಿ ತಿಮ್ಮಯ್ಯ ಹಾಗೂ ೩೨ನೇ ನಿಮಿಷದಲ್ಲಿ ಮತ್ತೋರ್ವ ಅತಿಥಿ ಆಟಗಾರ ಪ್ರಿನ್ಸ್ ಪೊನ್ನಣ್ಣ ಗೋಲು ದಾಖಲಿಸಿದರೆ, ಪರಾಜಿತ ತಂಡದ ಪರವಾಗಿ ೨೭ನೇ ನಿಮಿಷದಲ್ಲಿ ನಾಣಯ್ಯ ಗೋಲು ಹೊಡೆದರು. ೩ನೇ ಪಂದ್ಯದಲ್ಲಿ ಕಳ್ಳಿಚಂಡ ತಂಡವು ಚಂದೂರ ತಂಡವನ್ನು ೨-೧ ಗೋಲುಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು. ಕಳ್ಳಿಚಂಡ ತಂಡದ ಪರವಾಗಿ ೨೫ನೇ ನಿಮಿಷದಲ್ಲಿ ಸಾವನ್ ಹಾಗೂ ೩೧ನೇ ನಿಮಿಷದಲ್ಲಿ ಗಣಪತಿ ಗೋಲು ದಾಖಲಿಸಿದರೆ ಚಂದೂರ ತಂಡದ ಪರವಾಗಿ ಅತಿಥಿ ಆಟಗಾರ ಬೋಪಣ್ಣ ೩೫ನೇ ನಿಮಿಷದಲ್ಲಿ ಗೋಲು ಬಾರಿಸಿದರು. ೪ನೇ ಪಂದ್ಯದಲ್ಲಿ ಚೇಂದಿರ ತಂಡವು ಮೇಚಿಯಂಡ ತಂಡವನ್ನು ೩-೦ ಗೋಲುಗಳಿಂದ ಪರಾಭವಗೊಳಿಸಿತು. ವಿಜೇತ ತಂಡದ ಪರವಾಗಿ ೧೯ನೇ ನಿಮಿಷದಲ್ಲಿ ಬೋಪಣ್ಣ, ೩೫ನೇ ಮತ್ತು ೩೯ನೇ ನಿಮಿಷದಲ್ಲಿ ಅತಿಥಿ ಆಟಗಾರ ದೀಪಕ್ ಗೋಲು ಹೊಡೆದು ತಂಡದ ವಿಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ದಿನದ ಕೊನೆಯ ಪಂದ್ಯದಲ್ಲಿ ಕೊಂಗAಡ ತಂಡವು ಕಡೇಮಾಡ ತಂಡವನ್ನು ಟ್ರೈಬ್ರೇಕರ್ ನಲ್ಲಿ ೬-೫ ಗೋಲುಗಳ ಅಂತರದಿAದ ಮಣಿಸಿತು. ಪಂದ್ಯದ ದ್ವಿತೀಯಾರ್ಧ ಪೂರ್ಣಗೊಂಡಾಗ ಉಭಯ ತಂಡಗಳು ತಲಾ ಒಂದು ಗೋಲಿನ ಸಮಬಲ ಸಾಧಿಸಿದ್ದರಿಂದ ಟೈಬ್ರೇಕರ್ ನಲ್ಲಿ ಪಂದ್ಯದ ವಿಜಯ ನಿರ್ಣಯಿಸುವುದು ಅನಿವಾರ್ಯವಾಯಿತು. ಟ್ರೈಬ್ರೇಕರ್ ನಲ್ಲಿ ವಿಜೇತ ತಂಡದ ಪರವಾಗಿ ೫ ಗೋಲು ದಾಖಲಾದರೆ, ಪರಾಜಿತ ತಂಡದ ಪರವಾಗಿ ೪ ಗೋಲುಗಳಷ್ಟೇ ದಾಖಲಾದವು. ಇದಕ್ಕೂ ಮೊದಲು ಕಡೇಮಾಡ ತಂಡದ ರಚನ್ ೩೭ನೇ ನಿಮಿಷದಲ್ಲಿ ಮೊದಲ ಫೀಲ್ಡ್ ಗೋಲ್ಡ್ ದಾಖಲಿಸಿದರೆ, ಕೊಂಗAಡ ತಂಡದ ಆಟಗಾರ ಮಹೇಂದ್ರ ೩೯ನೇ ನಿಮಿಷದಲ್ಲಿ ಫೀಲ್ಡ್ ಗೋಲೊಂದನ್ನು ದಾಖಲಿಸಿ ತಂಡದ ಗೋಲಿನ ಅಂತರವನ್ನು ಸಮನಾಗಿಸಿದರು.

ಚಿತ್ರ, ವರದಿ : ರಫೀಕ್ ತೂಚಮಕೇರಿ