ವೀರಾಜಪೇಟೆ, ಡಿ. ೨೨: ಇಲ್ಲಿನ ಮಲೆತಿರಿಕೆ ಬೆಟ್ಟದಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಾರ್ಷಿಕ ಉತ್ಸವ ತಾ.೨೬ ರಿಂದ ಜ.೧ರವರೆಗೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಿದೆ. ೨೬ರಂದು ಸಂಜೆ ೬.೩೦ ಗಂಟೆಗೆ ಕ್ಷೇತ್ರ ಪಾಲಕ ಗುಳಿಗನ ಪೂಜೆ, ೨೭ ರ ಸಂಜೆ ವರದ ವಿನಾಯಕ ಭಕ್ತ ಮಂಡಳಿ ವತಿಯಿಂದ ಮಂಡಲ ಪೂಜೆ, ಹಾಗೂ ಜ.೧ ರಂದು ಬೆಳಿಗ್ಗೆ ೫.೩೦ ಗಂಟೆಗೆ ಗಣಪತಿ ಹೋಮ, ಲಕ್ಷಿö್ಮÃ ಪೂಜೆ, ಸರಸ್ವತಿ ಪೂಜೆ, ೧೦ ಗಂಟೆಗೆ ಲಕ್ಷಾರ್ಚನೆ, ಬಳಿಕ ಮಹಾಪೂಜೆ ಭಕ್ತಾಧಿಗಳಿ ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ಜ.೧೪ ರಂದು ಸಂಜೆ ೬ ಗಂಟೆಗೆ ಮಕರ ಜ್ಯೋತಿ ಪೂಜೆ ನಡೆಯಲಿದೆ. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮ ನಡೆಯುವುದ ರಿಂದ ಈ ಬಾರಿ ದೇವಸ್ಥಾನದ ವತಿಯಿಂದ ಪ್ರತಿವರ್ಷ ನಡೆಸಲಾಗುವ ಪೇಟೆ ಮೆರವಣಿಗೆಯನ್ನು ನಡೆಸಲಾಗುವುದಿಲ್ಲ. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಭಕ್ತಾದಿಗಳು ಸಹಕರಿಸಬೇಕು ಎಂದು ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿದೆ.