ಪೊನ್ನಂಪೇಟೆ, ಡಿ. ೨೨: ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಗ್ರಾಮದಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಈ ಸಂದರ್ಭ ಗ್ರಾಮಸ್ಥರಾದ ಚಂಗುಲAಡ ಸೂರಜ್ ಹಾಗೂ ಕಿರಿಯಮಾಡ ಮಿಲನ್ ಗಣಪತಿ ಅವರು ಮಾತನಾಡಿ, ಮೊಬೈಲ್ ನೆಟ್‌ವರ್ಕ್ ಇಲ್ಲದ ಕಾರಣ ತುರ್ತು ಸಂದರ್ಭದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಖಾಸಗಿ ಕಂಪನಿಯಿAದ ಗ್ರಾಮದಲ್ಲಿ ಮೊಬೈಲ್ ಟವರ್ ಸ್ಥಾಪಿಸಲಾಗಿದೆ. ಆದರೆ ನೆಟ್‌ವರ್ಕ್ ಇಲ್ಲದೇ ಗ್ರಾಮಸ್ಥರು ಪರದಾಡುವಂತಾಗಿದೆ. ನೆಟ್‌ವರ್ಕ್ ಸಮಸ್ಯೆ ಸರಿಪಡಿಸುವಂತೆ ಸಂಬAಧಿಸಿದವರಿಗೆ ಹಲವು ಬಾರಿ ದೂರು ಸಲ್ಲಿಸಿದ್ದರೂ ಕೂಡ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಚಂಗುಲAಡ ಮದನ್, ಕಿಪನ್, ಅಪುಣು ಮಾದಯ್ಯ, ಇಶಾ ಮಂದಣ್ಣ, ಗಣೇಶ್, ಬೊಳ್ಳಜೀರ ಸುಧೀ, ರವಿ, ತಿತೀರ ಅಪ್ಪಣ್ಣ, ಬಲ್ಯಮೀದೇರಿರ ಪ್ರಕಾಶ್, ಬಲ್ಯಮಾಡ ರೀಕ್ಷಿತ್, ಕಾಶಿ, ಬಯವಂಡ ವೇಣು, ಅಳಮೇಂಗಡ ಮುದ್ದಪ್ಪ ಮತ್ತಿತರರು ಪಾಲ್ಗೊಂಡಿದ್ದರು.