ಮಡಿಕೇರಿ, ಡಿ. ೨೨: ಬೆಂಗಳೂರಿನಲ್ಲಿ ಬಿಎಸ್ಸಿ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿರುವ ವೀರಾಜಪೇಟೆಯ ಪತ್ರಕರ್ತ ಎಂ.ಕೆ. ರವಿಕುಮಾರ್ ಅವರ ಪುತ್ರಿಗೆ ಮಾಧ್ಯಮ ಸ್ಪಂದನ ಮೂಲಕ ರೂ.೪೪ ಸಾವಿರ ರೂಪಾಯಿ ಮೌಲ್ಯದ ಲ್ಯಾಪ್‌ಟಾಪ್ ನೀಡಲಾಗಿದೆ.

ಮಾಧ್ಯಮ ಸ್ಪಂದನ ಸದಸ್ಯ ಸಂತೋಷ್ ರೈ ಅವರ ಪ್ರಯತ್ನದಿಂದ ಬೆಂಗಳೂರಿನ ಉದ್ಯಮಿ ಲೋಕೇಶ್ ಅವರು ಲ್ಯಾಪ್ ಟಾಪ್ ಖರೀದಿಗೆ ರೂ. ೩೬ ಸಾವಿರ ನೆರವು ನೀಡಿದರು. ಉಳಿದ ಹಣವನ್ನು ಮಾಧ್ಯಮ ಸ್ಪಂದನ ಸದಸ್ಯರು ಭರಿಸಿದರು ಎಂದು ಮಾಧ್ಯಮ ಸ್ಪಂದನದ ಸ್ಥಾಪಕ ಅಜ್ಜಮಾಡ ರಮೇಶ್ ಕುಟ್ಟಪ್ಪ ತಿಳಿಸಿದ್ದಾರೆ.