ಮಡಿಕೇರಿ, ಡಿ. ೨೨: ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಮಡಿಕೇರಿ ಆಶ್ರಯ ದಲ್ಲಿ ೪ನೇ ವರ್ಷದ ವಿಪ್ರ ಕ್ರೀಡೋತ್ಸವ ಅಂಗವಾಗಿ ಮಡಿಕೇರಿ ತಾಲೂಕು ಮಟ್ಟದ ಒಳಾಂಗಣ ಕ್ರೀಡೆಗಳು ಮಡಿಕೇರಿಯ ಲಕ್ಷ್ಮೀನರಸಿಂಹ ಕಲ್ಯಾಣ ಮಂಟಪದಲ್ಲಿ ನಡೆದವು. ಕೇರಂ, ಚೆಸ್, ಗುರಿ ಎಸೆತ, ನಿಂಬೆ ಚಮಚ, ಬಕೆಟ್ಗೆ ಬಾಲ್ ಎಸೆಯುವ ಸ್ಪರ್ಧೆಗಳು ಪುರುಷ, ಮಹಿಳೆ ಹಾಗೂ ಮಕ್ಕಳ ವಿಭಾಗಗಳಲ್ಲಿ ಪ್ರತ್ಯೇಕವಾಗಿ ನಡೆದವು.
ಮುಖ್ಯ ಅತಿಥಿಯಾಗಿ ಸಮಾಜದ ಪ್ರಮುಖರಾದ ಜಿ.ಟಿ ದಿವಾಕರ್ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇನ್ನೂ ಹೆಚ್ಚಿನ ಸಂಖ್ಯೆಯಲಿ ವಿಪ್ರ ಸಮಾಜದ ಬಾಂಧವರು ಕ್ರೀಡೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು. ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷರಾದ ರಾಮಚಂದ್ರ ಮೂಗೂರು ಅವರು ಮಾತನಾಡಿ, ಈ ಕ್ರೀಡಾ ಹಬ್ಬ ಜಿಲ್ಲೆಯಲ್ಲಿನ ಬ್ರಾಹ್ಮಣ ಸಮುದಾಯ ಬೆಳೆಯಲು ಅತ್ಯಗತ್ಯ ಎಂದು ಅಭಿಪ್ರಾಯ ಪಟ್ಟರು. ಈ ಸಂದರ್ಭ ವಿದ್ಯಾಭಿವೃದ್ಧಿ ನಿಧಿಯ ಗೌರವ ಕಾರ್ಯದರ್ಶಿ ಬಿ.ಕೆ ಜಗದೀಶ್, ಖಜಾಂಚಿ ರವಿಶಂಕರ್, ಉಪಾಧ್ಯಕ್ಷ ಭರತೇಶ್ ಖಂಡಿಗೆ, ನಿರ್ದೇಶಕರಾದ ಮಂಜುಳಾ ರಾಮಕೃಷ್ಣ ಭಟ್, ಸವಿತಾ ಭಟ್, ಶ್ಯಾಮಲ ಅಶೋಕ್ ಪಿ.ಎ ಹಾಗೂ ಇತರರು ಇದ್ದರು.
ವಿಜೇತರ ವಿವರ
ಕೇರಂನಲ್ಲಿ ಮಮತಾ ಶಾಸ್ತ್ರಿ ಪ್ರಥಮ , ಸಂತೋಷ್ ಕಾಲೂರು ದ್ವಿತೀಯ ಸ್ಥಾನ ಗಳಿಸಿದರು. ಚೆಸ್ ಪಂದ್ಯದಲ್ಲಿ ಆದಿತ್ಯ ಪ್ರಥಮ, ಸುಧಾ ಶಂಕರಪ್ರಸಾದ್ ದ್ವಿತೀಯ ಸ್ಥಾನ ಪಡೆದುಕೊಂಡರು. ಮಕ್ಕಳ ವಿಭಾಗದ ಕೇರಂನಲ್ಲಿ ಅದ್ವಿತ್ ಪ್ರಥಮ, ಶ್ರೀವರ್ಧನ ದ್ವಿತೀಯ ಸ್ಥಾನ ಪಡೆದುಕೊಂಡರು. ಮಕ್ಕಳ ಚೆಸ್ನಲ್ಲಿ ಅದ್ವಿತ್ ಪ್ರಥಮ, ಅವನೀಶ್ ದ್ವಿತೀಯ ಸ್ಥಾನ ಪಡೆದುಕೊಂಡರು. ಗುರಿ ಎಸೆತ ಮಕ್ಕಳ ವಿಭಾಗದಲ್ಲಿ ಅನ್ವಿ ಪ್ರಥಮ, ಅದ್ವಿತ್ ದ್ವಿತೀಯ ಸ್ಥಾನಗಳಿಸಿದರು. ಮಹಿಳೆಯರ ವಿಭಾಗದ ಗುರಿ ಎಸೆತದಲ್ಲಿ ಜಯಶೀಲಾ ಪ್ರಕಾಶ್ ಪ್ರಥಮ, ಮಮತಾ ಶಾಸ್ತ್ರಿ ದ್ವಿತೀಯ ಸ್ಥಾನ ಗಳಿಸದರು. ಪುರುಷರ ವಿಭಾಗದ ಗುರಿ ಎಸೆತದಲ್ಲಿ ಶ್ರೀ ವರ್ಧನ ಪ್ರಥಮ, ನಾಗೇಶ್ ಕಾಲೂರು ದ್ವಿತೀಯ ಸ್ಥಾನ ಪಡೆದುಕೊಂಡರು. ಕಲರ್ ಗೇಮ್ ನಲ್ಲಿ ಜಗದೀಶ್ ಬಿ.ಕೆ - ಪ್ರಥಮ, ಭರತೇಶ್ ಖಂಡಿಗೆ ದ್ವಿತೀಯ ಸ್ಥಾನ ಗಳಿಸಿದರು.
ನಿಂಬೆ ಚಮಚ ಸ್ಪರ್ಧೆಯಲ್ಲಿ ಮಕ್ಕಳ ವಿಭಾಗದಲ್ಲಿ ಅದ್ವಿತ್ ಪ್ರಥಮ, ಅನ್ವಿ ದ್ವಿತೀಯ ಸ್ಥಾನ ಗಳಿಸಿದರು. ಬಕೆಟ್ಗೆ ಬಾಲ್ ಹಾಕುವ ಸ್ಪರ್ಧೆಯಲ್ಲಿ ಮಹಿಳೆಯರ ವಿಭಾಗದಲ್ಲಿ ಶುಭಾ ಸತೀಶ್ ಪ್ರಥಮ, ಸವಿತಾ ಭಟ್ ದ್ವಿತೀಯ ಸ್ಥಾನ ಗಳಿಸಿದರು ಹಾಗೂ ಪುರುಷರ ವಿಭಾಗದಲ್ಲಿ ಜಗದೀಶ್ ಪ್ರಥಮ, ಸಂತೋಷ್ ಕಾಲೂರು ದ್ವಿತೀಯ ಸ್ಥಾನ ಗಳಿಸಿದರು. ತಾಲೂಕು ಮಟ್ಟದಲ್ಲಿ ವಿಜೇತರಾದವರು ಜನವರಿಯಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಲಿದ್ದಾರೆ.