ವೀರಾಜಪೇಟೆ, ಡಿ. ೨೩: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು ಕೇಂದ್ರ ಸಮಿತಿಯ ಚುನಾವಣೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಶೀಲರಾದ ವೀರಾಜಪೇಟೆಯ ವಿದ್ಯುತ್ ಗುತ್ತಿಗೆದಾರ ಬಿ.ಎಂ. ಗಣೇಶ್ ಅವರನ್ನು ವೀರಾಜಪೇಟೆಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ವೀರಾಜಪೇಟೆಯ ತಾಲೂಕು ಸಮಿತಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಸಮಿತಿ ಅಧ್ಯಕ್ಷ ಬಿ.ಸಿ. ಭರತ್, ಉಪಾಧ್ಯಕ್ಷ ಕೆ. ಎಂ. ಹಂಸ, ಕಾರ್ಯದರ್ಶಿ ಎನ್.ಜಿ. ಚಂದ್ರಶೇಖರ್, ಸಹ ಕಾರ್ಯದರ್ಶಿ ಸಿ.ಜಿ. ಹರೀಶ್. ಖಜಾಂಚಿ ಎಂ.ಎA. ಸರ್ಫು, ಸಂಘಟನಾ ಕಾರ್ಯದರ್ಶಿ ಬಿ.ಎಂ. ರಮೇಶ್, ಸದಸ್ಯರಾದ ಬಿ.ಸಿ. ಕಿರಣ್, ಎಂ.ಡಿ. ರಫೀಕ್, ಅಲೆಕ್ಸ್, ಬಿ.ಎಸ್. ಚಂದ್ರಶೇಖರ್. ಸಿ.ಜಿ. ಜೋಯ್, ಬಿ.ಆರ್. ಮನು, ಬಿ.ಎಂ. ಮ್ಯಾಥ್ಯೂ, ಬಿ.ಬಿ. ಹೊನ್ನಪ್ಪ ಹಾಗೂ ರಾಜಶೇಖರ ಅವರುಗಳು ಉಪಸ್ಥಿತರಿದ್ದರು.