ಮಡಿಕೇರಿ, ಡಿ. ೨೫: ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿನ ಈತನಕದ ೨೫ ವರ್ಷಗಳ ಅವಧಿಯಲ್ಲಿ ವಿಜೇತರು ಹಾಗೂ ರನ್ನರ್ಸ್ ಪ್ರಶಸ್ತಿ ಗಳಿಸಿದ ಕುಟುಂಬ ತಂಡಗಳ ನಡುವೆ ಕೊಡವ ಹಾಕಿ ಅಕಾಡೆಮಿ ಮುಂದಾಳತ್ವದಲ್ಲಿ ಇದೇ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿ ಆಯೋಜಿಸಲಾಗಿದೆ. ಲೆವಿಸ್ಟಾ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿ ತಾ. ೨೬ ರಿಂದ (ಇಂದಿನಿAದ) ಮೂರ್ನಾಡುವಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದೆ.

ಕೌಟುAಬಿಕ ಹಾಕಿ ಉತ್ಸವದ ಜನಕ ಪಾಂಡAಡ ಎಂ. ಕುಟ್ಟಪ್ಪ ಅವರ ಸ್ಮರಣೆಯೊಂದಿಗೆ ಈ ಚಾಂಪಿಯನ್ಸ್ ಟ್ರೋಫಿಯನ್ನು ಏರ್ಪಡಿಸಲಾಗಿದೆ. ಅಕಾಡೆಮಿ ಅಧ್ಯಕ್ಷ ಪಾಂಡAಡ ಕೆ. ಬೋಪಣ್ಣ ಕಾರ್ಯಾಧ್ಯಕ್ಷ ಒಲಂಪಿಯನ್ ಸಿ.ಎಸ್. ಪೂಣಚ್ಚ ಹಾಗೂ ತಂಡದ ಉಸ್ತುವಾರಿಯಲ್ಲಿ ಈ ಪಂದ್ಯಾವಳಿ ತಾ. ೨೬ ರಿಂದ ತಾ. ೩೦ರ ತನಕ ಜರುಗಲಿದೆ.

ಒಟ್ಟು ೧೩ ಕುಟುಂಬಗಳ ನಡುವೆ ಪಂದ್ಯಾವಳಿ ಜರುಗಲಿದ್ದು, ಮೈದಾನದಲ್ಲಿ ಅಗತ್ಯ ಸಿದ್ಧತೆಗಳನ್ನು ನಡೆಸಲಾಗಿದೆ. ವಿಜೇತ ಕುಟುಂಬಕ್ಕೆ ರೂ. ೨ ಲಕ್ಷ, ದ್ವಿತೀಯ ಸ್ಥಾನಕ್ಕೆ ರೂ. ೧ ಲಕ್ಷ ನಗದು ಬಹುಮಾನ ಹಾಗೂ ಸೆಮಿಫೈನಲ್ ತಲುಪುವ ತಂಡಕ್ಕೆ ತಲಾ ರೂ. ೫೦ ಸಾವಿರ ಹಾಗೂ ಇತರ ತಂಡಗಳಿಗೆ ೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ತಲಾ ರೂ. ೨೫ ಸಾವಿರ ನಗದು ಬಹುಮಾನ ನೀಡಲಾಗುತ್ತಿದೆ.

ತಾ. ೨೬ ರಂದು (ಇಂದು) ಬೆಳಿಗ್ಗೆ ೧೦.೩೦ಕ್ಕೆ ಪಾಂಡAಡ ಕೆ. ಬೋಪಣ್ಣ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಒಲಂಪಿಯನ್ ಬೊಳ್ಳಂಡ ಪ್ರಮೀಳಾ ಅಯ್ಯಪ್ಪ, ಅಂತರರಾಷ್ಟಿçÃಯ ಬಾಸ್ಕೆಟ್‌ಬಾಲ್ ಆಟಗಾರ್ತಿ ಡಾ. ಮಂಡೇಪAಡ ಪುಷ್ಪಾ ಕುಟ್ಟಣ್ಣ, ಅಂತರರಾಷ್ಟಿçÃಯ ಹಾಕಿ ಆಟಗಾರ್ತಿ ಪಾಂಡAಡ ಪುಷ್ಪಾ ಸುಬ್ಬಯ್ಯ, ಮುಖ್ಯ ಪ್ರಯೋಜಕರಾದ ಎಸ್.ಎಲ್.ಎನ್. ಗ್ರೂಫ್‌ನ ವೆಂಕಟಾಚಲA ಶಾಂತಪ್ಪನ್, ಸಿಇಓ ಶಾಹಿಬ್ ಸಿಂಗ್, ವೇಲಾಮುತ್ತಮ್ ಮಣಿ, ಅಂತರರಾಷ್ಟಿçÃಯ ಹಾಕಿ ಆಟಗಾರ ಕಲಿಯಂಡ ಎಂ. ಸೋಮಯ್ಯ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.