ಗೋಣಿಕೊಪ್ಪಲು, ಡಿ.೨೫ : ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿ ಮುಂದುವರೆಯುತ್ತಿದ್ದರೂ, ಸರ್ಕಾರ ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ವಿಶೇಷ ಪ್ರಯತ್ನ ನಡೆಸುತ್ತಿಲ್ಲ ಎಂಬುದೇ ವೇದನೆಯ ವಿಚಾರವಾಗಿದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಹೇಳಿದರು.

ಗೋಣಿಕೊಪ್ಪಲುವಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ, ತಾಲೂಕು ಕೃಷಿ ಇಲಾಖೆ, ಮತ್ತು ಕೆವಿಕೆ ಸಹಯೋಗದಲ್ಲಿ ನಡೆದ ರಾಷ್ಟಿçÃಯ ರೈತ ದಿನಾಚರಣೆ ಮತ್ತು ಆತ್ಮ ಯೋಜನೆಯಡಿ ನಡೆದ ಕಿಸಾನ್ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸ್ವಾಮಿನಾಥನ್ ವರದಿ ಜಾರಿಯಾದರೆ, ರೈತ ಬೆಳೆದ ಬೆಲೆಗೆ ಸೂಕ್ತ ಬೆಂಬಲ ಬೆಲೆ ದೊರಕಲಿದೆ. ಇದರಿಂದ ಆತನ ಆರ್ಥಿಕ ಚೇತರಿಕೆಗೆ ಅಡಚಣೆ ಉಂಟಾಗುವುದಿಲ್ಲ. ಇದರಿಂದ ರೈತನ ಆತ್ಮಹತ್ಯೆಯನ್ನು ತಪ್ಪಿಸಬಹುದಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಪರಿಗಣಿಸಿ ಅನ್ನದಾತನನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸಬೇಕಾಗಿದೆ.

ಇಂತಹ ಗಂಭೀರವಾದ ನಿಲುವುಗಳನ್ನು ರೈತ ದಿನಾಚರಣೆಯಂದು, ಸರ್ಕಾರ ಹೊಂದುವ ಮೂಲಕ ರೈತರ ಮೊಗದಲ್ಲಿ ಮಂದಹಾಸ ಮೂಡಿಸಬೇಕು ಎಂದರು. ಅನ್ನದಾತನಿಗೆ ಸಾಲದ ಹೊರೆಯನ್ನು ಹೊತ್ತುಕೊಳ್ಳುವ ಶಕ್ತಿ ಇಲ್ಲದಾಗಿದೆ. ಸಾಲ ಬಾಧೆಯಲ್ಲಿ ಸಿಲುಕಿ ತಾನು ಬೆಳೆಯುವ ಜಮೀನುಗಳನ್ನು ಮಾರಾಟ ಮಾಡುವ ಸ್ಥಿತಿಗೆ ತಲುಪಿದ್ದಾನೆ.

ಸ್ವಾಭಿಮಾನದಿಂದ, ಸಾಲಮುಕ್ತವಾಗಿ ರೈತ ಬದುಕಲು ಅವಕಾಶಗಳನ್ನು ಸರ್ಕಾರ ಒದಗಿಸಿಕೊಡಬೇಕು, ರೈತರು ಇಂದಿಗೂ ಸ್ವಂತ ಮನೆಯನ್ನು ಹೊಂದಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಬಳಲುತ್ತಿದ್ದಾನೆ.

ಕೃಷಿ ಇಲಾಖೆಗಳು, ವಿಜ್ಞಾನಿಗಳು ಸರ್ಕಾರವನ್ನು ಒಲೈಸಿಕೊಳ್ಳುವ ವರದಿಗಳನ್ನು ನೀಡದೆ, ರೈತರ ಸಂಕಷ್ಟಗಳ ಬಗ್ಗೆ, ಪರಿಸ್ಥಿತಿಗಳ ವಸ್ತು ನಿಷ್ಠತೆ ಬಗ್ಗೆ ಸರ್ಕಾರದ ಗಮನಕ್ಕೆ ತರಬೇಕು. ಬೆಳೆ ನಷ್ಟ ಪರಿಹಾರಗಳು, ಬೆಂಬಲಬೆಲೆ, ಕೃಷಿಗೆ ಪೂರಕವಾದ ತಂತ್ರಗಾರಿಕೆ ವ್ಯವಸ್ಥೆಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಇಲಾಖೆಗಳು ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು.

ದೇಶದ ಆಹಾರ ಭದ್ರತೆಗೆ ಮಹತ್ವ ಕೊಡುವ ನಿಟ್ಟಿನಲ್ಲಿ ರೈತರ ಯೋಗ ಕ್ಷೇಮವನ್ನು ಕಾಪಾಡಿಕೊಳ್ಳುವುದು ಸರ್ಕಾರ ಮತ್ತು ಇಲಾಖೆಗಳ ಆದ್ಯ ಕರ್ತವ್ಯವಾಗಿದೆ ಎಂಬುದನ್ನು ಮರೆಯುವಂತಿಲ್ಲ ಎಂದು ಹೇಳಿದರು.

ಪೊನ್ನಂಪೇಟೆ ತಾಲೂಕು ಕೃಷಿ ಸಮಾಜ ಅಧ್ಯಕ್ಷ ಕುಂಞAಗಡ ಅರುಣ್ ಭೀಮಯ್ಯ ಮಾತನಾಡಿ, ರೈತ ಬೆಳೆದ ಬೆಳೆಗೆ ಮುಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಒದಗಿಸಿಕೊಡಬೇಕಾಗಿದೆ. ದಲ್ಲಾಳಿಗಳ ಹಾವಳಿಯನ್ನು ತಪ್ಪಿಸುವ ಮೂಲಕ ರೈತನ ಆರ್ಥಿಕ ಚೇತರಿಕೆಗೆ ಭದ್ರತೆ ಒದಗಿಸಬೇಕು, ಬೆಳೆದ ಬೆಳೆಗೆ ಬೆಂಬಲ ಬೆಲೆಯನ್ನು ನೀಡುವ ಮೂಲಕ ಆತನನ್ನು ಸಂಕಷ್ಟದಿAದ ಪಾರುಮಾಡಬೇಕು ಎಂದರು.

ವೀರಾಜಪೇಟೆ ತಾಲೂಕು ಕೃಷಿ ಸಮಾಜ ಅಧ್ಯಕ್ಷ ಪಟ್ರಪಂಡ ರಘು ನಾಣಯ್ಯ ಮಾತನಾಡಿ, ಈ ಬಾರಿ ಭತ್ತದಲ್ಲಿ ಹೆಚ್ಚು ಜೊಳ್ಳು ಕಾಣಿಸಿಕೊಂಡಿದೆ. ಮಳೆಯ ಪರಿಣಾಮ ಅಡಿಕೆ, ಕಾಫಿ, ಭತ್ತ ಬೆಳೆಗಳಲ್ಲಿ ಲಾಭ ಕಾಣಿಸುತ್ತಿಲ್ಲ. ಇದರಿಂದ ರೈತ ಸಾಲಕ್ಕೆ ಸಿಲುಕಿಕೊಳ್ಳುತ್ತಿದ್ದಾನೆ. ರೈತನ ಸಂಕಷ್ಟವನ್ನು ಪಾರು ಮಾಡುವುದು ಸರ್ಕಾರದ ಜವಾಬ್ದಾರಿ ಎಂದರು.

ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಚೋಟು ಕಾವೇರಪ್ಪ ಮಾತನಾಡಿ, ಆಹಾರದ ಭದ್ರತೆಯಿಲ್ಲದೆ ದೇಶ ಕಟ್ಟಲು ಸಾಧ್ಯವಿಲ್ಲ. ರೈತರ ಮಹಾಕಾರ್ಯದ ಬಗ್ಗೆ ಯುವಜನತೆಗೆ ತಿಳಿಸಿಕೊಡುವ ಕಾರ್ಯವನ್ನು ಸರ್ಕಾರಗಳು ಜವಾಬ್ದಾರಿಯುತವಾಗಿ ಕಾಣಬೇಕಾಗಿದೆ ಎಂದು ಹೇಳಿದರು.

ತಾಲೂಕು ಕೃಷಿ ಇಲಾಖೆ ಅಧಿಕಾರಿ ದೊರೈರಾಜ್ ಮಾತನಾಡಿ, ದೇಶದ ಐದನೇ ಪ್ರಧಾನಮಂತ್ರಿ ಚೌಧರಿ ಚರಣ್‌ಸಿಂಗ್ ಅವರ ಹುಟ್ಟುಹಬ್ಬವನ್ನು ರಾಷ್ಟಿçÃಯ ರೈತ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ.

ಸರ್ಕಾರ ಈ ಜನ್ಮ ದಿನಾಚರಣೆಯನ್ನು, ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ಮತ್ತು ರೈತರಿಗೆ ಗೌರವ ನೀಡುವ ಸಲುವಾಗಿ, ಕೃಷಿಗೆ ತಂತ್ರಜ್ಞಾನದ ಬಳಕೆ ಮತ್ತು ಸುಸ್ಥಿರ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಒದಗಿಸಿಕೊಡಬೇಕಾದ ಮೌಲ್ಯಾಧಾರಿತವನ್ನು ತಿಳಿಸಿಕೊಡುವ ವೇದಿಕೆಯಾಗಿ ಆಚರಿಸುತ್ತಿದೆ ಎಂದರು.

೩೨ ಮಂದಿಗೆ ಗೌರವ

ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಆತ್ಮ ಯೋಜನೆ ಅಡಿ ಕೃಷಿ ಪ್ರಶಸ್ತಿಗೆ ಆಯ್ಕೆಯಾದ ರೈತರಿಗೆ ಮತ್ತು ತಾಲೂಕು ಮಟ್ಟದ ಭತ್ತದ ಬೆಳೆ ಸ್ಪರ್ಧೆ ವಿಜೇತ ೩೨ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೆವಿಕೆ ಮಣ್ಣು ವಿಜ್ಞಾನಿ ಡಾ. ಮೋಹನ್ ವಿಕಸಿತ ಭಾರತದ ಬಗ್ಗೆ ಮಾಹಿತಿ ನೀಡಿದರು.

ಪ್ರಗತಿಪರ ರೈತ ರವಿಶಂಕರ್, ಎಸ್‌ಬಿಐ ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕಿ, ಅನಿತಾ ಲಕ್ಷ್ಮಿ, ಕೆವಿಕೆ ವಿಜ್ಞಾನಿ ಪ್ರಭಾಕರ್, ಡಾ. ವೀರೇಂದ್ರ ಕುಮಾರ್, ಡಾ. ಸುರೇಶ್, ಕೃಷಿ ಅಧಿಕಾರಿ ಎಂ.ಪಿ ಮೀರಾ, ಲವೀನ್ ಮಾದಪ್ಪ, ಸಿಬ್ಬಂದಿಗಳಾದ ದಾಮಿನಿ, ಸಂಧ್ಯಾ, ನಿವೇದಿತ, ನಿಶಾನು, ಕಾವ್ಯ ಎಂ.ಕೆ ಸೇರಿದಂತೆ ರೈತರು ಉಪಸ್ಥಿತರಿದ್ದರು.