ಮಡಿಕೇರಿ, ಡಿ. ೨೫: ಮಡಿಕೇರಿಯ ಶ್ರೀ ಅಯ್ಯಪ್ಪ ಭಕ್ತ ವೃಂದದ ವತಿಯಿಂದ ನಗರದ ಶ್ರೀ ಕೋಟೆ ಮಾರಿಯಮ್ಮ ದೇವಾಲಯದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಅಪ್ಪಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು.

ವಿಜಯ್ ಗುರುಸ್ವಾಮಿ ನೇತೃತ್ವದಲ್ಲಿ ಬಾಳೆ ದಿಂಡಿನ ಅಲಂಕೃತ ಮಂಟಪ ನಿರ್ಮಿಸಿ ಶ್ರೀ ಅಯ್ಯಪ್ಪನ ಮೂರ್ತಿ ಪ್ರತಿಷ್ಠಾಪಿಸಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಇದೇ ವೇಳೆ ಕನ್ನಿ ಪೂಜೆಯನ್ನು ನಡೆಸಲಾಯಿತು. ಬಳಿಕ ನೂರಾರು ಮಂದಿ ವ್ರತಧಾರಿಗಳು ಶರಣು ಕರೆದು ಅಯ್ಯಪ್ಪ ಸ್ವಾಮಿಯ ನಾಮ ಸ್ಮರಣೆಯೊಂದಿಗೆ ಕುದಿಯುವ ತುಪ್ಪದಲ್ಲಿ ಬೇಯುತ್ತಿದ್ದ ಕಜಾಯವನ್ನು ಕೈಯಿಂದ ಹೊರ ತೆಗೆದು ಶ್ರೀ ಅಯ್ಯಪ್ಪನಿಗೆ ಸಮರ್ಪಿಸಿದರು.

ಅಯ್ಯಪ್ಪ ಸ್ವಾಮಿಗೆ ಮಹಾ ಮಂಗಳಾರತಿ ಬೆಳಗಿದ ಬಳಿಕ ನೆರೆದಿದ್ದ ಭಕ್ತರಿಗೆ ಮತ್ತು ಅಯ್ಯಪ್ಪ ವ್ರತಧಾರಿಗಳಿಗೆ ಅನ್ನಪ್ರಸಾದ ವಿತರಿಸಲಾಯಿತು.