ಸೋಮವಾರಪೇಟೆ, ಡಿ. ೨೫: ರಾಜಕೀಯ ರಂಗದ ಆಜಾತಶತ್ರು ಎಂದೇ ಕರೆಸಿಕೊಳ್ಳುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬವನ್ನು ಸೋಮವಾರಪೇಟೆಯಲ್ಲಿ ಆಚರಿಸಲಾಯಿತು.

ಬಿಜೆಪಿ ಹಿರಿಯರ ವೇದಿಕೆಯ ನೇತೃತ್ವದಲ್ಲಿ ಇಲ್ಲಿನ ಅಟಲ್‌ಜೀ ಕನ್ನಡ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾರ್ಯಕರ್ತರು ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ದೇಶದ ರಾಜಕೀಯ ರಂಗದಲ್ಲಿ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದ ಅಟಲ್ ಬಿಹಾರಿ ವಾಜಪೇಯಿ ಅವರು ನಿಸ್ವಾರ್ಥ ರಾಷ್ಟç ಸೇವಕರಾಗಿ ಜೀವನ ನಡೆಸಿದವರು ಎಂದು ಬಣ್ಣಿಸಿದರು.

ರಾಜಕೀಯದಿಂದ ಆಚೆಗೂ ಸಹ ಅಪ್ಪಟ ರಾಷ್ಟçಹಿತದ ಜೀವನ ಸಾಗಿಸಿದ ಮೇರು ವ್ಯಕ್ತಿತ್ವ ಅಟಲ್‌ಜೀ ಅವರದ್ದಾಗಿತ್ತು. ದೇಶದ ಭವಿಷ್ಯ, ಭದ್ರತೆ, ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು, ತಮ್ಮ ಇಡೀ ಜೀವಮಾನವನ್ನೇ ರಾಷ್ಟçಕ್ಕಾಗಿ ಮುಡಿಪಾಗಿಟ್ಟವರು ಎಂದು ಸ್ಮರಿಸಿದರು.

ಕವಿ ಹೃದಯವನ್ನೂ ಹೊಂದಿದ್ದ ವಾಜಪೇಯಿ ಅವರು ರಾಷ್ಟçದ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟ ನಿಷ್ಕಳಂಕ ರಾಜಕಾರಣಿ, ರಾಷ್ಟಿçÃಯ ಹೆದ್ದಾರಿ ನಿರ್ಮಾಣ, ನದಿಗಳ ಜೋಡಣೆ, ಕೃಷಿ, ತಂತ್ರಜ್ಞಾನ, ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಬಲವರ್ಧನೆಗೆ ಹೆಚ್ಚು ತೊಡಗಿಸಿಕೊಂಡವರು. ಜನಸಂಘದ ನಂತರ ಭಾರತೀಯ ಜನತಾ ಪಾರ್ಟಿಯನ್ನು ರಾಷ್ಟçದಾದ್ಯಂತ ಸಂಘಟಿಸುವಲ್ಲಿ ತೊಡಗಿಸಿಕೊಂಡಿದ್ದರ ಫಲವಾಗಿ ಇಂದು ಪಕ್ಷವು ಹಲವಷ್ಟು ರಾಜ್ಯಗಳೂ ಸೇರಿದಂತೆ ರಾಷ್ಟçಮಟ್ಟದಲ್ಲಿ ಅಧಿಕಾರದಲ್ಲಿದೆ ಎಂದು ನೆನಪಿಸಿಕೊಂಡರು.

ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಮೇಲಿನ ದೌರ್ಜನ್ಯಗಳು ಮಿತಿಮೀರುತ್ತಿದೆ. ಈ ಹಿಂದೆ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ರಚನೆ ಸಂದರ್ಭ ಕೈಗೊಂಡ ಕೆಲವೊಂದು ತಪ್ಪು ನಿರ್ಧಾರಗಳಿಂದ ಇಂದಿಗೂ ಸಮಸ್ಯೆ ಸೃಷ್ಟಿಯಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದ ರಂಜನ್, ವಾಜಪೇಯಿ ಹಾಗೂ ಲಾಲ್‌ಕೃಷ್ಣ ಅಡ್ವಾಣಿ ಅವರುಗಳಿಂದ ಪ್ರಭಾವಿತರಾದ ಮೋದಿ ಅವರು ಇಂದು ರಾಷ್ಟçದ ನಾಯಕತ್ವ ವಹಿಸಿದ್ದು, ಅಟಲ್‌ಜೀ ಅವರ ಸಂಕಲ್ಪದAತೆ ಭಾರತವನ್ನು ವಿಶ್ವಗುರು ಸ್ಥಾನದತ್ತ ಕೊಂಡೊಯ್ಯುವಲ್ಲಿ ಮುನ್ನಡಿಯಿಡುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ರಾಜಕೀಯ ರಂಗದಲ್ಲಿ ಆಜಾತಶುತ್ರುವಾಗಿ ಜೀವನ ನಡೆಸಿದ ಅಟಲ್‌ಜೀ ಅವರ ಸಾಮಾಜಿಕ ಜೀವನ ಎಲ್ಲರಿಗೂ ಪ್ರೇರಣೆ ಹಾಗೂ ಮಾರ್ಗದರ್ಶನ ಆಗಬೇಕು. ಯುವ ಪೀಳಿಗೆ ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ಅಭಿಪ್ರಾಯಿಸಿದರು.

ಬಿಜೆಪಿ ಹಿರಿಯರ ವೇದಿಕೆ ಸಂಚಾಲಕ ಬಿ.ಟಿ. ತಿಮ್ಮಶೆಟ್ಟಿ ಮಾತನಾಡಿ, ವಾಜಪೇಯಿ ಅವರು ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಸಂದರ್ಭ ಅವರ ಚಿಂತನೆಗಳನ್ನು ಮೆಚ್ಚಿ ಕೋಟ್ಯಂತರ ಮಂದಿ ಪಕ್ಷದಲ್ಲಿ ತೊಡಗಿಸಿಕೊಂಡರು. ಉದಾತ್ತ ಚಿಂತನೆಯ ನಾಯಕನ ಸ್ಮರಣೆಯನ್ನು ಮಾಡುವ ಉದ್ದೇಶದಿಂದ ಹಿರಿಯರ ವೇದಿಕೆಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಪಕ್ಷದ ಹಿರಿಯ ಕಾರ್ಯಕರ್ತ ಪ್ರೇಮ್‌ನಾಥ್ ಕಾರ್ಯಕ್ರಮ ನಿರ್ವಹಿಸಿದರು. ಬಿಜೆಪಿ ಹಿರಿಯರ ವೇದಿಕೆ ಪದಾಧಿಕಾರಿಗಳಾದ ಬಿ.ಆರ್.ಮೃತ್ಯುಂಜಯ, ಬಿ.ಪಿ. ಶಿವಕುಮಾರ್, ದಯಾನಂದ್, ಹಾಲೇರಿ ದಿನೇಶ್, ಕೆ.ಎನ್. ಶಿವಕುಮಾರ್ ಅವರುಗಳು ಕಾರ್ಯಕ್ರಮ ಆಯೋಜಿಸಿದ್ದರು. ಬಿಜೆಪಿ ಪ್ರಮುಖರಾದ ಬಿ.ಬಿ. ಭಾರತೀಶ್, ಗೌತಮ್ ಗೌಡ, ಮಹೇಶ್ ತಿಮ್ಮಯ್ಯ, ದರ್ಶನ್ ಜೋಯಪ್ಪ, ಬಿ.ಡಿ. ಮಂಜುನಾಥ್, ಎಸ್.ಪಿ. ಪೊನ್ನಪ್ಪ, ಎಂ.ಬಿ. ಅಭಿಮನ್ಯುಕುಮಾರ್, ಸುಮಾ ಸುದೀಪ್, ಮಂಜುಳಾ ಸುಬ್ರಮಣಿ, ಶರತ್‌ಚಂದ್ರ, ಶ್ರೀನಿಧಿ ಲಿಂಗಪ್ಪ, ಗೋವಿಂದ ಸೇರಿದಂತೆ ವಾಜಪೇಯಿ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಶ್ರೀ ವಿದ್ಯಾ ಗಣಪತಿ ದೇವಾಲಯದಲ್ಲಿ ದಿನದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಾಜಿ ಶಾಸಕ ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು, ಬಿಸ್ಕತ್‌ಗಳನ್ನು ವಿತರಿಸಲಾಯಿತು.