ಸುಂಟಿಕೊಪ್ಪ, ಡಿ. ೨೫: ಜಿಟೌನ್ ಎಫ್.ಸಿ. ವತಿಯಿಂದ ೨ನೇ ವರ್ಷದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿ ತಾ. ೨೬ ರಿಂದ ೨೮ ರವರೆಗೆ ನಡೆಯಲಿದೆ.
೩ ದಿನಗಳು ಜಿಎಂಪಿ ಶಾಲಾ ಮೈದಾನದಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಕೇರಳ, ತಮಿಳುನಾಡು, ಬೆಂಗಳೂರು, ಮಂಗಳೂರು, ಮೈಸೂರು ಮತ್ತು ಜಿಲ್ಲೆಯ ಫುಟ್ಬಾಲ್ ಕ್ಲಬ್ ಸೇರಿದಂತೆ ೩೨ ತಂಡಗಳು ಸೆಣಸಾಡಲಿದೆ.
ಈ ಪಂದ್ಯಾವಳಿಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಲಿದ್ದಾರೆ. ಪಂದ್ಯಾವಳಿಯಲ್ಲಿ ಡ್ರಗ್ಸ್ ಮುಕ್ತ ಅಭಿಯಾನವನ್ನು ಕೈಗೊಳ್ಳಲಾಗಿದೆ. ವಿಜೇತ ತಂಡಕ್ಕೆ ಹಾಗೂ ದ್ವಿತೀಯ ಸ್ಥಾನದ ತಂಡಗಳಿಗೆ ಸೇರಿ ರೂ. ೨ ಲಕ್ಷಗಳ ನಗದು ಬಹುಮಾನ, ಪಾರಿತೋಷಕಗಳನ್ನು ನೀಡಲಾಗುವುದು. ಉತ್ತಮ ಗೋಲ್ ಕೀಪರ್, ಪ್ರತಿ ಪಂದ್ಯಾಟದ ಶ್ರೇಷ್ಠ ಆಟಗಾರರಿಗೆ ಪ್ರಶಸ್ತಿ ಹಾಗೂ ಉತ್ತಮ ಕ್ರೀಡಾ ಪಟುಗಳಿಗೆ, ತಂಡಗಳಿಗೆ ಬಹುಮಾನ ನೀಡಿ, ಸ್ಥಳೀಯ ಪ್ರತಿಭಾವಂತ ಹಾಗೂ ಹಿರಿಯ ಕ್ರೀಡಾಪಟುಗಳನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಜಿಟೌನ್ ಎಫ್.ಸಿ. ತಂಡದ ಸಂಚಾಲಕರಾದ ಶಾಬಿತ್ ಬಷೀರ್, ರಿಫಾನ್ ರಫಿ ಹಾಗೂ ಶಾಬಿಬ್ ಉಸ್ಮಾನ್ ಅವರು ತಿಳಿಸಿದ್ದಾರೆ.