ನಾಪೋಕ್ಲು, ಡಿ. ೨೫: ದೇವರಕೊಲ್ಲಿ ಬಳಿ ಸರಣಿ ರಸ್ತೆ ಅಪಘಾತದಿಂದ ವಾಹನಗಳು ಜಖಂಗೊAಡು ಪ್ರಯಾಣಿಕರು ಗಾಯಗೊಂಡ ಘಟನೆ ಗುರುವಾರ ಸಂಜೆ ಸಂಭವಿಸಿದೆ.

ಮೈಸೂರು- ಮಂಗಳೂರು ಹೆದ್ದಾರಿಯಲ್ಲಿ ಮಡಿಕೇರಿ ಕಡೆ ಬರುತ್ತಿದ್ದ ಸ್ಕಾರ್ಪಿಯೋ ಮತ್ತು ಸುಳ್ಳದ ಕಡೆ ತೆರಳುತ್ತಿದ್ದ ಸ್ವಿಫ್ಟ್ ಕಾರುಗಳ ಮಧ್ಯೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅದೇ ಮಾರ್ಗವಾಗಿ ಮಡಿಕೇರಿ ಕಡೆ ಬರುತ್ತಿದ್ದ ಲಾರಿ ಸ್ಕಾರ್ಪಿಯೋ ಕಾರಿನ ಹಿಂಬದಿಗೆ ಡಿಕ್ಕಿಯಾಗಿದೆ. ಇದರಿಂದಾಗಿ ಪ್ರಯಾಣಿಕರಿಗೆ ಗಾಯಗಳಾಗಿದ್ದು ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಯಿತು.

ದುಗ್ಗಳ ಸದಾನಂದ