ಕುಶಾಲನಗರ, ಡಿ. ೨೫ : ಉಡುಪಿಯಿಂದ ಮಡಿಕೇರಿ ಮೂಲಕ ಆಗಮಿಸಿದ ಶಿವ ರಥಯಾತ್ರೆ ಕುಶಾಲನಗರಕ್ಕೆ ಆಗಮಿಸಿತು.

ಕುಶಾಲನಗರದ ಬೈಚನಹಳ್ಳಿ ಮಾರಿಯಮ್ಮ ದೇವಾಲಯ ಬಳಿ ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು ಮಹಿಳಾ ಭಜನಾ ಮಂಡಳಿ ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಭಕ್ತಿ ಭಾವದಿಂದ ಬರಮಾಡಿಕೊಂಡರು.

ಬೈಚನಹಳ್ಳಿ ಬಳಿಯಿಂದ ಪೂರ್ಣ ಕುಂಭ ಕಳಸದೊಂದಿಗೆ ಮೆರವಣಿಗೆಯಲ್ಲಿ ತೆರಳಿ ಕುಶಾಲನಗರ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು.

ನಂತರ ರಥಬೀದಿ ಮೂಲಕ ಗಾಯತ್ರಿ ಕಲ್ಯಾಣ ಮಂಟಪಕ್ಕೆ ತೆರಳಿ ಪಾದಯಾತ್ರಿಗಳು ವಾಸ್ತವ್ಯ ಹೂಡಿದ್ದಾರೆ.

ರಥ ಪಾದಯಾತ್ರೆಯಲ್ಲಿ ಪ್ರವೀಣ್ ಅವರ ನೇತೃತ್ವದ ೪೫ ಮಂದಿ ಕಾರ್ಯಕರ್ತರು ಎಳೆಯುತ್ತ ಸಾಗಿದರು. ಸ್ಥಳೀಯ ಭಕ್ತಾದಿಗಳು ಭಕ್ತಿ ಭಾವದೊಂದಿಗೆ ರಥ ಎಳೆಯುವಲ್ಲಿ ಕೈಜೋಡಿಸಿದರು.

ದೇವಾಲಯ ಒಕ್ಕೂಟ ಸಮಿತಿಯ ಅಧ್ಯಕ್ಷರಾದ ಎಂ ಕೆ ದಿನೇಶ್, ಹಿಂದೂಪರ ಸಂಘಟನೆಯ ಪ್ರಮುಖರಾದ ಅಮೃತ ರಾಜ್, ಭಜನಾ ಮಂಡಳಿಯ ಪ್ರಮುಖರಾದ ಪುರುಷೋತ್ತಮ್ ಮತ್ತು ಮಹಿಳಾ ಭಜನಾ ಮಂಡಳಿ ಮತ್ತು ದೇವಾಲಯಗಳ ಪ್ರತಿನಿಧಿಗಳು ಸಂಘ-ಸAಸ್ಥೆಗಳ ಪ್ರಮುಖರು ಇದ್ದರು.