ಸುಂಟಿಕೊಪ್ಪ, ಡಿ. ೨೭: ಸುಂಟಿಕೊಪ್ಪ ಶ್ರೀಪುರಂ ಅಯ್ಯಪ್ಪಸ್ವಾಮಿ ಕ್ಷೇತ್ರ ಆವರಣದಲ್ಲಿ ನೂತನವಾಗಿ ಮುಖಮಂಟಪ ಲೋಕಾರ್ಪಣೆ ಹಾಗೂ ದುರ್ಗಾ ದೇವಿಯ ಪ್ರತಿಷ್ಠಾಪನಾ ವಾರ್ಷಿಕೋತ್ಸವ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳೊಂದಿಗೆ ೨ ದಿನಗಳ ಕಾಲ ನೆರವೇರಿತು. ಪ್ರಾಶಬ್ಧ ಶುದ್ಧಿ, ರಾತ್ರಿ ರಾಕ್ಷೆÆÃಘ್ನ ಹೋಮ ಹಾಗೂ ಮುಖ ಮಂಟಪ ಸಮರ್ಪಣೆ, ವಾಸ್ತು ಹೋಮ, ವಾಸ್ತು ಕಲಶ ಪೂಜೆ, ವಾಸ್ತು ಬಲಿ, ವಾಸ್ತು ಕಲಶಾಭಿಷೇಕ, ಅತ್ತಾಯ ಪೂಜೆ, ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು.

ಗಣಪತಿ ಹೋಮ, ಕಲಶÀಪೂಜೆ, ದುರ್ಗಾ ಲಕ್ಷಿö್ಮಗೆ ಕಲಶಾಭಿಷೇಕ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗದೊಂದಿಗೆ ದುರ್ಗಾ ದೇವಿಯ ಪ್ರತಿಷ್ಠಾಪನಾ ವಾರ್ಷಿಕೋತ್ಸವದ ಅಂಗವಾಗಿ ವೈದಿಕ ಧಾರ್ಮಿಕ, ವಿಧಿ ವಿಧಾನ ಕಾರ್ಯಕ್ರಮಗಳು ನಡೆದವು.

ಕ್ಷೇತ್ರ ತಂತ್ರಿಗಳಾದ ಕೇರಳದ ತಳಿಪರಂಬ ಕಾಳೇಘಾಟ್ ಇಲ್ಲಂ ಮಧುಸೂಧನ್ ತಂತ್ರಿ ಅವರ ನೇತೃತ್ವದಲ್ಲಿ ಅಚಾರ್ಯ ತಂತ್ರಿಯವರನ್ನು ತಂಡ ಹಾಗೂ ಆರ್ಚಕರಾದ ಗಣೇಶ್ ಉಪಾಧ್ಯಾಯ ಅವರು ವಿಶೇಷ ಪೂಜಾ ಕೈಂಕರ್ಯ ನಡೆಸಿದರು. ತಾ. ೨೭ ರಂದು ಮಂಡಲಪೂಜೆಯ ಅಂಗವಾಗಿ ಪೂರ್ವಾಹ್ನ ೬.೪೫ಕ್ಕೆ ಗಣಪತಿ ಹೋಮ, ೭.೧೦ಕ್ಕೆ ಕನ್ನಿಮೂಲ ಗಣಪತಿಗೆ ಎಳೆನೀರು ಅಭಿಷೇಕ, ೭.೩೦ಕ್ಕೆ ಚಂಡೆಮೇಳ, ೯ಕ್ಕೆ ಶ್ರೀ ಅಯ್ಯಪ್ಪಸ್ವಾಮಿಗೆ ಪಂಚಾಮೃತಾಭಿಷೇಕ, ೧೧.೩೦ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿಗೆ ಲಕ್ಷಾರ್ಚನೆ, ೧೨.೩೦ಕ್ಕೆ ಶ್ರೀ ಅಯ್ಯಪ್ಪಸ್ವಾಮಿಗೆ ಪಲ್ಲಪೂಜೆ, ೧ಕ್ಕೆ ಮಹಾಪೂಜೆ ಮತ್ತು ಗಂಭೀರ ಪಟಾಕಿ, ನೆರೆದಿರುವ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ದಿನದ ವಿಶೇಷ ಪೂಜೆಯಾಗಿ ಬಿಲ್ವಪತ್ರೆ, ತುಳಸಿ ಆರ್ಚನೆ, ಪಂಚಾಮೃತ ಅಭಿಷೇಕ ಹಾಗೂ ದುರ್ವಾಚನೆ ನಡೆಸಲಾಗುವುದು. ಶ್ರೀಪುರಂ ಅಯ್ಯಪ್ಪ ಕ್ಷೇತ್ರದಲ್ಲಿ ವಿಶೇಷವಾಗಿ ಸಂಜೆ ೬.೩೦ಕ್ಕೆ ದೀಪಾರಾಧನೆ ಮತ್ತು ಮೆರವಣಿಗೆ ೭.೩೦ಕ್ಕೆ ದುರ್ಗಾಪೂಜೆ ನಂತರ ಮಹಾ ಮಂಗಳಾರತಿಯೊAದಿಗೆ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಅಧ್ಯಕ್ಷ ಸುರೇಶ್ ಹಾಗೂ ಕಾರ್ಯದರ್ಶಿ ಎಂ. ಚಂದ್ರ ತಿಳಿಸಿದ್ದಾರೆ.