ಮಡಿಕೇರಿ, ಡಿ. ೨೭: ಶ್ರೀ ಅಯ್ಯಪ್ಪ ದೀಪಾರಾಧನಾ ಸಮಿತಿ ವತಿಯಿಂದ ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿ ಶ್ರೀ ಅಯ್ಯಪ್ಪ ದೀಪಾರಾಧನಾ ಉತ್ಸವ ನಡೆಯಿತು.
ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮುಂಜಾನೆಯಿAದಲೇ ನಡೆ ತೆಗೆಯುವುದು, ನಿರ್ಮಲ್ಯ ಪೂಜೆ, ಗಣಪತಿ ಹೋಮ, ಅಷ್ಟಾಭಿಷೇಕ ಸೇವೆ, ತುಳಸಿ ಸಹಸ್ರನಾಮಾರ್ಚನೆ, ಮಹಾಪೂಜೆ, ಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಿತು.
ಮಧ್ಯಾಹ್ನ ಪಾಲಕೊಂಬು ಪ್ರತಿಷ್ಠಾಪನೆ ತಾಯಂಬಕA (ಚಂಡೆಸೇವೆ) ಬಳಿಕ ಸಂಜೆ ಶ್ರೀ ಅಯ್ಯಪ್ಪ ಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಚಂಡೆ, ಮೇಳದೊಂದಿಗೆ ನಗರದ ಅಶ್ವಿನಿ ಗಣಪತಿ ದೇವಾಲಯದಿಂದ ಮುಖ್ಯಬೀದಿಗಳಲ್ಲಿ ಪಾಲಕೊಂಬು ಮೆರವಣಿಗೆ ನಡೆಯಿತು.
ದೀಪಾರಾಧನೆ, ಅಲಂಕಾರ ಪೂಜೆ, ಪಡಿ ರಂಗಪೂಜೆ, ದುರ್ಗಾಪೂಜೆ ಹಾಗೂ ಸುಬ್ರಹ್ಮಣ್ಯ ಪೂಜೆ ನಂತರ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಹಾಗೂ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು.
ರಾತ್ರಿ ೧೨ ಗಂಟೆಯಿAದ ೨ ಗಂಟೆಯವರೆಗೆ ಅಗ್ನಿಪೂಜೆ, ೨ ಗಂಟೆಯಿAದ ಬೆಳಿಗ್ಗೆ ೫ ಗಂಟೆಯವರೆಗೆ ಪೊಲಿಪಾಟ್, ಪಾಲ್ಕಿಂಡಿ ತಿರಿ ಉಳಿಚಲ್, ವೆಟ್ಟುಂತಡವುA ನಡೆಯಿತು. ತಾ. ೨೮ ರಂದು (ಇಂದು) ಬೆಳಿಗ್ಗೆ ೫.೩೦ ಗಂಟೆಗೆ ಅಗ್ನಿಕೊಂಡ ಹಾಯುವ ವಿಧಿವಿಧಾನಗಳು ನೆರವೇರಿತು.