ಪೊನ್ನಂಪೇಟೆ, ಡಿ. ೨೮: ಪೊನ್ನಂಪೇಟೆ ಶ್ರೀ ಅಯ್ಯಪ್ಪ ದೇವಾಲಯದಲ್ಲಿ ವಾರ್ಷಿಕ ಮಂಡಲ ಮಹಾ ಪೂಜೋತ್ಸವ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕಾಡ್ಯಮಾಡ ಅಶೋಕ್ ನೇತೃತ್ವದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿತು.
ದೇವಸ್ಥಾನದ ಅರ್ಚಕ ನಾಗರಾಜ್ ಭಟ್ ಅವರ ಮುಂದಾಳತ್ವದಲ್ಲಿ ಬೆಳಿಗ್ಗೆ ಗಣ ಹೋಮ, ನಂತರ ಶ್ರೀ ಅಯ್ಯಪ್ಪ ಸ್ವಾಮಿ ಮೂರ್ತಿಗೆ ವಿವಿಧ ಅಭಿಷೇಕಗಳು, ವಿಶೇಷ ಅಲಂಕಾರ ಪೂಜೆ, ಅಯ್ಯಪ್ಪ ವೃತಧಾರಿಗಳಿಂದ ಮಂಡಲ ಪೂಜೆ, ಭಜನೆ ನಂತರ ಮಹಾಪೂಜೆ ನೆರವೇರಿತು. ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ಅಯ್ಯಪ್ಪ ಸ್ವಾಮಿ ಮೂರ್ತಿಯ ಶೋಭಾಯಾತ್ರೆಯು ಅಯ್ಯಪ್ಪ ದೇವಸ್ಥಾನದಿಂದ ಆರಂಭಗೊAಡು ಪಟ್ಟಣದ ಮುಖ್ಯ ರಸ್ತೆಯಲ್ಲಿ ಕಾನೂರು ಜಂಕ್ಷನ್‌ವರೆಗೂ ಸಾಗಿತು. ಅಯ್ಯಪ್ಪ ವ್ರತ್ತಧಾರಿಗಳ ಭಜನೆ, ದೀಪಹೊತ್ತ ಮಹಿಳೆಯರು ಮತ್ತು ಮಕ್ಕಳು, ಕೇರಳದ ಚಂಡೆ ವಾದ್ಯದೊಂದಿಗೆ ಪಟಾಕಿ ಸಿಡಿಸುವ ಮೂಲಕ ಶೋಭಾಯಾತ್ರೆ ನಡೆಯಿತು.
ಈ ಸಂದರ್ಭ ಭಕ್ತರು ಅಯ್ಯಪ್ಪ ಸ್ವಾಮಿಯ ಉತ್ಸವಮೂರ್ತಿಗೆ ಹಣ್ಣು ಕಾಯಿ ಪೂಜೆ ನೆರವೇರಿಸಿದರು. ಮೆರವಣಿಗೆ ಬಳಿಕ ಶೋಭಾಯಾತ್ರೆಯು ದೇವಸ್ಥಾನಕ್ಕೆ ಹಿಂತಿರುಗಿತು. ದೇವಸ್ಥಾನ ವೇದಿಕೆಯಲ್ಲಿ ಸುವೃತ ನಾಟ್ಯ ಶಾಲಾ ಮಕ್ಕಳಿಂದ ನಾಟ್ಯ ಪ್ರದರ್ಶನ ಏರ್ಪಡಿಸಲಾಗಿತ್ತು.
ಈ ಸಂದರ್ಭ ದೇವಸ್ಥಾನ ಆಡಳಿತ ಮಂಡಳಿಯ ಕಾರ್ಯದರ್ಶಿ ಚಟ್ಟಮಾಡ ಜಯ, ಉಪಾಧ್ಯಕ್ಷ ತೀತಿರ ಸನ್ನು, ಖಜಾಂಚಿ ಎಂ.ಎ. ದಿಲೀಪ್, ಸದಸ್ಯರಾದ ಮಂಜುನಾಥ್, ಕೆ.ಬಿ.ವಿನು, ಎಂ.ಎಸ್.ಅನೀಶ್, ಎಸ್.ಎಸ್.ಮಹೇಶ್, ರಾಜಾ, ಶಿಬಿ, ಸಂದೀಪ್. ಸಾಬು, ವೆಂಕಟೇಶ್, ಸಂತೋಷ್, ಶಶಿ , ರುದ್ರಪ್ಪ, ರಾಘವ, ಉತ್ಸವ ಸಮಿತಿ ಸದಸ್ಯರಾದ ಸುದರ್ಶನ್, ಉಮೇಶ್, ಸುರೇಶ್, ಸುನಿಲ್, ವಿಜು ಹಾಗೂ ಭಕ್ತಾದಿಗಳು, ಮಾಲಾಧಾರಿಗಳು, ಪೊನ್ನಂಪೇಟೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.