ಸುಂಟಿಕೊಪ್ಪ, ಡಿ. ೨೮: ಇಲ್ಲಿನ ಶ್ರೀಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಮಂಡಲ ಪೂಜೋತ್ಸವದ ಅಂಗವಾಗಿ ಶನಿವಾರ ಬೆಳಿಗ್ಗಿನಿಂದ ವಿವಿಧ ಪೂಜಾ ಕೈಂಕರ್ಯಗಳು ನಡೆದವು.
ಗಣಪತಿಹೋಮ, ಕನ್ನಿಮೂಲ ಗಣಪತಿಗೆ ಎಳನೀರು ಅಭಿಷೇಕ, ಚಂಡೆಮೇಳ, ಶ್ರೀ ಅಯ್ಯಪ್ಪ ಸ್ವಾಮಿಗೆ ಪಂಚಾಮೃತ ಅಭಿಷೇಕ, ಅಯ್ಯಪ್ಪ ಸ್ವಾಮಿಗೆ ಮಧ್ಯಾಹ್ನದ ಪೂಜೆ, ಶ್ರೀ ಅಯ್ಯಪ್ಪ ಸ್ವಾಮಿಗೆ ಲಕ್ಷಾರ್ಚನೆ, ಪಲ್ಲ ಪೂಜೆ ನಂತರ ಪಟಾಕಿ ಸಿಡಿಸಲಾಯಿತು. ನಂತರ ಮದ್ಯಾಹ್ನದಿಂದ ಸಂಜೆವರೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ದೇವಸ್ಥಾನದ ಅರ್ಚಕÀ ಗಣೇಶ ಉಪಾಧ್ಯಾಯ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದವು. ಈ ಸಂದರ್ಭ ಅಧ್ಯಕ್ಷ ಬಿ.ಎಂ. ಸುರೇಶ್ (ಪುಟ್ಟ) ಗೌರವಾಧ್ಯಕ್ಷರುಗಳಾದ ಕೆ.ಎ. ಬಾಲಕೃಷ್ಣ, ಮುತ್ತಯ್ಯ, ಸುರೇಶ್ ಗೋಪಿ, ಧನು ಕಾವೇರಪ್ಪ, ಉಪಾಧ್ಯಕ್ಷರುಗಳಾದ ಎಂ. ಮಂಜುನಾಥ್, ಬಿ.ಎ. ಪುನೀತ್, ಬಿ.ಕೆ. ಪ್ರಶಾಂತ್, (ಕೋಕ), ಬಿ.ಎಲ್. ಆನಂದ, ಪ್ರಧಾನ ಕಾರ್ಯದರ್ಶಿ ಎಂ. ಚಂದ್ರ ಹಾಗೂ ಸದಸ್ಯರು ಹಾಜರಿದ್ದರು.