ಐಗೂರು, ಡಿ.೨೯: ಮಾದಾಪುರದ ಗಣಪತಿ ದೇವಾಲಯದದಲ್ಲಿ ೪೯ನೇ ವರ್ಷದ ಮಂಡಲ ಪೂಜೋತ್ಸವವು ನಡೆಯಿತು. ಅರ್ಚಕರಾದ ಪ್ರಕಾಶ್ ನೇತೃತ್ವದಲ್ಲಿ ಗಣಪತಿ ಹೋಮ, ದೀಪಾರಾಧನೆ ಮತ್ತು ಅಭಿಷೇಕ ಪೂಜೆ ನಡೆಯಿತು. ನಂಜರಾಯಪಟ್ಟಣ ಮತ್ತು ಹೊಸಕೋಟೆ ತಂಡದಿAದ ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ ಬಸವೇಶ್ವರ ದೇವಾಲಯದಿಂದ ಮೆರವಣಿಗೆ ನಡೆಯಿತು.

ಮೆರವಣಿಯಲ್ಲಿ ಮಾಲ್ದಾರೆಯ ಶಾಜಿ ತಂಡದ ಚಂಡೆ ವಾದ್ಯ ಜೊತೆಗೆ ಅಯ್ಯಪ್ಪ ಭಕ್ತರ ಘೋಷಣೆಗಳು ಮೊಳಗಿದ್ದವು. ಅನ್ನಸಂತರ್ಪಣೆಯೊAದಿಗೆ ಉತ್ಸವ ಮುಕ್ತಾಯಗೊಂಡಿತು. ಉತ್ಸವ ಸಮಿತಿ ಅಧ್ಯಕ್ಷ ದೇವದಾಸ್, ದೇವಾಲಯದ ಆಡಳಿತ ಮಂಡಳಿಯ ಟಿ.ಪಿ.ಸಂದೇಶ್, ನಾಪಂಡ ಉಮೇಶ್, ಅಶೋಕ, ಕರ್ನಾಟಕ ಮಿಕ್ಸ್ ಬಾಕ್ಸಿಂಗ್ ಅಸೋಸಿಯೇಷನ್ ಗೌರವಾಧ್ಯಕ್ಷ ಕೆ .ಎನ್. ಪದ್ಮನಾಭ, ಹಿಂದೂ ಜಾಗರಣಾ ವೇದಿಕೆಯ ಸುನಿಲ್ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.