ಶ್ರೀಮAಗಲ, ಡಿ. ೨೯: :ಗೋಣಿಕೊಪ್ಪ ಕಾವೇರಿ ಕಾಲೇಜಿನ ರಾಜ್ಯ ಶಾಸ್ತ್ರ ಉಪನ್ಯಾಸಕಿ ಡಾ. ಕಾವ್ಯ ಸಿ.ಟಿ ಅವರು ಒಡಿಸ್ಸಾದ ಭುವನೇಶ್ವರ್‌ನಲ್ಲಿ ನಡೆದ ೬೨ನೇ ಅಖಿಲ ಭಾರತ ರಾಜ್ಯಶಾಸ್ತ್ರ ಸಮ್ಮೇಳನ ಮತ್ತು ಅಂತರರಾಷ್ಟ್ರೀಯ ಸೆಮಿನಾರ್‌ನಲ್ಲಿ ಪ್ರಬಂಧ ಮಂಡಿಸಿದರು.

ಭುವನೇಶ್ವರ್‌ನ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ನಲ್ಲಿ ನಡೆದ ಸಮ್ಮೇಳನ ಮತ್ತು ಅಂತರರಾಷ್ಟ್ರೀಯ ಸೆಮಿನಾರ್‌ನಲ್ಲಿ ಭಾಗವಹಿಸಿದ್ದ ಅವರು ಪದವಿ ವಿದ್ಯಾರ್ಥಿಗಳಲ್ಲಿ ಸೈಬರ್ ಕ್ರೈಮ್ ಮತ್ತು ಭದ್ರತೆಯ ಅರಿವಿನ ಬಗ್ಗೆ ವಿಮರ್ಷೆಯ ಪ್ರಬಂಧ ಪ್ರಸ್ತುತ ಪಡಿಸಿದರು. ಇವರು ಟಿ. ಶೆಟ್ಟಿಗೇರಿ ಗ್ರಾಮದ ಚೆಟ್ಟಂಡ ತಿಮ್ಮಯ್ಯ (ರಘು) ಮತ್ತು ಪಾರ್ವತಿ ದಂಪತಿಯ ಪುತ್ರಿಯಾಗಿದ್ದು, ಶ್ರೀಮಂಗಲ ಕುರ್ಚಿ ಗ್ರಾಮದ ಕೊಣೇರಿರ ಬೋಪಣ್ಣ ಅವರ ಪತ್ನಿಯಾಗಿದ್ದಾರೆ.