ನಾಪೋಕ್ಲು, ಡಿ. ೨೯: ವೀರಾಜಪೇಟೆ ಗೌಡ ಸಮಾಜದ ವಾರ್ಷಿಕ ಮಹಾಸಭೆ ಸಮಾಜದ ಸಭಾಂಗಣದಲ್ಲಿ ಸಮಾಜದ ಅಧ್ಯಕ್ಷ ಮುಕ್ಕಾಟಿ ವಾಸು ಗಣಪತಿ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಸಭೆಯಲ್ಲಿ ಸಮಾಜದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಯಿತು. ಪ್ರಸಕ್ತ ಆಡಳಿತ ಮಂಡಳಿಯನ್ನು ಪುನರ್ ರಚನೆ ಮಾಡಲು ತೀರ್ಮಾನಿಸಿ, ಹೊಸ ಆಡಳಿತ ಮಂಡಳಿಯಲ್ಲಿ ಸಮಾಜದ ವ್ಯಾಪ್ತಿಯ ಎಲ್ಲಾ ವಲಯಗಳಿಗೆ ಅವಕಾಶ ಕಲ್ಪಿಸಲು ತೀರ್ಮಾನಿಸಲಾಯಿತು.
ಪ್ರಸಕ್ತ ಆಡಳಿತ ಮಂಡಳಿಯನ್ನು ವಿಸರ್ಜಿಸಲಾಯಿತು. ಹೊಸ ಆಡಳಿತ ಮಂಡಳಿ ರಚನೆಗಾಗಿ ಸಮಾಜದ ಅಧ್ಯಕ್ಷ ವಾಸು ಗಣಪತಿ ನೇತೃತ್ವದಲ್ಲಿ ಏಳು ಜನರ ಸಮಿತಿಯನ್ನು ರಚಿಸಲಾಯಿತು. ಮಾತ್ರವಲ್ಲದೆ ಮುಂದಿನ ೧೫ ದಿನಗಳ ಒಳಗಾಗಿ ಹೊಸ ಆಡಳಿತ ಮಂಡಳಿಯ ರಚನೆಗಾಗಿ ಮತ್ತೊಮ್ಮೆ ಸಭೆ ಸೇರಲು ತೀರ್ಮಾನಿಸಲಾಯಿತು.
ಈ ಸಂದರ್ಭ ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ ಮತ್ತು ಉಪಾಧ್ಯಕ್ಷ ಡಾ. ರಾಜೇಶ್ ತೇನನ, ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.