ಮಡಿಕೇರಿ, ಡಿ. ೨೯: ಕೊಡಗಿನ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಕೊಡಗು ಜಾವಾ ಯೆಜ್ಡಿ ಮೋಟಾರ್ ಸೈಕಲ್ ಕ್ಲಬ್ ವತಿಯಿಂದ ಮಾಂದಲ್ಪಟ್ಟಿ ಹಾಗೂ ಕೋಟೆ ಬೆಟ್ಟ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ ಮತ್ತು ಪ್ಲಾಸ್ಟಿಕ್ ಮುಕ್ತ ಜಾಗೃತಿ ಕಾರ್ಯಕ್ರಮ ನಡೆಯಿತು.
ಕ್ಲಬ್ನ ಸಂಸ್ಥಾಪಕ ಕ್ಯಾಪ್ಟನ್ ಅಲ್ಲಾರಂಡ ದಿ. ಅಚಲ್ ಬೋಪಣ್ಣ ಅವರ ಪುಣ್ಯಸ್ಮರಣೆಯ ಅಂಗವಾಗಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಕ್ಲಬ್ನ ಸದಸ್ಯರು ಶ್ರಮದಾನದ ಮೂಲಕ ಟನ್ಗಟ್ಟಲೆ ಕಸವನ್ನು ವಿಲೇವಾರಿ ಮಾಡಿದರು. ಕಾರ್ಯಕ್ಕೆ ಮಕ್ಕಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ಹಾಗೂ ವ್ಯಾಲಿ ಡ್ಯೂ ಹೋಂಸ್ಟೇ ಮಾಲೀಕÀ ಹಂಚೆಟ್ಟಿರ ಮುದ್ದಪ್ಪ ಅವರು ಕೈಜೋಡಿಸಿದರು. ಈ ವೇಳೆ ಮಾತನಾಡಿದ ಕ್ಲಬ್ನ ಪ್ರಮುಖರು, ಕೊಡಗಿನ ಸೌಂದರ್ಯವನ್ನು ಸವಿಯಲು ಬರುವ ಪ್ರವಾಸಿಗರು ಜವಾಬ್ದಾರಿಯುತವಾಗಿ ವರ್ತಿಸಬೇಕು. ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯು ಕಟ್ಟುನಿಟ್ಟಿನ ಚೆಕ್ಪೋಸ್ಟ್ ಅಳವಡಿಸ ಬೇಕು. ಪ್ರವಾಸಿ ವಾಹನಗಳನ್ನು ತಪಾಸಣೆ ನಡೆಸಿ, ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಬೇಕು ಎಂದು ಒತ್ತಾಯಿಸಿದರು. ಅಭಿಯಾನದಲ್ಲಿ ಕ್ಲಬ್ನ ನೂರಾರು ಸದಸ್ಯರು ಪಾಲ್ಗೊಂಡು, "ನಮ್ಮ ಹೆಜ್ಜೆ ಗುರುತುಗಳು ಮಾತ್ರ ಇಲ್ಲಿರಲಿ, ಪ್ಲಾಸ್ಟಿಕ್ ಕಸವಲ್ಲ" ಎಂಬ ಘೋಷಣೆಯೊಂದಿಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.