ಚೆಟ್ಟಳ್ಳಿ, ಡಿ. ೨೯: ಚೆಟ್ಟಳ್ಳಿ ಅಯ್ಯಪ್ಪ ದೇವಸ್ಥಾನದ ವಾರ್ಷಿಕ ಮಹೋತ್ಸವ ಶ್ರದ್ದಾಭಕ್ತಿಯಿಂದ ನಡೆಯಿತು. ಪೂರ್ವಾಹ್ನ ೭ರಿಂದ ಗಣಪತಿ ಹವನ, ಸಾಮೂಹಿಕ ಸತ್ಯ ನಾರಾಯಣ ಪೂಜೆ, ಮಂಗಳಾರತಿ ಮತ್ತು ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನೆರವೇರಿತು.
ಸಂಜೆ ಶ್ರೀ ವಿನಾಯಕ ದೇವಸ್ಥಾನದಿಂದ ದೇವರ ಅಲಂಕೃತ ಮಂಟಪದೊAದಿಗೆ ಶ್ರೀ ಅಯ್ಯಪ್ಪ ದೇವಸ್ಥಾನದವರೆಗೆ ಶೋಭಾಯಾತ್ರೆ ನಡೆಯಿತು. ರಾತ್ರಿ ೮ ಗಂಟೆಯಿAದ ದೀಪಾರಾಧನೆ, ರಂಗಪೂಜೆ, ಮಹಾ ಪೂಜೆಯ ನಂತರ ಅನ್ನಸಂತರ್ಪಣೆ, ಭಜನೆ, ಇತರ ನೃತ್ಯ ಕಾರ್ಯಕ್ರಮಗಳು ನಡೆದವು.
ದೇವಾಲಯದ ಆವರಣದಲ್ಲಿರುವ ಅಶ್ವಥ ಮರಕ್ಕೆ ಮೂರನೇ ವರ್ಷದ ವಿವಾಹ ವಾರ್ಷಿಕ ಪೂಜೆಯನ್ನು ಎಸ್.ಎಲ್.ಎನ್.ನ ವ್ಯವಸ್ಥಾಪಕ ಕಣ್ಣನ್ ಅವರ ವತಿಯಿಂದ ನೆರವೇರಿಸಲಾಯಿತು.
ದೇವಾಲಯ ಸಮಿತಿಯ ಪ್ರತಿಷ್ಠಾಪನ ಸಮಿತಿಯ ಅಧ್ಯಕ್ಷರಾಗಿ ೪೦ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸೋಮೆಯಂಡ ದಿಲೀಪ್ ಅಪ್ಪಚ್ವು ಅವರನ್ನು ದೇವಾಲಯದ ಉತ್ಸವ ಸಮಿತಿಯ ಅಧ್ಯಕ್ಷ ಐಚೆಟ್ಟಿರ ಶಿವು ಸುಬ್ಬಯ್ಯ ಹಾಗೂ ಸಮಿತಿಯವರು ಸನ್ಮಾನಿಸಿ ಗೌರವಿಸಿದರು.