ಕೂಡಿಗೆ, ಡಿ. ೨೯: ಕುಶಾಲನಗರ ತಾಲೂಕು ಗ್ರಾಮಾಂತರ ಪ್ರದೇಶಗಳಲ್ಲಿ ಕೊಳವೆ ಬಾವಿಯ ನೀರನ್ನು ಅವಲಂಬಿಸಿ ಅರೆ ಮೆಕ್ಕೆಜೋಳ ಬೆಳೆಯಲು ರೈತರು ತೊಡಗಿರುವುದು ಕಂಡುಬರುತ್ತಿದೆ.

ಈಗಾಗಲೇ ಹಾರಂಗಿ ನಾಲೆಯಲ್ಲಿ ನೀರು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಕುಶಾಲನಗರ ತಾಲೂಕು ವ್ಯಾಪ್ತಿಯ ಕೂಡಿಗೆ, ಹೆಬ್ಬಾಲೆ ಶಿರಂಗಾಲ, ತೊರೆನೂರು, ಅಳುವಾರ, ಸಿದ್ದಲಿಂಗಪುರ ಸೇರಿದಂತೆ ೫೦ಕ್ಕೂ ಹೆಚ್ಚು ಉಪ ಗ್ರಾಮಗಳಲ್ಲಿ ಆರೆ ಬೇಸಾಯವಾದ ಮೆಕ್ಕೆಜೋಳದ ಬೆಳೆಯನ್ನು ಬೆಳೆಯಲು ಆರಂಭಿಸಿದ್ದಾರೆ. ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚು ಹೈನುಗಾರಿಕೆಯಲ್ಲಿ ತೊಡಗಿರುವ ರೈತರ ಹಸುಗಳಿಗೆ ಮೆಕ್ಕೆಜೋಳವು ಬಹು ಮುಖ್ಯ ಅಹಾರವಾಗಿರುವುದರಿಂದ ಮೆಕ್ಕೆಜೋಳದ ಬೇಸಾಯದಲ್ಲಿ ತೊಡಗಿದ್ದಾರೆ.