ಸೋಮವಾರಪೇಟೆ, ಡಿ. ೩೦: ಸಮೀಪದ ಕಾಜೂರು ಅರಣ್ಯ ಪ್ರದೇಶದಲ್ಲಿ ನಡೆದಿರುವ ತೇಗದ ಮರಗಳ ಕಳ್ಳತನ ಪ್ರಕರಣಕ್ಕೆ ಸಂಬAಧಿಸಿದAತೆ ಅರಣ್ಯ ಇಲಾಖಾಧಿಕಾರಿಗಳು, ಅರಣ್ಯ ಪ್ರವೇಶ ಸೇರಿದಂತೆ ಸುತ್ತಮುತ್ತಲ ಸ್ಥಳಗಳಲ್ಲಿ ಶೋಧಕಾರ್ಯ ನಡೆಸುತ್ತಿದ್ದಾರೆ.
ಅರಣ್ಯದೊಳಗೆ ಕಳುವಾಗಿರುವ ತೇಗದ ಮರಗಳ ಬುಡಗಳನ್ನು ಗುರುತಿಸುತ್ತಿರುವ ಅರಣ್ಯ ಇಲಾಖಾಧಿಕಾರಿಗಳು, ಕಾಜೂರು ಸುತ್ತಮುತ್ತಲಿನ ಮನೆ, ತೋಟ ಪ್ರದೇಶಗಳಲ್ಲೂ ಹುಡುಕಾಟ ಆರಂಭಿಸಿದ್ದಾರೆ. ಈ ಮಧ್ಯೆ ಪ್ರಕರಣದಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಆರ್ಆರ್ಟಿ ಸಿಬ್ಬಂದಿ ವಿನೋದ್ ವಿಚಾರಣೆಗೆ ಹಾಜರಾಗಿದ್ದಾನೆ.
ಅರಣ್ಯ ಇಲಾಖಾ ಅಧಿಕಾರಿಗಳು ತನಿಖೆ ಮುಂದುವರೆಸಿದ್ದು, ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳ ಹೆಸರು ಕೇಳಿ ಬಂದಿದೆ. ಸೋಮವಾರಪೇಟೆ ಪಟ್ಟಣದ ನಾಸೀರ್ ಹಾಗೂ ಕಾಜೂರಿನ ಅಜಿತ್ ಎಂಬವರುಗಳು ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ತನಿಖಾಧಿಕಾರಿಗಳಿಗೆ ಮಾಹಿತಿ ಲಭಿಸಿದ್ದು, ಅವರುಗಳನ್ನು ವಶಕ್ಕೆ ಪಡೆದ ನಂತರವಷ್ಟೇ ಕಳುವಾಗಿರುವ ಸಂಪೂರ್ಣ ಮರಗಳನ್ನು ವಶಕ್ಕೆ ಪಡೆಯಲು ಸಾಧ್ಯ ಎನ್ನಲಾಗಿದೆ. ಸಿಬ್ಬಂದಿಗಳು ಕಾರ್ಯಾಚರಣೆ ಮುಂದುವರೆಸುತ್ತಿದ್ದAತೆ ಯಡವಾರೆಯ ದಯಾನಂದ ಅವರಿಗೆ ಸೇರಿದ ಮನೆಯಿಂದ ೧೫ ಸಿಎಫ್ಟಿ ತೇಗದ ನಾಟಾಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಮರಗಳಿಗೆ ದಾಖಲೆ ಪತ್ರಗಳು ತಮ್ಮ ಬಳಿಯಲ್ಲಿವೆ ಎಂದು ದಯಾನಂದ್ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ. ದಾಖಲೆಗಳನ್ನು ಕಚೇರಿಗೆ ಹಾಜರುಪಡಿಸುವಂತೆ ನಿರ್ದೇಶನ ನೀಡಿದ್ದು, ಮರಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದರೊಂದಿಗೆ ವಿಶ್ವನಾಥ್ ಅವರಿಗೆ ಸೇರಿದ ಜಾಗದಿಂದ ನಂದಿ ಸೇರಿದಂತೆ ಇತರ ಜಾತೀಯ ಮರಗಳನ್ನು ಫಾರೆಸ್ಟ್ ವಿಜಿಲೆನ್ಸ್ ತಂಡದವರು ವಶಕ್ಕೆ ಪಡೆದಿದ್ದಾರೆ. ಈ ಮರಗಳಿಗೂ ಬೋನೋಫೈಡ್ ಇದೆ ಎಂಬುದಾಗಿ ತಿಳಿಸಿದ್ದು, ಮರದ ಬುಡಗಳನ್ನು ತೋರಿಸಿ, ದಾಖಲೆಗಳನ್ನು ಹಾಜರುಪಡಿಸಲು ಸೂಚಿಸಲಾಗಿದೆ. ಕಾಜೂರಿನ ಅರಣ್ಯದಲ್ಲಿ ಅವ್ಯಾಹತವಾಗಿ ನಡೆದಿರುವ ತೇಗದ ಮರಗಳ ಕಳ್ಳತನ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಅರಣ್ಯ, ಜೀವಿಶಾಸ್ತç ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅವರು ಅರಣ್ಯ ಪಡೆಯ ಮುಖ್ಯಸ್ಥರಾದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದು, ಪ್ರತಿಯನ್ನು ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ರವಾನಿಸಿದ್ದಾರೆ.
ಮಡಿಕೇರಿ ಪ್ರಾದೇಶಿಕ ವಿಭಾಗದ, ಸೋಮವಾರಪೇಟೆ ವಲಯ ವ್ಯಾಪ್ತಿಯ ಮೀಸಲು ಅರಣ್ಯ ಪ್ರದೇಶದಲ್ಲಿ ಅರಣ್ಯ ಭೂಮಿಯಲ್ಲಿನ ಬೆಲೆಬಾಳುವ ೩೦ಕ್ಕೂ ಅಧಿಕ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಲಾಗಿರುವ ಪ್ರಕರಣದಲ್ಲಿ, ಅರಣ್ಯ ಅಧಿಕಾರಿಗಳು ಪ್ರಕರಣ ದಾಖಲಿಸಿರುವುದು ಸರಿಯಷ್ಟೆ. ಆದರೆ, ಸದರಿ ಪ್ರಕರಣದಲ್ಲಿ ಅರಣ್ಯ ಇಲಾಖೆಯಿಂದ ಸೂಕ್ತವಾದ ಕಾನೂನು ಕ್ರಮ ಜರುಗಿಸದ ಕುರಿತು ಮತ್ತು ಇಲಾಖಾ ಅಧಿಕಾರಿಗಳ ನಿರ್ಲಕ್ಷ್ಯ, ಕರ್ತವ್ಯ ಲೋಪ, ಅಧಿಕಾರ ದುರುಪಯೋಗ, ಅಕ್ರಮದಂತಹÀ ಅನುಮಾನ ವ್ಯಕ್ತಪಡಿಸಿ, ಮಾಧ್ಯಮಗಳಲ್ಲಿ ವರದಿಯಾಗಿರುವುದು ನನ್ನ ಗಮನಕ್ಕೆ ಬಂದಿರುತ್ತದೆ. ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ, ಸದರಿ ಪ್ರಕರಣದ ಕುರಿತು ಅರಣ್ಯ ಸಂಚಾರಿ ದಳದಿಂದ ತನಿಖೆ ನಡೆಸಿ, ಪ್ರಾಥಮಿಕ ವರದಿಯನ್ನು ಒಂದು ವಾರದೊಳಗಾಗಿ ಸಲ್ಲಿಸಲು ಹಾಗೂ ಸದರಿ ಪ್ರಕರಣದಲ್ಲಿ ಈವರೆಗೆ ಕೈಗೊಳ್ಳಲಾಗಿರುವ ಕ್ರಮಗಳು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ವರದಿಯೊಂದಿಗೆ ಕಡತ ಮಂಡಿಸಬೇಕು’ ಎಂದು ಲಿಖಿತ ಆದೇಶ ನೀಡಿದ್ದಾರೆ.
ಹೀಗಾಗಿ ಅರಣ್ಯ ಇಲಾಖೆ ತೇಗದ ಮರ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಒಂದೆಡೆ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿಗಳ ತಂಡ ಮತ್ತೊಂದೆಡೆ ಅರಣ್ಯ ಸಂಚಾರಿ ದಳ ಕಾರ್ಯಾಚರಣೆ ನಡೆಸುತ್ತಿದೆ. ಈ ನಡುವೆ ಪ್ರಕರಣದಲ್ಲಿ ಆರೋಪಿಗಳ ಸಂಖ್ಯೆ ೧೦ಕ್ಕೆ ಏರಿಕೆಯಾಗಿದೆ. ೮ ಮಂದಿ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದಾರೆ.