ಸುಂಟಿಕೊಪ್ಪ, ಡಿ. ೩೦: ಭಾರತವು ಹಿಂದೂ ರಾಷ್ಟçವಾಗದೆ. ಜಾತ್ಯತೀತ ರಾಷ್ಟçವಾಗಿ ಉಳಿದಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಸಮಾಜದಲ್ಲಿ ಧರ್ಮ ಶಿಕ್ಷಣದ ಕೊರತೆಯಿಂದ ಹಿಂದೂ ವಿರೋಧಿ ನೀತಿ ಮತ್ತು ಸಾಮಾಜಿಕ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು ಇದು ಮುಂದಿನ ದಿನಗಳಲ್ಲಿ ಹಿಂದೂ ಸಮಾಜಕ್ಕೆ ಅಪಾಯವನ್ನು ತಂದೊಡ್ಡಲಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಸಂಚಾಲಕ ಡಾ. ಪ್ರಣವ್ ಮಲ್ಯ ಹೇಳಿದ್ದಾರೆ.
ಸುಂಟಿಕೊಪ್ಪದ ಗುಂಡುಗುಟ್ಟಿ ಶ್ರೀ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೋಜಿತವಾಗಿದ್ದ ಹಿಂದೂ ರಾಷ್ಟç ಜಾಗೃತಿ ಸಭೆಯಲ್ಲಿ ಹಿಂದೂ ರಾಷ್ಟçದ ಅವಶ್ಯಕತೆ ಕುರಿತು ಮಾತನಾಡಿದ ಅವರು ಜಾತ್ಯತೀತ ರಾಷ್ಟçದ ಹೆಸರಿನಲ್ಲಿ ಅಲ್ಪಸಂಖ್ಯಾತರ ರಕ್ಷಣೆ ಎಂದುಕೊAಡು ಕಾನೂನು ಮತ್ತು ಸಂವಿಧಾನ ದುರುಪಯೋಗ ಆಗುತ್ತದೆ.
ಆಂಗ್ಲ ಶಿಕ್ಷಣ ಮತ್ತು ಅವರು ನೀಡಿದ ಭಾರತ ಸುಳ್ಳು ಇತಿಹಾಸದ ಹಿನ್ನೆಲೆಯಲ್ಲಿ ಸ್ವಾತಂತ್ರö್ಯ ಹೋರಾಟಗಾರರಾಗಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರಾಗಲಿ ನಮ್ಮ ಯುವಜನತೆಗೆ ಆದರ್ಶರಾಗಿ ಉಳಿದಿಲ್ಲ. ಬದಲಿಗೆ ಸಿನಿಮಾ ನಟ, ನಟಿಯರು, ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸಿಕೊಂಡಿರುವ ಮಂದಿಯನ್ನು ಅನುಕರಿಸುತ್ತಿದ್ದಾರೆ. ಧರ್ಮ ನಿರಾಪೇಕ್ಷಣಾ ಜಾತ್ಯತೀತ ಸಮಾನ ನ್ಯಾಯ ಮರೀಚಿಕೆಯಾಗಿದೆ. ಇದರ ವಿರುದ್ಧ ಧ್ವನಿ ಎತ್ತಬೇಕಾಗಿದೆ ಎಂದು ಅವರು ಕರೆ ನೀಡಿದರು.
ಮತ್ತೋರ್ವ ಸಂಚಾಲಕ ದೀಪಾ ತಿಲಕ್ ಮಾತನಾಡಿ, ನಾವು ಜನ್ಮದಿಂದ ಹಿಂದೂ ಆದರೆ ಸಾಲದು ನಮ್ಮ ಕೆಲಸಗಳಿಂದಲೂ ಹಿಂದೂವಾಗಬೇಕು. ಭಾರತೀಯರು ಹಿಂದೂ ಎಂದರೆ ಸರ್ವರಿಗೂ ಒಳಿತನ್ನು ಬಯಸುವ, ದರ್ಮಗುಣಗಳನ್ನು ದೂರ ಮಾಡಿ ಸಾತ್ವಿಕತೆಯನ್ನು ಹೊಂದಿರುವದು ಎಂದು ವಿಶ್ಲೇಷಿಸಿದ ಅವರು, ಯುವಜನಾಂಗ ಸನಾತನ ಧರ್ಮವನ್ನು, ಮೂಢನಂಬಿಕೆಗಳು, ಹಳೆಯ ವಿಚಾರಗಳು ಎಂದು ಆಸಕ್ತಿ ತೋರುತ್ತಿಲ್ಲ. ಆದರೆ ಹಿಂದೂ ಸಂಸ್ಕೃತಿ ಆಚಾರ-ವಿಚಾರಗಳು ಹುಟ್ಟಿನಿಂದ ಹಿಡಿದು ಸಾವಿನವರೆಗೆ ನಮ್ಮ ಆಚರಣೆಗಳು ವೈಜ್ಞಾನಿಕ ಹಿನ್ನೆಲೆಯನ್ನು ಹೊಂದಿವೆ ಎಂದು ವಿಜ್ಞಾನ ಸಾಬೀತುಪಡಿಸಿವೆ. ನಮ್ಮಲ್ಲಿ ಆಧುನಿಕ ಜೀವನ ಎಲ್ಲವನ್ನು ನೀಡಿದೆ. ಆದರೆ ನಮ್ಮ ಹಿರಿಯರು ಬದುಕಿದ್ದ ಸಾರ್ಥಕ ಜೀವನವನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ವಿಷಾದಿಸಿದರು. ಮನೆಯಲ್ಲಿ ಮಕ್ಕಳಿಗೆ ಧರ್ಮ ಶಿಕ್ಷಣ ಸಂಸ್ಕಾರ ನೀಡಿ ಬೆಳೆಸಬೇಕೇ ಹೊರತು ಮೊಬೈಲ್‌ಕೊಟ್ಟು ಊಟ ಮಾಡಿಸುವುದಲ್ಲ ಎಂದು ಮಾರ್ಮಿಕವಾಗಿ ಹೇಳಿದರು. ಪಾಶ್ಚಾತ್ಯ ಸಂಸ್ಕೃತಿಯಲ್ಲಿ ತಂದೆ-ತಾಯAದಿರ ದಿನ, ಸ್ನೇಹಿತರ ದಿನ ಹೀಗೆ ಡೇ ಸಂಸ್ಕೃತಿ ಇದೆ. ಆದರೆ ಹಿಂದೂ ಸಂಸ್ಕೃತಿಯಲ್ಲಿ ಪ್ರತಿದಿನವೂ ವಿಶೇಷ ಎಂಬುದನ್ನು ನಾವು ನಮ್ಮ ಯುವಜನಾಂಗಕ್ಕೆ ಮನದಟ್ಟು ಮಾಡಿಕೊಡಬೇಕಾಗಿದೆ ಎಂದರು.
ಕೊಲ್ಲಿರ ಧರ್ಮಜ ಮಾತನಾಡಿ, ನಮ್ಮಲ್ಲಿ ಸನಾತನ ಧರ್ಮ, ನಮ್ಮ ಶಿಕ್ಷಣ, ಸಾಮಾಜಿಕ ವ್ಯವಸ್ಥೆಯನ್ನು ತಿರುಚಲಾಗಿದೆ. ನಾವಿನ್ನೂ ಪರಕೀಯರ ವಶದಲ್ಲಿದ್ದೇವೆಯೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಹಿಂದೂ ವಿರೋಧಿ ನೀತಿಯ ಬಗ್ಗೆ ನಾವು ಧ್ವನಿ ಎತ್ತಬೇಕಾಗಿದೆ. ಧರ್ಮದ ಬಗ್ಗೆ ಮಾತನಾಡಿದರೆ ಅವರನ್ನು ಒಂದು ರೀತಿ ಸಮಾಜದಲ್ಲಿ ಕಡೆಗಣನೆ ಮಾಡುವುದು ಕಂಡುಬರುತ್ತಿದ್ದು ವಿಷಾದನೀಯ ಸಂಗತಿ. ನಮ್ಮ ಧರ್ಮ ಮತ್ತು ಆಚಾರ, ವಿಚಾರದ ಬಗ್ಗೆ ಇತರರು ಪ್ರಶ್ನೆ ಮಾಡಿದರೆ, ಚರ್ಚೆಗೆ ನಿಂತರೇ ನಮಗೆ ಸಮರ್ಪಕವಾಗಿ ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಧರ್ಮ ಶಿಕ್ಷಣದ ಕೊರತೆ ಎಂದು ಹೇಳಿದ ಅವರು ರಾಜಕೀಯ ಕಾರಣಗಳಿಗಾಗಿ ಸಮಾಜವನ್ನು ಒಡೆದು ಮತಬ್ಯಾಂಕ್ ಮಾಡಿಕೊಳ್ಳುವವರ ಬಗ್ಗೆ ನಾವು ಹೋರಾಟ ನಡೆಸಬೇಕಾಗಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಜ್ಯೋತಿ ಬೆಳಗಿ ಶಂಖನಾದ ಮತ್ತು ರಾಮ ಮಂದಿರದ ಹಿರಿಯ ಆರ್ಚಕ ಹಾ.ಮ. ಗಣೇಶ್ ಶರ್ಮ ವೇದಘೋಷ ಪಠಿಸಿದರು.
ಮಾಂಡವ್ಯ ವಿವೇಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಹಿಂದೂ ಜನಜಾಗೃತಿ ರಮೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಂದೂ ಜನಜಾಗೃತಿ ಸಮಿತಿಯ ವಿಜಯಕುಮಾರ್ ಪ್ರತಿಜ್ಞಾ ವಿಧಿಯನ್ನು ಬೋಧಿಸಿ, ವಂದಿಸಿದರು.