ಮಡಿಕೇರಿ. ಡಿ, ೩೦: ಪ್ರಕೃತಿ ಸೌಂದರ್ಯ ಸಿರಿದೇವಿಯ ಸುಂದರ ಮಡಿಲಿನಲ್ಲಿ ಇರುವ ಕೊಡಗಿನ ಅತೀ ಎತ್ತರದ ಶಿಖರ ತಡಿಯಂಡಮೋಳ್ ಅದ್ಭುತ ಪ್ರವಾಸಿ ತಾಣವಾಗಿದ್ದು, ಈ ಬೆಟ್ಟವನ್ನು ಪ್ರವಾಸಿಗರಿಗೆ ಪರಿಚಯಿಸುವ ದಿಸೆಯಲ್ಲಿ ಸಂಬAಧಪಟ್ಟ ಇಲಾಖೆ ಹಾಗೂ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿಗಳು ಆಶಯ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ ತಾಲೂಕಿನ ನಾಪೋಕ್ಲು ವ್ಯಾಪ್ತಿಯಲ್ಲಿ ಬರುವ ನಾಲ್ಕು ನಾಡು ಅರಮನೆಯ ಮೂಲಕ ಕಡಿದಾದ ಮಾರ್ಗದಲ್ಲಿ ಸಂಚರಿಸುವ ವೇಳೆ ಗಮನ ಸೆಳೆಯುವ ತಡಿಯಂಡಮೋಳ್ ತಾಣದಲ್ಲಿ ಸಂಚರಿಸಿದ ಸ್ವಾಮೀಜಿ ಬೆಟ್ಟ ಸಾಲುಗಳಲ್ಲಿ ಕೊಡಗಿನ ಸಿರಿ ಸಂಪನ್ನತೆ ಕಂಡು ಅಕ್ಷರಶಃ ಮನೋಲ್ಲಾಸಗೊಂಡರು.
ಅರಮೇರಿ ಕಳಂಚೇರಿ ಮಠÀದ ವಿದ್ಯಾಸಂಸ್ಥೆಯ ವಾರ್ಷಿಕ ಉತ್ಸವಕ್ಕೆ ಬಂದಿದ್ದ ಶ್ರೀಗಳು ತಡಿಯಂಡಮೋಳ್ ಬೆಟ್ಟವನ್ನು ವೀಕ್ಷಿಸಲು ಉತ್ಸುಕತೆ ತೋರಿದರು. ಮೊದಲೇ ಚಾರಣಪ್ರಿಯರೂ ಮತ್ತು ಪ್ರಕೃತಿಯ ಅಧ್ಯಯನಶೀಲರೂ ಆಗಿರುವ ಅವರ ಆಶಯದಂತೆ ಅರಮೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಇತರ ಸಂತರು ತಡಿಯಂಡಮೋಳ್ ಚಾರಣಕ್ಕೆ ವ್ಯವಸ್ಥೆಯೊಳಗೆ ಸಿದ್ಧಗಂಗಾ ಶ್ರೀಗಳೊಂದಿಗೆ ಬೆಟ್ಟವನ್ನು ಸುತ್ತಾಡಿಕೊಂಡು ವನದೇವಿಯ ಸಿರಿಯನ್ನು ಬೆಟ್ಟ ಸಾಲಿನ ನಡುವೆ ಕಣ್ಮನ ತುಂಬಿಕೊAಡು ಅಧ್ಯಾತ್ಮಿಕ ಚಿಂತನೆಯ ಮೆಲುಕು ಹಾಕಿದರು. ಸ್ವತಃ ಸಿದ್ದಗಂಗಾ ಬೆಟ್ಟ ಸಹಿತ ಬೇರೆ ಬೇರೆ ಕಡೆಗಳಲ್ಲಿ ಚಾರಣ ಮಾಡಿರುವ ಅವರು ಉತ್ತರ ಭಾರತದ ಟೈಗರ್ ಹಿಲ್ ಹಾಗೂ ಜುನಾಗಡ ಸೇರಿದಂತೆ ಇತರೆಡೆಗಳಲ್ಲಿ ತಮಗಾದ ಚಾರಣದ ಅನುಭವವನ್ನು ಈ ಸಂದರ್ಭದಲ್ಲಿ ಹಂಚಿಕೊAಡರು. ಅಲ್ಲದೆ ತಡಿಯಂಡಮೋಳ್ ಬೆಟ್ಟ ತಪ್ಪಲಿನಲ್ಲಿ ಪ್ರವಾಸಿಗರ ಸಾಮಾನ್ಯ ಭೇಟಿ ಕಂಡು ಬಂದರೂ ಸ್ವಚ್ಚತೆಯನ್ನು ಕಾಪಾಡಿಕೊಂಡು ಬಂದಿರುವ ದೃಶ್ಯ ಸಂತೋಷದಾಯಕ ಎಂದು ಅವರು ಶ್ಲಾಘಿಸಿದರಲ್ಲದೆ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಈ ಬಗ್ಗೆ ಸ್ಥಳೀಯರ ಕಾಳಜಿ ಗಮನ ಸೆಳೆಯಲಿದೆ ಎಂದು ಅಭಿಮಾನ ಹೊರಗೆಡವಿದರು. ಈ ದಿಕ್ಕಿನಲ್ಲಿ ನಾಲ್ಕು ನಾಡು ಅರಮನೆ ಮತ್ತು ತಡಿಯಂಡಮೋಳ್ ಅದ್ಭುತ ಪ್ರವಾಸಿ ತಾಣವನ್ನು ಸರ್ಕಾರ ಹಾಗೂ ಸಂಬAಧಪಟ್ಟ ಇಲಾಖೆ ಅಗತ್ಯ ರೀತಿ ಪ್ರಕೃತಿಯ ಮೂಲ ಸ್ವರೂಪವನ್ನು ಕಾಪಾಡಿಕೊಂಡು ಅಭಿವೃದ್ಧಿ ಮಾಡುವಂತೆಯೂ ಸಿಧ್ಧಗಂಗಾ ಶ್ರೀಗಳು ಸಲಹೆ ಮಾಡಿದರು.
ನಾಲ್ಕು ನಾಡು ಅರಮನೆ - ಕೇಂದ್ರಕ್ಕೆ ಪತ್ರ
ಶತಮಾನಗಳ ಹಿಂದಿನ ಕೊಡಗಿನ ರಾಜ ಪರಂಪರೆಯ ವಿಹಾರ ಧಾಮವಾಗಿದ್ದ ಕಕ್ಕಬ್ಬೆ ಬಳಿಯ ಐತಿಹಾಸಿಕ ನಾಲ್ಕುನಾಡು ಅರಮನೆ ನಿರ್ವಹಣೆ ಇಲ್ಲದೆ ತೀರಾ ನಿರ್ಲಕ್ಷö್ಯಕ್ಕೆ ಒಳಗಾಗಿದೆ ಎಂದು ತುಮಕೂರು ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಕೊಡಗು ಜಿಲ್ಲೆಯ ತಡಿಯಂಡಮೋಳ್ ಬೆಟ್ಟಕ್ಕೆ ಇತರ ಸಂತರೊಡಗೂಡಿ ಚಾರಣ ಬಂದಿದ್ದ ಅವರು ಈ ವೇಳೆ ನಾಲ್ಕು ನಾಡು ಅರಮನೆಗೆ ಸಂದರ್ಶಿಸಿ ಅಲ್ಲಿನ ಪರಿಸ್ಥಿತಿ ನೋಡಿ ತುಂಬಾ ಬೇಸರ ವ್ಯಕ್ತಪಡಿಸಿದರು. ಈಗಾಗಲೇ ಪ್ರವಾಸಕ್ಕೆ ಹೆಸರು ಪಡೆದಿರುವ ಕೊಡಗು ಜಿಲ್ಲೆಯಲ್ಲಿ ನಾಲ್ಕುನಾಡು ಅರಮನೆಯಂತಹ ತಾಣಗಳನ್ನು ಅತ್ಯಂತ ಜವಾಬ್ದಾರಿಯುತ ರೀತಿ ಸಂಬAಧÀಪಟ್ಟ ಇಲಾಖೆ ಹಾಗೂ ಸರ್ಕಾರ ನೋಡಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು.
ತೀರಾ ಅಪರೂಪದ ಶೈಲಿಯಲ್ಲಿ ಮತ್ತು ಪುರಾತನ ತೈಲ ಚಿತ್ರಗಳ ಸಹಿತ ನಿರ್ಮಿಸಿರುವ ನಾಲ್ಕು ನಾಡು ಅರಮನೆಗೆ ದೇಶ ವಿದೇಶಗಳ ಪ್ರವಾಸಿಗರು ಭೇಟಿ ನೀಡುತ್ತಾರೆ ಎಂದು ಕೇಳಲ್ಪಟ್ಟೆ. ಹಾಗಾಗಿ ಕುತೂಹಲದಿಂದ ವೀಕ್ಷಿಸಲು ಬರಬೇಕಾಯಿತು ಎಂದು ವ್ಯಾಖ್ಯಾನಿಸಿದ ಸ್ವಾಮೀಜಿ ಅರಮನೆ ನಿರ್ವಹಣೆ ಇಲ್ಲದೆ ಕಡೆಗಣಿಸಿರುವದು ನೋವುಂಟು ಮಾಡಿದೆ ಎಂಬುದಾಗಿ ಮಾರ್ನುಡಿದರು. ಈ ಸಂಬAಧ ಕರ್ನಾಟಕ ಸರ್ಕಾರ ಹಾಗೂ ಭಾರತದ ಪ್ರಧಾನಿ ಸೇರಿದಂತೆ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ತಾವು ಖುದ್ದಾಗಿ ಪತ್ರ ಬರೆದು ಗಮನಕ್ಕೆ ತರುವುದಾಗಿ ಅವರು ಹೇಳಿದರು.
ಅರಮನೆ ವೀಕ್ಷಿಸಲು ಬಂದಿದ್ದ ಇತರ ಸಂತರು ಕೂಡ ಯಾವುದೇ ನಿರ್ವಹಣೆ ಇಲ್ಲದೆ ಈ ತಾಣ ಕಡೆಗಣಿಸಲಾಗಿದೆ ಎಂದು ಬೇಸರ ತೋಡಿಕೊಂಡರು. ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರು ನಾಲ್ಕುನಾಡು ಅರಮನೆಯ ಪರಂಪರೆ ಬಗ್ಗೆ ಪರಿಚಯ ಮಾಡಿಕೊಟ್ಟರು.