ಕೋವರ್ ಕೊಲ್ಲಿ ಇಂದ್ರೇಶ್

ನವದೆಹಲಿ, ಜ.೧ : ೨೦೨೫ ರಲ್ಲಿ ಭಾರತದ ಕಾಫಿ ರಫ್ತು ಮೌಲ್ಯದ ದೃಷ್ಟಿಯಿಂದ ಈ ವರ್ಷದ ರಫ್ತು ಮೌಲ್ಯ ೨ ಬಿಲಿಯನ್ ಡಾಲರ್‌ಗಳನ್ನು ದಾಟುವ ನಿರೀಕ್ಷೆಯಿದೆ, ಇದು ಕಳೆದ ಐದು ವರ್ಷಗಳಲ್ಲಿ ದ್ವಿಗುಣಗೊಂಡಿದೆ. ಕಾಫಿ ಉತ್ಪಾದನಾ ದೇಶಗಳಲ್ಲಿ ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಅಂತರ್ರಾಷ್ಟಿçÃಯ ಮಾರುಕಟ್ಟೆಗೆ ಕಾಫಿ ಸರಬರಾಜು ಕಡಿತವಾಗಿದ್ದು ಮತ್ತು ಜಾಗತಿಕ ಬೆಲೆಗಳಲ್ಲಿನ ಹೆಚ್ಚಳದಿಂದಾಗಿ ದೇಶದ ಕಾಫಿ ರಫ್ತು ಮೌಲ್ಯ ಹೆಚ್ಚಳಗೊಂಡಿದೆ ಎಂದು ಕಾಫಿ ತಜ್ಞರು ಹೇಳಿದ್ದಾರೆ.

ಕಾಫಿ ಮಂಡಳಿಯು ನೀಡಿದ ಪರವಾನಗಿಗಳ ಆಧಾರದ ಮೇಲೆ, ೨೦೨೫ರ ಡಿಸೆಂಬರ್ ೧೬ ರವರೆಗೆ ರಫ್ತು ಮಾಡಲಾದ ಕಾಫಿ ಮೌಲ್ಯ ೧೯೬೮ ಮಿಲಿಯನ್ ಡಾಲರ್‌ಗಳಾಗಿದ್ದು, ೨೦೨೪ರಲ್ಲಿ ಇದೇ ಸಮಯದಲ್ಲಿ ೧೬೩೭ ಮಿಲಿಯನ್ ಡಾಲರ್‌ಗಳಷ್ಟು ರಫ್ತು ಮಾಡಲಾಗಿದ್ದು ಈ ವರ್ಷ ಶೇ. ೨೧ರಷ್ಟು ಹೆಚ್ಚಾಗಿದೆ. ರೂಪಾಯಿ ಮೌಲ್ಯದಲ್ಲಿ ಇಲ್ಲಿಯವರೆಗೆ ಕಾಫಿ ರಫ್ತು ಶೇ. ೨೬ರಷ್ಟು ಹೆಚ್ಚಾಗಿದ್ದು, ರಫ್ತು ಮೌಲ್ಯ ೧೭,೧೦೬ ಕೋಟಿ ರೂಪಾಯಿ ಮೀರಿದ್ದು ಹಿಂದಿನ ವರ್ಷ ಇದೇ ಸಮಯದಲ್ಲಿ ೧೩,೬೨೪ ಕೋಟಿ ರೂಪಾಯಿ ಮೌಲ್ಯದ ಕಾಫಿ ರಫ್ತು ಮಾಡಲಾಗಿತ್ತು.

ಈ ಕ್ಯಾಲೆಂಡರ್ ವರ್ಷದಲ್ಲಿ ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ ನಾವು ೨ ಬಿಲಿಯನ್ ಡಾಲರ್‌ಗಳನ್ನು ಮೀರುತ್ತೇವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇತ್ತೀಚಿನ ವರ್ಷಗಳಲ್ಲಿ ಪ್ರಮುಖ ಜಾಗತಿಕ ಉತ್ಪಾದಕರಾದ ಬ್ರೆಜಿಲ್ ಮತ್ತು ವಿಯೆಟ್ನಾಂನಲ್ಲಿನ ಕಾಫಿ ಬೆಳೆ ನಾಶಗೊಂಡಿರುವುದರಿAದ ಜಾಗತಿಕ ಬೆಲೆಗಳು ದ್ವಿಗುಣಗೊಂಡಿವೆ.

ಭಾರತದ ರಫ್ತು, ಮೌಲ್ಯದ ದೃಷ್ಟಿಯಿಂದ ಹೆಚ್ಚಿದ್ದರೂ, ಯುರೋಪಿನ ಪ್ರಮುಖ ಖರೀದಿದಾರರ ಒಂದು ಭಾಗವು ಭಾರತೀಯ ಕಾಫಿಗಳಿಗೆ ಹೋಲಿಸಿದರೆ ಕಡಿಮೆ ಬೆಲೆಯ ಇತರ ದೇಶಗಳ ಕಾಫಿ ಖರೀದಿಗೆ ಮೊರೆ ಹೋಗಿರುವುದರಿಂದ ರಫ್ತು ಪ್ರಮಾಣವು ಪ್ರಸ್ತುತ ಕುಸಿತ ಕಂಡಿದೆ. ಡಿಸೆಂಬರ್ ೧೬ ರವರೆಗೆ ಕಾಫಿ ಸಾಗಣೆ ಪ್ರಮಾಣವು ಶೇ. ೬ ರಷ್ಟು ಕಡಿಮೆಯಾಗಿ ೩.೬೬ ಲಕ್ಷ ಟನ್‌ಗಳಾಗಿದ್ದು, ಹಿಂದಿನ ವರ್ಷದ ರಫ್ತು ೩.೯೧ ಲಕ್ಷ ಟನ್‌ಗಳಷ್ಟಿತ್ತು.

ಕಡಿಮೆ ಪ್ರಮಾಣದ ಕಾಫಿ ರಫ್ತಾದರೂ ದರಿ ಏರಿಕೆಯಿಂದಾಗಿ ಮೌಲ್ಯ ಹೆಚ್ಚಾಗಿದೆ.

ಭಾರತೀಯ ರೋಬಸ್ಟಾ ಮತ್ತು ಅರೇಬಿಕಾ ಕಾಫಿ ಉತ್ಕೃಷ್ಟ ಗುಣಮಟ್ಟದ್ದಾಗಿದ್ದು ಲಂಡನ್ ಮತ್ತು ನ್ಯೂಯಾರ್ಕ್ನಲ್ಲಿನ ಟರ್ಮಿನಲ್ ಬೆಲೆಗಳಿಗಿಂತ ಹೆಚ್ಚಿನ ಬೆಲೆಯನ್ನು (ಪ್ರೀಮಿಯಂ) ಹೊಂದಿವೆ. ಪ್ರಸ್ತುತ, ಭಾರತೀಯ ರೋಬಸ್ಟಾ ಪಾರ್ಚ್ಮೆಂಟ್ ಎಬಿ ಯ ಪ್ರೀಮಿಯಂ ಐIಈಈಇ ಬೆಲೆಗಳಿಗಿಂತ ಪ್ರತಿ ಟನ್‌ಗೆ $೧,೦೦೦-೧,೧೦೦ ಪ್ರೀಮಿಯಂ ಹೊಂದಿದೆ, ಆದರೆ ರೋಬಸ್ಟಾ ಚೆರ್ರಿ ಎಬಿ ಯ ಪ್ರೀಮಿಯಂ ಪ್ರತಿ ಟನ್‌ಗೆ $೪೦೦-೪೫೦ ರಷ್ಟಿದೆ. ಭಾರತೀಯ ಅರೇಬಿಕಾ ಪಾರ್ಚ್ಮೆಂಟ್ ಕಾಫಿಗೆ, ಪ್ರೀಮಿಯಂ ನ್ಯೂಯಾರ್ಕ್ ಬೆಲೆಗಳಿಗಿಂತ ಪ್ರತಿ ಪೌಂಡ್‌ಗೆ ೧೨-೧೫ ಸೆಂಟ್‌ಗಳಷ್ಟಿದೆ.

ಕಾಫಿ ಉತ್ಪಾದನೆಯಲ್ಲಿ ಏಳನೇ ಅತಿದೊಡ್ಡ ದೇಶವಾದ ಭಾರತ, ವಿಶ್ವದ ಐದನೇ ಅತಿ ದೊಡ್ಡ ರಫ್ತುದಾರನೂ ಆಗಿದೆ. ವಿಶ್ವದ ಕಾಫಿ ರಫ್ತಿನ ಸುಮಾರು ಶೇಕಡಾ ೫ ರಷ್ಟು ಭಾರತದ್ದಾಗಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಕಾಫಿ ರಫ್ತು ನಿರಂತರವಾಗಿ ಒಂದು ಶತಕೋಟಿ ಡಾಲರ್‌ಗಳನ್ನು ಮೀರಿವೆ. ಭಾರತೀಯ ಕಾಫಿಗೆ ಐದು ಪ್ರಮುಖ ದೇಶಗಳು ಗ್ರಾಹಕರಾಗಿವೆ. ಇದರಲ್ಲಿ ಇಟಲಿ ಸುಮಾರು ಶೇಕಡಾ ೧೮ ರಷ್ಟನ್ನು ಹೊಂದಿದೆ, ನಂತರ ಜರ್ಮನಿ (ಶೇಕಡಾ ೧೧), ಬೆಲ್ಜಿಯಂ (ಶೇಕಡಾ ೭.೪೭), ರಷ್ಯನ್ ಒಕ್ಕೂಟ (ಶೇಕಡಾ ೫.೨೮) ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಶೇಕಡಾ ೫) ಪಾಲು ಹೊಂದಿವೆ.