ಮಡಿಕೇರಿ, ಜ. ೧: ಕೊಡಗು ಜಿಲ್ಲೆಗೆ ಇದೀಗ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಿಂದುಮಣಿ ಅವರು ನಿಯೋಜಿತರಾಗಿದ್ದಾರೆ. ಜಿಲ್ಲೆಯಲ್ಲಿ ಇದೀಗ ಇವರು ಸೇರಿ ಒಟ್ಟು ೪ ಮಹಿಳಾ ಎಸ್ಪಿಗಳು ಕಾರ್ಯನಿರ್ವಹಿಸಿದಂತಾಗಲಿದೆ.

ಈ ಹಿಂದೆ ೨೦೧೪ ರಲ್ಲಿ ಕೊಡಗಿಗೆ ಪ್ರಥಮ ಮಹಿಳಾ ಎಸ್ಪಿಯಾಗಿ ವರ್ತಿಕಾ ಕಟಿಯಾರ್ ಅವರು ನೇಮಕಗೊಂಡಿದ್ದರು. ತಾ. ೫.೮.೨೦೧೪ ರಿಂದ ತಾ. ೨.೬.೨೦೧೬ ರ ತನಕ ಇವರು ಕಾರ್ಯನಿರ್ವಹಿಸಿದ್ದರು.

ಇವರ ಬಳಿಕ ತಾ. ೧೮.೭.೨೦೧೮ ರಿಂದ ತಾ. ೨೭.೬.೨೦೨೦ ರ ತನಕ ಸುಮನ್ ಪಣ್ಣೇಕರ್ ಎರಡನೆಯ ಮಹಿಳಾ ಎಸ್ಪಿಯಾಗಿದ್ದರು. ನಂತರದಲ್ಲಿ ತಾ. ೨೭.೬.೨೦೨೦ ರಿಂದ ತಾ. ೨೩.೨.೨೦೨೨ ರ ತನಕ ಕ್ಷಮಾ ಮಿಶ್ರಾ ಅವರು ಎಸ್ಪಿಯಾಗಿದ್ದರು. ಇದೀಗ ನಾಲ್ಕನೆಯ ಮಹಿಳಾ ಎಸ್ಪಿಯಾಗಿ ಬಿಂದುಮಣಿ ಅವರು ಕೊಡಗು ಜಿಲ್ಲೆಗೆ ನಿಯೋಜಿತರಾಗಿದ್ದಾರೆ. ಈತನಕ ಮೈಸೂರು ನಗರ ಉಪಆಯುಕ್ತೆಯಾಗಿದ್ದ ಇವರನ್ನು ಸರಕಾರ ನೂತನ ಅಧಿಕಾರಿಯಾಗಿ ನೇಮಿಸಿದೆ. ತಾ. ೧.೧.೧೯೫೬ ರಲ್ಲಿ ಎಂ.ಪಿ. ಮುತ್ತಣ್ಣ ಅವರು ಪ್ರಥಮ ಎಸ್ಪಿಯಾಗಿದ್ದು, ಕೊಡಗು ಜಿಲ್ಲೆಯಲ್ಲಿ ಈತನಕ ಒಟ್ಟು ೪೮ ಎಸ್ಪಿಗಳು ಕಾರ್ಯನಿರ್ವಹಿಸಿದ್ದಾರೆ. ಇವರು ೪೯ನೆಯ ಅಧಿಕಾರಿಯಾಗಲಿದ್ದಾರೆ.

ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಣೆ

ಕೊಡಗಿನ ಜನರ ಸಮಸ್ಯೆಗ ಳನ್ನು ಅರಿತು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವುದಾಗಿ ಜಿಲ್ಲೆಯ ನೂತನ ಎಸ್ಪಿ ಬಿಂದುಮಣಿ ಹೇಳಿದರು. ಜಿಲ್ಲಾ ಪೊಲೀಸ್ ಕಚೇರಿಯಲ್ಲಿಂದು ೪ಏಳನೇ ಪುಟಕ್ಕೆ (ಮೊದಲ ಪುಟದಿಂದ) ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಅವರಿಂದ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಂದುಮಣಿ, ಮುಂದಿನ ದಿನಗಳಲ್ಲಿ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಅಲ್ಲಿನ ಅಗತ್ಯತೆ ಬಗ್ಗೆ ಮಾಹಿತಿ ಪಡೆದು ಅದನ್ನು ಪೂರೈಸಲು ಕ್ರಮಕೈಗೊಳ್ಳಲಾಗುವುದು. ಸ್ಥಳೀಯ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಅವುಗಳ ಪರಿಹಾರಕ್ಕೆ ಮುಂದಾಗುವುದಾಗಿ ತಿಳಿಸಿದರು.

ಜನಸಂಪರ್ಕ ಸಭೆಗಳನ್ನು ಹಮ್ಮಿಕೊಳ್ಳಲಾಗುವುದು. ಹಿಂದಿನ ಅಧಿಕಾರಿಗಳು ಉತ್ತಮ ಕೆಲಸಗಳನ್ನು ಮಾಡಿದ್ದು, ತಾನು ಕೂಡ ಮತ್ತಷ್ಟು ಉತ್ತಮವಾಗಿ ಕೆಲಸಗಳನ್ನು ಮಾಡಲು ಆಸಕ್ತಿ ಹೊಂದಿರುವುದಾಗಿ ನೂತನ ಎಸ್ಪಿ ನುಡಿದರು.

- ಶಶಿ