ಗೋಣಿಕೊಪ್ಪಲು, ಜ. ೧: ಪತ್ನಿಯೊಂದಿಗೆ ಅನುಮಾನಾಸ್ಪದ ಅಕ್ರಮ ಸಂಬAಧ ಹೊಂದಿದ್ದ ಎಂದು ವ್ಯಕ್ತಿಯನ್ನು ಮಾರಣಾಂತಿಕವಾಗಿ ಹಲ್ಲೆಗೈದು ಕೊಲೆ ಮಾಡಿದ ಆರೋಪದಡಿ ಪತಿ ಸೇರಿದಂತೆ ಕೆಲವರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಗೋಣಿಕೊಪ್ಪ ಸಮೀಪದ ಹಾತೂರು ಬಳಿ ಘಟನೆ ನಡೆದಿದ್ದು, ಹರಿಶ್ಚಂದ್ರಪುರ ನಿವಾಸಿ ನವಾಜ್ (೩೯) ಕೊಲೆಯಾದ ವ್ಯಕ್ತಿ. ಈ ಕುರಿತು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.

ಘಟನೆ ಹಿನ್ನೆಲೆ

ನವಾಜ್ ಪತ್ನಿ ಹಾಗೂ ಪುತ್ರಿಯೊಂದಿಗೆ ಗೋಣಿಕೊಪ್ಪ ಸಮೀಪದ ಹರಿಶ್ಚಂದ್ರಪುರದಲ್ಲಿ ವಾಸವಿದ್ದು, ಕೆಲ ವರ್ಷದಿಂದ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬAಧ ಹೊಂದಿದ್ದರು ಎನ್ನಲಾಗಿದೆ. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿ ಮುಂದೆ ಮಹಿಳೆಯೊಂದಿಗೆ ಸಂಪರ್ಕ ಇಟ್ಟುಕೊಳ್ಳದಂತೆ ನವಾಜ್‌ಗೆ ಎಚ್ಚರಿಕೆ ಕೂಡ ನೀಡಲಾಗಿತ್ತು.

ಆದರೂ, ಪದೇ ಪದೇ ಮಹಿಳೆಯನ್ನು ಸಂಪರ್ಕಿಸುತ್ತಿದ್ದ ನವಾಜ್ ಡಿಸೆಂಬರ್ ೩೧ರಂದು ರಾತ್ರಿ ೧೧.೩೦ಕ್ಕೆ ತನ್ನ ಕಾರಿನಲ್ಲಿ ಮಹಿಳೆಯ ಮನೆಗೆ ತೆರಳಿದ್ದಾರೆ.

ಮಹಿಳೆಯ ಪತಿ ಮನೆಗೆ ಬಂದು ನೋಡಿದಾಗ ಇಬ್ಬರು ಒಟ್ಟಿಗೆ ಇರುವುದು ಕಂಡು ಬಂದಿದೆ. ಕೋಪಗೊಂಡ ಪತಿ ತನ್ನ ಸಹಚರರೊಂದಿಗೆ ಸೇರಿ ನವಾಜ್ ಮೇಲೆ ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆಗೈದಿದ್ದಾನೆ. ಇದರಿಂದ ಗಂಭೀರಗೊAಡ ನವಾಜ್ ಕುಸಿದು ಬಿದ್ದಿದ್ದಾರೆ. ಬಳಿಕ ಆತ ಬಂದಿದ್ದ ಕಾರನ್ನು ಸಮೀಪದಲ್ಲಿ ಮಗುಚಿ ಅಪಘಾತವೆಂಬAತೆ ಬಿಂಬಿಸುವ ಯತ್ನವೂ ನಡೆದಿದೆ ಎನ್ನಲಾಗುತ್ತಿದೆ. ಕಾರು ಮಗುಚಿರುವುದನ್ನು ಗಮನಿಸಿ ಸ್ಥಳೀಯರು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಹಲ್ಲೆಯಿಂದ ಅಸ್ವಸ್ಥನಾಗಿದ್ದ ನವಾಜ್‌ನನ್ನು ಕೂಡಲೇ ಗೋಣಿಕೊಪ್ಪ ಸಮುದಾಯದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ನವಾಜ್ ಖಾಸಗಿ ಸಂಸ್ಥೆಯ ಚಾಲಕನಾಗಿ ಕಳೆದ ೪ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ. ಜೊತೆಗೆ ಆಟೋ ಚಾಲಕನಾಗಿಯೂ ಕೆಲಸ ಮಾಡುತ್ತಿದ್ದರು.

ಈ ಸಂಬAಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವೀರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್, ಗೋಣಿಕೊಪ್ಪ ವೃತ್ತ ನಿರೀಕ್ಷಕ ಶಿವರಾಜ್ ಮುಧೋಳ್, ಗೋಣಿಕೊಪ್ಪ ಠಾಣಾಧಿಕಾರಿ ಪ್ರದೀಪ್ ಕುಮಾರ್, ಪೊನ್ನಂಪೇಟೆ ಠಾಣಾಧಿಕಾರಿ ನವೀನ್ ಕುಮಾರ್ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ಸ್ಥಳೀಯವಾಗಿ ಲಭಿಸಿರುವ ಸಿಸಿ ಕ್ಯಾಮರ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ.

ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- ಜಗದೀಶ್/ದಿನೇಶ್