ಮಡಿಕೇರಿ, ಜ. ೧: ಸುದೀರ್ಘ ಮೂರು ವರ್ಷಗಳ ಕಾಲ ಕೊಡಗಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲಸ ಮಾಡಿರುವುದು ತನ್ನ ವೃತ್ತಿ ಬದುಕಿನ ಅವಿಸ್ಮರಣೀಯ ಘಟ್ಟ ಎಂದು ಕೆ. ರಾಮರಾಜನ್ ಮುಕ್ತವಾಗಿ ಹಂಚಿಕೊAಡರು.
ನಿನ್ನೆಯಷ್ಟೆ ಬೆಳಗಾವಿಗೆ ವರ್ಗಾವಣೆಗೊಂಡಿರುವ ಕೆ. ರಾಮರಾಜನ್ ಅವರು ‘ಶಕ್ತಿ’ಯೊಂದಿಗೆ ತಮ್ಮ ಅನುಭವಗಳನ್ನು ಮೆಲುಕು ಹಾಕಿದರು. ವರಿಷ್ಠಾಧಿಕಾರಿಯಾಗಿ ಕೊಡಗಿನಿಂದ ತನ್ನ ವೃತ್ತಿ ಜೀವನ ಆರಂಭವಾಯಿತು. ಇಲ್ಲ್ಲಿ ಕೆಲಸ ಮಾಡಿದಷ್ಟು ದಿನವೂ ಉತ್ತಮ ನೆನಪುಗಳನ್ನು ನೀಡಿದೆ. ಪೊಲೀಸ್ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು, ಸಿಬ್ಬಂದಿಗಳ ಸಂಪೂರ್ಣ ಸಹಕಾರ ದೊರಕಿದ ಪರಿಣಾಮ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಸುಗಮವಾಗಿ ಸಾಗಲು ಸಾಧ್ಯವಾಯಿತು ಎಂದು ಹೇಳಿದರು.
ಪ್ರಕರಣಗಳ ಸಂಖ್ಯೆ ಹೆಚ್ಚಳ
ಈ ಹಿಂದೆ ವಾರ್ಷಿಕ ೧,೫೦೦ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗುತ್ತಿದ್ದವು. ತಾನು ಎಸ್‌ಪಿಯಾದ ನಂತರ ಅದನ್ನು ೨,೫೦೦ಕ್ಕೆ ಹೆಚ್ಚಿಸಲಾಯಿತು. ಗಲಾಟೆಯಂತಹ ಪ್ರಕರಣಗಳನ್ನು ಇತ್ಯರ್ಥ ಮಾಡದೆ ಎಫ್‌ಐಆರ್ ದಾಖಲಿಸಿದ ಕಾರಣದಿಂದ ಅಪರಾಧ ಮಾಡುವವರಿಗೆ ಕಾನೂನಿಗೆ ಮೇಲೆ ಭಯ ಮೂಡಿ ಅಪರಾಧ ಮಾಡುವುದನ್ನು ನಿಲ್ಲಿಸಿದ್ದಾರೆ ಎಂದು ಹೇಳಿದರು.
೭೦೦ ಮಂದಿ ಬಂಧನ
ಮಾದಕ ವಸ್ತು ಮಾರಾಟ, ಸೇವನೆ ಸಂಬAಧ ತನ್ನ ಅವಧಿಯಲ್ಲಿ ೭೦೦ ಮಂದಿಯನ್ನು ಬಂಧಿಸಲಾಗಿದೆ ಎಂದು ರಾಮರಾಜನ್ ಮಾಹಿತಿ ನೀಡಿದರು.
ಗಾಂಜಾ ಬಳಕೆದಾರರು, ಪೆಡ್ಲರ್ ಸೇರಿದಂತೆ ಆ್ಯಶಿಶ್ ಆಯಿಲ್, ಹೈಡ್ರೋ ಗಾಂಜಾ, ಎಂಡಿಎA ಮಾರಾಟ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. ಮಾದಕ ವಸ್ತುಗಳ ಬಳಕೆಯನ್ನು ತಡೆಗಟ್ಟಲು ಶಕ್ತಿ ಮೀರಿ ಇಲಾಖೆ ಶ್ರಮಿಸಿದೆ. ಇದರಿಂದ ಬಳಕೆ ನಿಯಂತ್ರಣಕ್ಕೂ ಬಂದಿದೆ. ಯುವಪೀಳಿಗೆ ದಾರಿ ತಪ್ಪದೆ ಸತ್ಪçಜೆಗಳಾಗಿ ರೂಪುಗೊಳ್ಳಬೇಕೆಂದರು.
ಸವಾಲಿನ ತನಿಖೆಗಳು
ಕೊಡಗು ಪುಟ್ಟ ಜಿಲ್ಲೆಯಾದರೂ ಇಲ್ಲಿನ ಭೌಗೋಳಿಕ ಹಿನ್ನೆಲೆ ತನಿಖೆಗೆ ಸವಾಲೊಡ್ಡುತ್ತದೆ. ಹಲವಷ್ಟು ಕೊಲೆ, ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಸಿಬ್ಬಂದಿ ವರ್ಗದವರು ದೊಡ್ಡ ಮಟ್ಟದ ೪ಏಳನೇ ಪುಟಕ್ಕೆ