ವೀರಾಜಪೇಟೆ, ಜ. ೧: ಅನ್ಯ ಜಾತಿಯ ಯುವಕನನ್ನು ಮದುವೆ ಯಾದ ಕಾರಣಕ್ಕೆ ಯುವತಿಯ ಹತ್ಯೆಗೈದಿರುವ ಪ್ರಕರಣ ಖಂಡಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಘಟಕದಿಂದ ಪಟ್ಟಣದಲ್ಲಿ ಪತ್ರ ಚಳವಳಿ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಲಾಯಿತು. ಸಂಘಟನೆ ವತಿಯಿಂದ ವೀರಾಜಪೇಟೆಯ ಗಡಿಯಾರ ಕಂಬದ ಬಳಿ ಇರುವ ಪ್ರಧಾನ ಅಂಚೆ ಕಚೇರಿಯ ಮೂಲಕ ಮುಖ್ಯಮಂತ್ರಿಗಳಿಗೆ ಪ್ರತಿಭಟನಾನಿರತರು ಪತ್ರವನ್ನು ಕಳುಹಿಸಿದರು. ಹುಬ್ಬಳ್ಳಿಯ ಯುವತಿ ಮಾನ್ಯ ಎಂಬಾಕೆ ವಿವೇಕಾನಂದ ಎನ್ನುವ ದಲಿತ ಸಮುದಾಯದ ಯುವಕನನ್ನು ವಿವಾಹವಾಗಿದ್ದ ಕಾರಣಕ್ಕೆ, ಡಿಸೆಂಬರ್ ೨೧ ರಂದು ಆಕೆ ಗರ್ಭಿಣಿಯಿದ್ದಾಗಲೇ ಅವಳ ತಂದೆ ಹುಬ್ಬಳ್ಳಿಯಲ್ಲಿ ಬರ್ಬರವಾಗಿ ಕೊಲೆ ಮಾಡಿ, ಆಕೆಯ ಪತಿಯ ಪೋಷಕರ ಮೇಲೂ ದಾಳಿ ನಡೆಸಿದ್ದಾನೆ. ಕೃತ್ಯವನ್ನು ಖಂಡಿಸುವ ಜೊತೆಗೆ, ಮರ್ಯಾದ ಹತ್ಯೆಗಳ ನಿಗ್ರಹಕ್ಕೆ ಪ್ರತ್ಯೇಕ ಕಾಯ್ದೆ ರೂಪಿಸಬೇಕು ಎಂದು ಸಂಘಟನೆ ಆಗ್ರಹಿಸಿತು. ಸಂಘಟನೆಯ ಜಿಲ್ಲಾ ಸಂಚಾಲಕಿ ಪದ್ಮಿನಿ ಶ್ರೀಧರ್, ಸಮಿತಿ ಸದಸ್ಯರಾದ ಪ್ರೇಮ, ಕೋಮಲ, ದೇವಕ್ಕಿ, ತಾಲೂಕು ಸಮಿತಿ ಸದಸ್ಯರಾದ ವರಲಕ್ಷಿö್ಮ, ಮಂಜುಳ, ಹೇಮಾ, ಮಂಜುಳಾ ಸೇರಿದಂತೆ ಇತರರು ಇದ್ದರು.