ಮಡಿಕೇರಿ, ಜ. ೧ : ‘ವಸ್ತುಗಳು ಮತ್ತು ತಂತ್ರಜ್ಞಾನಗಳಲ್ಲಿನ ಪ್ರಗತಿಗಳು- ಉಷ್ಣ, ಯಾಂತ್ರಿಕ ಮತ್ತು ಕ್ರಯೋಜೆನಿಕ್ ಅನ್ವಯಿಕೆಗಳು’ ಎಂಬ ವಿಷಯದ ಕುರಿತು ೬ ದಿನಗಳ ಎಐಸಿಟಿಇ ಪ್ರಾಯೋಜಿತ ಆಫ್‌ಲೈನ್ ಎಟಿಎಎಲ್ ಫ್ಯಾಕಲ್ಟಿ ಅಭಿವೃದ್ಧಿ ಕಾರ್ಯಾಗಾರವನ್ನು ಪೊನ್ನಂಪೇಟೆಯ ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೆಕ್ಯಾನಿಕಲ್ ಇಂಜಿನಿಯರಿAಗ್ ವಿಭಾಗವು ಆಯೋಜಿಸಿತ್ತು. ಮುಖ್ಯ ಅತಿಥಿಯಾಗಿದ್ದ ಕಾನ್ಪುರದ ಐಐಟಿಯ ಪ್ರಾಧ್ಯಾಪಕ ಡಾ. ಕಾಂತೇಶ್ ಬಲಾನಿ ವೃತ್ತಿಪರ ಜೀವನದಲ್ಲಿ ನೈತಿಕತೆ, ಸಮಗ್ರತೆ, ದೃಷ್ಟಿಕೋನ, ಸಹಾನುಭೂತಿ ಮತ್ತು ನೈತಿಕ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ವಿವರಿಸಿದರು.

ಅಧ್ಯಕ್ಷೀಯ ಭಾಷಣದಲ್ಲಿ, ಕೊಡವ ಶಿಕ್ಷಣ ಸಂಘದ ಅಧ್ಯಕ್ಷ ಡಾ. ಎಂ.ಸಿ. ಕಾರ್ಯಪ್ಪ, ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮಗಳು ಹೆಚ್ಚುತ್ತಿರುವ ಮಹತ್ವದ ಬಗ್ಗೆ ಮಾಹಿತಿ ನೀಡಿ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ನೆಟ್ ವರ್ಕಿಂಗ್, ಮಾನ್ಯತೆ ಮತ್ತು ಶೈಕ್ಷಣಿಕ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಅವುಗಳ ಪಾತ್ರವನ್ನು ವಿವರಿಸಿದರು. ಅಸೋಸಿಯೇಟ್ ಪ್ರೊಫೆಸರ್ ಮತ್ತು ಎಫ್‌ಡಿಪಿ ಸಹ-ಸಂಯೋಜಕ ಡಾ. ಕಿಶನ್ ಕರುಂಬಯ್ಯ ಬಿ.ಜೆ. ಸ್ವಾಗತಿಸಿ, ಪ್ರಾಂಶುಪಾಲರು ಮತ್ತು ಎಫ್‌ಡಿಪಿ ಸಂಯೋಜಕ ಡಾ. ಎಂ. ಬಸವರಾಜ್ ಕಾರ್ಯಕ್ರಮದ ಮಾಹಿತಿ ನೀಡಿದರು. ಮೆಕ್ಯಾನಿಕಲ್ ಇಂಜಿನಿಯರಿAಗ್ ವಿಭಾಗದ ಮುಖ್ಯಸ್ಥ ಪ್ರೊ. ತಿಮ್ಮಯ್ಯ ಎ.ಜಿ. ವಂದಿಸಿದರು. ತರಬೇತಿ ಮತ್ತು ನಿಯೋಜನೆಗಳ ಅಸೋಸಿಯೇಟ್ ಪ್ರೊಫೆಸರ್ ವಿಭಾಗ ಮುಖ್ಯಸ್ಥ ಡಾ. ಮುತ್ತಣ್ಣ ಕೆ.ಪಿ. ನಿರೂಪಿಸಿದರು. ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟç ಮತ್ತು ಪಂಜಾಬ್‌ನ ಅಧ್ಯಾಪಕ ಸದಸ್ಯರು ಮತ್ತು ಸಂಶೋಧನಾ ವಿದ್ವಾಂಸರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉದ್ಘಾಟನಾ ಅಧಿವೇಶನದಲ್ಲಿ ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.