ಐಗೂರು, ಜ. ೧ : ಕಾಡ್ಗಿಚ್ಚು ತಡೆ ಕುರಿತು ಜಾಗೃತಿ ಕಾರ್ಯಕ್ರಮ ಐಗೂರಿನಲ್ಲಿ ನಡೆಯಿತು. ಅರಣ್ಯ ಇಲಾಖೆಯ ಸೋಮವಾರಪೇಟೆ ಮತ್ತು ಮಡಿಕೇರಿ ವಿಭಾಗ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರಣ್ಯ ಪ್ರದೇಶಕ್ಕೆ ಬೀಳುವ ಬೆಂಕಿಯಿAದ ವನ್ಯಜೀವಿ ಮತ್ತು ಪರಿಸರಕ್ಕಾಗುವ ಅನಾಹುತಗಳ ಬಗ್ಗೆ ಬೀದಿ ನಾಟಕ ಮೂಲಕ ಜಾಗೃತಿ ಮೂಡಿಸಲಾಯಿತು. ಕುಶಾಲನಗರದ ವಿದ್ಯಾಸಾಗರ ಕಲಾವೇದಿಕೆಯ ರಾಜು ಮತ್ತು ತಂಡದವರಿAದ ಬೀದಿನಾಟಕ ನಡೆಯಿತು.
ಕಾರ್ಯಕ್ರಮದಲ್ಲಿ ಐಗೂರು ಗ್ರಾಮ ಪಂಚಾಯಿತಿ ಪಿಡಿಓ ಪೂರ್ಣ ಕುಮಾರ್, ಅರಣ್ಯ ಇಲಾಖೆಯ ಗಸ್ತು ಅರಣ್ಯಪಾಲಕ ಚಂದ್ರಶೇಖರ್, ಅರಣ್ಯವೀಕ್ಷಕರಾದ ಅಂತೋಣಿ , ಹರ್ಷಿತ್, ದರ್ಶನ್, ವಾಸು ಮತ್ತು ಗ್ರಾಮಸ್ಥರು ಭಾಗವಹಿಸಿ ದ್ದರು.