ಮಡಿಕೇರಿ, ಜ. ೧ : ಆಂಧ್ರಪ್ರದೇಶದ ಕಡಪದಲ್ಲಿ ನಡೆದ ೩ನೇ ರಾಷ್ಟಿçÃಯ ದಕ್ಷಿಣ ವಲಯ ಸಬ್ ಜೂನಿಯರ್ ಮಹಿಳಾ ಹಾಕಿ ಫೈನಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವು ಆಂಧ್ರಪ್ರದೇಶ ತಂಡವನ್ನು ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ನಾಯಕಿಯಾಗಿ ಮಡಿಕೇರಿ ಸಾಯಿ ಹಾಸ್ಟೆಲ್‌ನ ಪ್ರಿನ್ಸಿಯ, ಉಪನಾಯಕಿಯಾಗಿ ತ್ವಿಷ ದೇಚಮ್ಮ ತಂಡವನ್ನು ಮುನ್ನೆಡೆಸಿದರು. ತಂಡದ ವ್ಯವಸ್ಥಾಪಕರಾಗಿ ಕೃತಿಕಾ ಹಾಗೂ ಕೋಚ್ ಆಗಿ ಸುಖಲ್ಯನ್ ಮಂಡಲ್ ಕಾರ್ಯನಿರ್ವಹಿಸಿದ್ದರು.