ಮಡಿಕೇರಿ, ಜ. ೧ : ಮೈಸೂರು - ಹೂಟಗಳ್ಳಿಯ ಕೊಡಗು ಗೌಡ ಕ್ಷೇಮಾಭಿವೃದ್ಧಿ ಸಂಘದ ೧೧ನೇ ವರ್ಷದ ಕ್ರೀಡಾ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕೋತ್ಸವ ಸಮಾರಂಭ ಕೊಡಗು ಗೌಡ ಸಮಾಜ ಮೈಸೂರಿನ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪೊನ್ನಚ್ಚನ ಪಿ. ಅಪ್ಪಯ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೊಡಗು ಗೌಡ ಸಮಾಜಗಳ ಒಕ್ಕೂಟದ ಉಪಾಧ್ಯಕ್ಷ ತೇನನ ರಾಜೇಶ್ ಮತ್ತು ರಂಗಾಯಣ ಕಲಾವಿದೆ ದೇವಜನ ಗೀತಾ ಮೋಂಟಡ್ಕ ಉಪಸ್ಥಿತರಿದ್ದರು.

ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಆಟೋಟ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು.

ಸಂಘದ ಉಪಾಧ್ಯಕ್ಷ ಚರುಕನ ಲವ, ಗೌರವ ಕಾರ್ಯದರ್ಶಿ ಮುಕ್ಕಾಟಿ ಅರುಣ್ ಕುಮಾರ್, ಸಹಕಾರ್ಯದರ್ಶಿ ಹೊಸೋಕ್ಲು ಅಪ್ಪಯ್ಯ, ಖಜಾಂಚಿ ಎಡಿಕೇರಿ ಪೂಣಚ್ಚ, ಸಲಹಾ ಸಮಿತಿಯ ಚೆಟ್ಟಿಮಾಡ ಜನಾರ್ಧನ, ನಡುಮನೆ ಚಂಗಪ್ಪ, ನಿರ್ದೇಶಕರುಗಳಾದ ಕರ್ಣಯ್ಯನ ನೀಲಾಕ್ಷಿ ಮೋಹನ್, ಚಿಕ್ಕೋಡಿ ಪುಷ್ಪರೇಖಾ ರಮೇಶ್, ಉದಿಯನ ಸುರೇಶ್, ನೆಕ್ಕಿಲ ಮಾಧವ, ಚೆರುಕನ ಕುಶ, ಚೀಯಪ್ಪನ ರಾಜೇಶ್, ಸೂರ್ತಲೆ ಹರೀಶ್, ಮುಕ್ಕಾಟಿ ತಿಲಕನಂದ, ಕಡ್ಲೇರ ನಾಗೇಶ್, ನಂಗಾರು ಮೋಹನ್ ಪಾಲ್ಗೊಂಡಿದ್ದರು.