ಸುಂಟಿಕೊಪ್ಪ, ಜ. ೧ : ಯುವ ಜನಾಂಗ ಮಾದಕ ವ್ಯಸನಕ್ಕೆ ದಾಸರಾಗುತ್ತಿದ್ದು ಈ ಬಗ್ಗೆ ಪೋಷಕರು ಕಟ್ಟೆಚ್ಚರದಿಂದ ತಮ್ಮ ಸಮಕ್ಕಳ ಚಲವÀಲನಗಳನ್ನು ಗಮನಿಸಿ ಅವರುನ್ನು ಮಾದಕವ್ಯಸನಕ್ಕೆ ತುತ್ತಾಗದಂತೆ ನೋಡಿಕೊಳ್ಳುವ ಜವಾಬ್ಧಾರಿ ಇದೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪಿ.ಎಂ.ಲತೀಫ್ ತಿಳಿಸಿದರು.

ಇತ್ತೀಚೆಗೆ ಸುಂಟಿಕೊಪ್ಪದ ಜಿಯಂಪಿ ಶಾಲಾ ಮೈದಾನದಲ್ಲಿ ನಡೆದ ಜಿ ಟೌನ್ ಯುನೈಟೆಡ್ ಎಫ್ ಸಿ ವತಿಯಿಂದ ಎರಡನೇ ವರ್ಷದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯ ಪಂದ್ಯಾವಳಿಯನ್ನು ಡ್ರಗ್ಸ್ ಮುಕ್ತ ನಮ್ಮ ನಾಡು ಎಂಬ ಧೈಯ ವಾಕ್ಯದೊಂದಿಗೆ ನಡೆದ ರಾಷ್ಟ್ರಮಟ್ಟದ ಫುಟ್ಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಕೊಡಗು ಜಿಲ್ಲಾ ಯುವ ಕಾಂಗ್ರೆಸ್ಸಿನ ಅಧ್ಯಕ್ಷ ಜಮ್ಮಡ ಸೋಮಣ್ಣ ಮಾತನಾಡಿ ಮಾದಕ ವಸ್ತುಗಳ ವ್ಯಸನದಿಂದ ಯುವಜನತೆ ದಾರಿ ತಪ್ಪಿ ಹಣದಾಸೆಯಿಂದ ಸಮಾಜಘಾತಕ ಶಕ್ತಿಗಳಾಗಿ ಬೆಳೆಯುತ್ತಾರೆ. ಈ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಯುವಕರೊಂದಿಗೆ ಎಲ್ಲರೂ ಕೈಜೋಡಿಸಬೇಕೆಂದು ಕೋರಿದರು. ಪಿ.ಎಲ್. ಹರ್ಷದ್ ಮಾತನಾಡಿ ಕ್ರೀಡೆಯಲ್ಲಿ ಸೋಲನ್ನು ಎದುರಿಸಿ ಗೆಲುವನ್ನು ಸಾಧಿಸು ವುದು ನಿರಂತರ ಅಭ್ಯಾಸ ಮತ್ತು ಪರಿಶೀಲನೆಗಳ ಪ್ರತಿಯೊಬ್ಬ ಕ್ರೀಡಾಪಟುಗಳು ಅಳವಡಿಸಿಕೊಳ್ಳಬೇಕಾಗುತ್ತದೆ ಇದರಿಂದ ಕ್ರೀಡಾಪಟು ಶಾರೀರಿಕವಾಗಿ ಸದೃಢ ವಾಗಿರಲು ಸಹಕಾರಿಯಾಗಿದ್ದು ಪಾಠ ದೊಂದಿಗೆ ಕ್ರೀಡೆಯಲ್ಲಿ ಪಾಲ್ಗೊಂಡು ಸಾಧಕರಾಗುವ ಮೂಲಕ ಸಮಾಜದಲ್ಲಿ ತಮ್ಮ ವ್ಯಕ್ತಿತ್ವವನ್ನು ಗುರುತಿಸಿಕೊಳ್ಳುವಂತೆ ಸಲಹೆ ನೀಡಿದರು.

ಈ ಸಮಾರಂಭದಲ್ಲಿ ಜಿ ಟೌನ್ ಎಫ್ ಸಿ ಯ ಸಂಚಾಲಕರುಗಳಾದ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶಬೀರ್, ರಫೀಕ್‌ಖಾನ್ ನಮ್ಮ ಸುಂಟಿಕೊಪ್ಪ ಬಳಗದ ಕೆ.ಎಸ್.ಅನಿಲ್ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಹಕೀಂ, ಸುನ್ನಿ ಶಾಫಿ ಜುಮ ಮಸೀದಿಯ ಅಧ್ಯಕ್ಷ ಎಂಎA ರಫೀಕ್ ಉಪಸ್ಥಿತರಿದ್ದರು.