ಕೂಡಿಗೆ, ಜ. ೨: ಕೂಡಿಗೆ - ಕುಶಾಲನಗರ ಹಾಸನ ರಾಜ್ಯ ಹೆದ್ದಾರಿಯಲ್ಲಿ ರೂ. ೪ ಕೋಟಿ ವೆಚ್ಚದ ಕೂಡಿಗೆ-ಕುಶಾಲನಗರ ರಸ್ತೆಯ ಡಾಂಬರೀಕರಣ ಕಾಮಗಾರಿ ಭರದಿಂದ ಸಾಗುತ್ತಿದೆ. ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಇದಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿದ್ದರು. ೬ ತಿಂಗಳುಗಳಿAದ ಸುರಿಯುತ್ತಿದ್ದ ಮಳೆಯಿಂದಾಗಿ ಕಾಮಗಾರಿಯು ಆರಂಭಗೊಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇದೀಗ ಮಳೆಯ ಪ್ರಮಾಣವು ಕಡಿಮೆಯಾದ ಹಿನ್ನೆಲೆಯಲ್ಲಿ, ಕೂಡಿಗೆ- ಕುಶಾಲನಗರ ರಸ್ತೆಯು ತೀರ ಗುಂಡಿಮಯವಾಗಿರುವ ಹಿನ್ನೆಲೆಯಲ್ಲಿ ಗುತ್ತಿಗೆದಾರರಾದ ಬಿ.ಎಸ್.ಆರ್. ತಂಡದವರು ರಸ್ತೆಯ ಡಾಂಬರೀಕರಣ ಕಾಮಗಾರಿಯನ್ನು ಆರಂಭಿಸಿದ್ದಾರೆ. ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ಕುಶಾಲನಗರ ತಾಲೂಕು ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಅರ್ಬಾಜ್ ಸೇರಿದಂತೆ ಗುತ್ತಿಗೆದಾರ ಇಂಜಿನಿಯರ್ ಶಶಿಕಿರಣ್ ಪರಿಶೀಲಿಸಿದರು.