ಕೋವರ್‌ಕೊಲ್ಲಿ ಇಂದ್ರೇಶ್

ಬೆAಗಳೂರು, ಜ. ೨: ಕೊಡಗಿನ ಹೊಸತೋಟದ ಜಮೀನೊಂದರಲ್ಲಿ ಶುಂಠಿ ಕೃಷಿಯ ನೆಪದಲ್ಲಿ ಅಡಗುತಾಣ ಮಾಡಿಕೊಂಡು ಬೆಂಗಳೂರಿನಲ್ಲಿ ಸರಣಿ ಸ್ಫೋಟಗಳನ್ನು ನಡೆಸಿದ್ದ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಸಂಘಟನೆಯ ದಕ್ಷಿಣ ಭಾರತ ಕಮಾಂಡರ್ ಆಗಿದ್ದ ಉಗ್ರ ತಡಿಯಂಟವಿಡೆ ನಸೀರ್‌ಗೆ ಜೈಲಿನೊಳಗಿಂದಲೇ ಭಯೋತ್ಪಾದನಾ ಕೃತ್ಯ ಎಸಗುವುದಕ್ಕೆ ಸಹಾಯ ಮಾಡುತಿದ್ದ ಆರೋಪದಡಿಯಲ್ಲಿ ಜೈಲಿನ ವೈದ್ಯ ಸೇರಿದಂತೆ ಮೂವರ ವಿರುದ್ಧ ಶುಕ್ರವಾರ ರಾಷ್ಟಿçÃಯ ತನಿಖಾ ಸಂಸ್ಥೆ (ಎನ್‌ಐಎ) ಹೆಚ್ಚುವರಿ ಚಾರ್ಜ್ಶೀಟ್ ಸಲ್ಲಿಸಿದೆ.

ಜೈಲಿನೊಳಗೂ ಭಯೋತ್ಪಾದನಾ ಚಟುವಟಿಕೆ ನಡೆಸಿದ ಘಟನೆಗೆ ಸಂಬAಧಿಸಿದAತೆ ಈಗಾಗಲೇ ಚಾರ್ಜ್ಶೀಟ್ ಸಲ್ಲಿಸಿದ್ದ ಎನ್‌ಐಎ, ಇದೀಗ ಹೆಚ್ಚುವರಿಯಾಗಿ ಆರೋಪಿಗಳನ್ನು ಗುರುತಿಸಿ ನ್ಯಾಯಾಲಯಕ್ಕೆ ವಿವರಗಳನ್ನು ಸಲ್ಲಿಸಿದೆ.

ಎನ್‌ಐಎ ಸಲ್ಲಿಸಿರುವ ಹೆಚ್ಚುವರಿ ಚಾರ್ಜ್ಶೀಟ್‌ನಲ್ಲಿ ನಗರ ಸಶಸ್ತ್ರ ಪಡೆಯ ಎಎಸ್‌ಐ ಚಾಂದ್ ಪಾಷಾ, ಅನಿಸಾ ಫಾತಿಮಾ ಹಾಗೂ ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯರಾಗಿದ್ದ ಡಾ. ನಾಗರಾಜ್ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ. ಈ ಮೂವರು ಆರೋಪಿಗಳು ನಸೀರ್‌ಗೆ ಜೈಲಿನೊಳಗಿಂದಲೇ ನೆರವು ನೀಡಿದ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬAಧಿಸಿದAತೆ ಇದಕ್ಕೂ ಮೊದಲು ಎನ್‌ಐಎ, ಪರಾರಿಯಾಗಿದ್ದ ಜುನೈದ್ ಸೇರಿ ಒಟ್ಟು ೯ ಮಂದಿ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿತ್ತು. ಇದೀಗ ತನಿಖೆ ಮತ್ತಷ್ಟು ವಿಸ್ತಾರಗೊಂಡಿದ್ದು, ಹೆಚ್ಚುವರಿ ಆರೋಪಿಗಳನ್ನು ಒಳಗೊಂಡAತೆ ಹೊಸ ಚಾರ್ಜ್ಶೀಟ್ ಸಲ್ಲಿಸಲಾಗಿದೆ.

ಹವಾಲಾ ಮೂಲಕ ಕೊಲ್ಲಿ ರಾಷ್ಟçಗಳಿಂದ ಹಣ ಪಡೆದು ಭಾರತದಲ್ಲಿ ಭಯೋತ್ಪಾದನಾ ಕೃತ್ಯ ನಡೆಸಲು ಯುವಕರ ನೇಮಕ ಮಾಡಿಕೊಂಡು , ದುಷ್ಕೃತ್ಯಕ್ಕೆ ಮುಂದಾಗಿದ್ದರೆAದು ಚಾರ್ಜ್ ಶೀಟ್ ಹೇಳಿದೆ.

ಅನಿಸಾ ಫಾತಿಮಾ, ಜುನೈದ್ ಅಹಮದ್ ಅವರ ತಾಯಿಯಾಗಿದ್ದು, ಮಗನ ಸೂಚನೆಯಂತೆ ಉಗ್ರ ನಸೀರ್‌ಗೆ ಹಣಕಾಸಿನ ನೆರವು ಒದಗಿಸುತ್ತಿದ್ದಳು ಎಂಬ ಆರೋಪ ಇದೆ. ಅಲ್ಲದೆ, ಹ್ಯಾಂಡ್ ಗ್ರೈನೇಡ್, ವಾಕಿಟಾಕಿ ಸೇರಿದಂತೆ ಅಪಾಯಕಾರಿ ಸಾಧನಗಳ ನಿರ್ವಹಣೆ, ಆರೋಪಿಗಳ ನಡುವೆ ಸಂಪರ್ಕ ಸಾಧಿಸಲು ಸಹಾಯ ಮಾಡಿದ ಆರೋಪವೂ ಆಕೆಯ ಮೇಲೆ ಹೊರಿಸಲಾಗಿದೆ. ಮತ್ತೊಬ್ಬ ಆರೋಪಿ ಸಲ್ಮಾನ್ ಖಾನ್ ಪರಾರಿಯಾಗಲು ಸಹ ಅನಿಸಾ ಫಾತಿಮಾ ನೆರವು ನೀಡಿದ್ದಾಳೆ ಎಂದು ಎನ್‌ಐಎ ಆರೋಪಿಸಿದೆ. ಇನ್ನೊಂದು ಪ್ರಮುಖ ಆರೋಪಿ ಚಾಂದ್ ಪಾಷಾ, ಸಿಎಆರ್ (ಸಿಟಿ ಆರ್ಮ್ಡ್ ರಿಸರ್ವ್) ಎಎಸ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದನು. ಹಣದ ಆಸೆಗೆ ಶಂಕಿತ ಉಗ್ರರ ಬಗ್ಗೆ ಮಾಹಿತಿಯನ್ನು ಸೋರಿಕೆ ಮಾಡಿದ್ದಾನೆ ಎಂಬ ಗಂಭೀರ ಆರೋಪ ಆತನ ವಿರುದ್ಧ ಹೊರಿಸಲಾಗಿದೆ. ೪ಐದನೇ ಪುಟಕ್ಕೆ

ಉಗ್ರ ಟೀ ನಸೀರ್‌ನ ಮಾಹಿತಿ ಹಾಗೂ ಜೈಲಿನಿಂದ ಇವನನ್ನು ಹೊರಗೆ ಕರೆದೊಯ್ಯುವ ವೇಳೆ ಬೆಂಗಾವಲು ಪಡೆಯಲ್ಲಿ ಯಾರೆಲ್ಲಾ ಇರುತ್ತಾರೆ ಎಂಬ ವಿವರಗಳನ್ನು ಸಲ್ಮಾನ್ ಖಾನ್‌ಗೆ ರವಾನಿಸುತ್ತಿದ್ದನು ಎಂದು ಎನ್‌ಐಎ ಚಾರ್ಜ್ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಉಗ್ರನನ್ನು ಜೈಲಿಂದ ಹೊರಗೆ ಕರೆದೊಯ್ಯುವ ವೇಳೆ ಬಾಂಬ್ ಧಾಳಿ ನಡೆಸಿ ಇವನು ತಪ್ಪಿಸಿಕೊಳ್ಳಲು ಯೋಜನೆ ಹಾಕಲಾಗಿತ್ತು. ಆದರೆ ಅಷ್ಟರಲ್ಲಿ ಜೈಲಿಗೆ ನಿಯಮಿತವಾಗಿ ಭೇಟಿ ನೀಡುತಿದ್ದ ವೈದ್ಯ ಮೊಬೈಲ್ ಸಾಗಿಸುವಾಗಲೇ ಸಿಕ್ಕಿ ಬಿದ್ದಿದ್ದ. ಇವನು ಹೊರಗೆ ೧೦ ಸಾವಿರ ರೂಪಾಯಿಗೆ ಸಿಗುವ ಮೊಬೈಲ್ ಅನ್ನು ಭಯೋತ್ಪಾದಕ ಶಂಕಿತರಿಗೆ ೩೦ ಸಾವಿರ ರೂಪಾಯಿಗೆ ಮಾರಾಟ ಮಾಡುತಿದ್ದುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮನೋವೈದ್ಯನಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ನಾಗರಾಜ್ ತನ್ನ ದುರಾಸೆ ಮತ್ತು ಹಣದಾಹದಿಂದ ಉಗ್ರರ ಬೆಂಬಲಕ್ಕೆ ನಿಂತಿದ್ದ , ಅಲ್ಲದೆ ಉಗ್ರ ಟೀ ನಸೀರ್‌ಗೆ ಕೂಡ ಮೊಬೈಲ್ ಫೋನ್ ಒದಗಿಸಲಾಗಿದ್ದು, ಆ ಮೊಬೈಲ್ ಮೂಲಕ ನಸೀರ್ ಭಯೋತ್ಪಾದನಾ ಚಟುವಟಿಕೆಗಳನ್ನು ಸಂಚಾಲನೆ ಮಾಡುತ್ತಿದ್ದನೆಂದು ಎನ್‌ಐಎ ಚಾರ್ಜ್ಶೀಟ್ ತಿಳಿಸಿದೆ.

ಉಗ್ರರು ೨೦೦೮ ರ ಜುಲೈ ೨೫ ರ ಶುಕ್ರವಾರದಂದು ಬೆಂಗಳೂರಿನ ಜನನಿಬಿಡ ಸ್ಥಳಗಳಲ್ಲಿ ಮಧ್ಯಾಹ್ನ ೧.೨೦ ರಿಂದ ೨.೩೫ ರ ವರೆಗೆ ಟಿಫಿನ್ ಬಾಕ್ಸ್ ನಲ್ಲಿ ಬಾಂಬ್ ಇಟ್ಟು ೭ ಕಡೆ ಸರಣಿ ಸ್ಪೋಟ ನಡೆಸಿದ್ದರು. ಇದರಲ್ಲಿ ಒರ್ವ ಮೃತಪಟ್ಟು ೨೦ ಕ್ಕೂ ಅಧಿಕ ಜನ ಗಾಯಗೊಂಡಿದ್ದರು. ೨೬ ರಂದು ಕೋರಮಂಗಲದ ಫೋರಂ ಮಾಲ್ ಬಳಿ ಸ್ಫೋಟಗೊಳ್ಳದ ಬಾಂಬ್ ಅನ್ನು ಬಾಂಬ್ ನಿಷ್ರಿö್ಕಯ ದಳ ವಶಪಡಿಸಿಕೊಂಡಿತ್ತು. ಈ ಪ್ರಕರಣದ ತನಿಖೆ ನಡೆಸಿದ್ದ ರಾಷ್ಟ್ರೀಯ ತನಿಖಾ ಏಜೆನ್ಸಿಗಳು ಇತರ ಆರೋಪಿಗಳನ್ನು ಬಂದಿಸಿದ್ದರೂ ಸೂತ್ರಧಾರ ನಸೀರ್ ಸಿಕ್ಕಿರಲಿಲ್ಲ. ಇವನು ಡಿಸೆಂಬರ್ ೧೫ ರಂದು ಬಾಂಗ್ಲಾದೇಶಕ್ಕೆ ಪರಾರಿ ಆಗಲು ಯತ್ನಿಸುತಿದ್ದಾಗ ಗಡಿಯಲ್ಲಿ ಬಂಧಿಸಲಾಗಿತ್ತು. ಬಂಧನದಲ್ಲಿದ್ದಾಗಲೂ ಇವನು ತನ್ನ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದುದು ಭದ್ರತಾ ಪಡೆಗಳು ಪೋನ್‌ಗಳ ಮೇಲೆ ನಿಗಾ ಇಟ್ಟಿದ್ದಾಗ ಪತ್ತೆ ಆಗಿತ್ತು. ಇದೀಗ ಬಂಧಿತರಾಗಿರುವ ಮೂವರೂ ಕೂಡ ಭಯೋತ್ಪಾದನಾ ಕೃತ್ಯದ ಮೂಲ ಆರೋಪಿಗಳನ್ನಾಗಿ ಮಾಡಲಾಗಿದೆ.

ಇನ್ನೂ ತನಿಖೆ ಮುಂದುವರಿದಿದ್ದು, ಈ ಜಾಲದಲ್ಲಿ ಇನ್ನಾರಾದರೂ ಭಾಗಿಯಾಗಿದ್ದಾರಾ ಎಂಬುದರ ಬಗ್ಗೆ ಎನ್‌ಐಎ ಮಾಹಿತಿ ಸಂಗ್ರಹಿಸುತ್ತಿದೆ.