ವೀರಾಜಪೇಟೆ, ಜ. ೨: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವೀರಾಜಪೇಟೆ ತಾಲೂಕು, ಸ್ವ-ಸಹಾಯ ಸಂಘಗಳ ಒಕ್ಕೂಟಗಳ ಇವರ ಆಶ್ರಯದಲ್ಲಿ ಕೃಷಿ ಕಾರ್ಯಕ್ರಮದಡಿಯಲ್ಲಿ ಸ್ವ-ಉದ್ಯೋಗ ಮಾಹಿತಿ ಕಾರ್ಯಕ್ರಮ ಅಮ್ಮತ್ತಿ ವಲಯದ ಹಾಲುಗುಂದ ಕಾರ್ಯಕ್ಷೇತ್ರದ ಬೈರಂಬಾಡ ಸಮುದಾಯ ಭವನದಲ್ಲಿ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಸ್ವಉದ್ಯೋಗದಲ್ಲಿ ತನ್ನನ್ನು ತೊಡಗಿಸಿಕೊಂಡ ಸುಧಾ ಮಾತನಾಡಿ, ತಾನು ಮನೆಯಲ್ಲಿ ತಯಾರಿಸಿದ ಮಸಾಲೆ ಪದಾರ್ಥಗಳು ಪ್ರಾರಂಭದಲ್ಲಿ ತಿಂಗಳಿಗೆ ಮೂರು ಸಾವಿರ ಆದಾಯ ಬರುತ್ತಿದ್ದು, ಈಗ ತಿಂಗಳಿಗೆ ಐವತ್ತು ಸಾವಿರದವರೆಗೆ ಆದಾಯ ಬರುತ್ತದೆ. ಇದರಿಂದ ನನ್ನ ಜೀವನ ಮಟ್ಟ ಸುಧಾರಣೆಯಾಗಿದೆ. ಯಾವ ರೀತಿಯಲ್ಲಿ ಮಸಾಲ ಪದಾರ್ಥಗಳನ್ನು ಮಾಡುವ ಬU
ೆ್ಗ ಮತ್ತು ಅಣಬೆ ಕೃಷಿ ಮಾಡುವ ಬಗ್ಗೆ, ಅಣಬೆ ಕೃಷಿ ಮಾಡುವುದು ತುಂಬಾ ಲಾಭದಾಯಕ, ಕಡಿಮೆ ವೆಚ್ಚ ಹೆಚ್ಚು ಲಾಭಗಳಿಸಬಹುದು. ಮನೆಯಲ್ಲಿ ಅಣಬೆ ಕೃಷಿ ಮಾಡುವ ಎಂದು ಮಾಹಿತಿ ನೀಡಿದರು. ವಲಯದ ಮೇಲ್ವಿಚಾರಕ ಧನೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೃಷಿ ಮೇಲ್ವಿಚಾರಕ ವಸಂತ್, ಹಾಲುಗುಂದ ಸೇವಾ ಪ್ರತಿನಿಧಿ ಮೀನಾಕ್ಷಿ, ಚೆಂಬೆಬೆಳ್ಳೂರು ಸೇವಾ ಪ್ರತಿನಿಧಿ ದೇವಕಿ, ಪ್ರಗತಿಪರ ಕೃಷಿಕರು ಹಾಲುಗುಂದ ಒಕ್ಕೂಟ ಅಧ್ಯಕ್ಷ ನೇತ್ರಾವತಿ, ದಮಯಂತಿ ಸಂಘದ ಸದಸ್ಯರು ಇದ್ದರು.