ಸೋಮವಾರಪೇಟೆ, ಜ. ೨: ಹುದುಗೂರು ಅರಣ್ಯ ವಲಯ ವ್ಯಾಪ್ತಿಯ ಯಡವನಾಡು ವಿಭಾಗಕ್ಕೆ ಒಳಪಡುವ ಕಾಜೂರು ಮೀಸಲು ಅರಣ್ಯದಲ್ಲಿ ಭಾರೀ ಪ್ರಮಾಣದ ತೇಗದ ಮರಗಳು ಕಳ್ಳತನವಾಗಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಹುದುಗೂರು ಉಪ ವಲಯ ಅರಣ್ಯಾಧಿಕಾರಿಗಳ ತಲೆದಂಡವಾಗಿದೆ.
ಅರಣ್ಯ ಸಂಚಾರಿ ದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಾನಶ್ರೀ ಅವರು ಇಲಾಖಾ ಮಟ್ಟದಲ್ಲಿ ತನಿಖೆ ನಡೆಸಿ ನೀಡಿದ ವರದಿಯಂತೆ, ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಷ್ಣಿ ಅವರು, ಹುದುಗೂರು ವಿಭಾಗದ ಡಿಆರ್ಎಫ್ಓ ಚಂದ್ರೇಶ್ ಅವರನ್ನು ಅಮಾನತುಗೊಳಿಸಿ ಆದೇಶ ಮಾಡಿದ್ದಾರೆ.
ಕಾಜೂರು ಮೀಸಲು ಅರಣ್ಯದಿಂದ ಭಾರೀ ಪ್ರಮಾಣದ ತೇಗದ ಮರಗಳು ನಿರಂತರ ಕಳ್ಳತನವಾಗಿದ್ದು, ಪ್ರಕರಣದಲ್ಲಿ ಆರೋಪಿಗಳ ಸಂಖ್ಯೆ ೧೦ಕ್ಕೆ ಏರಿಕೆಯಾಗಿದೆ. ಇತ್ತ ಮರಗಳ ನಾಟಾಗಳನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ತೊಡಗಿದ್ದು, ಕಳುವಾಗಿರುವ ತೇಗದ ಮರಗಳ ಬುಡಗಳನ್ನು ಹುಡುಕುತ್ತಿದ್ದಾರೆ.
ಮೀಸಲು ಅರಣ್ಯದಲ್ಲಿ, ಅದೂ ಸಹ ಅರಣ್ಯ ಇಲಾಖಾ ಸಿಬ್ಬಂದಿಗಳ ವಸತಿ ಗೃಹದ ಪ್ರದೇಶದಲ್ಲಿ, ಆರ್ಆರ್ಟಿ, ಎಲಿಫೆಂಟ್ ಟಾಸ್ಕ್ ಫೋರ್ಸ್ ಸಿಬ್ಬಂದಿಗಳ ಓಡಾಟ ಇರುವ ಪ್ರದೇಶದಿಂದಲೇ ೩೦ಕ್ಕೂ ಅಧಿಕ ತೇಗದ ಮರಗಳು ಕಳ್ಳತನವಾಗಿರುವುದು ಇಲಾಖೆಗೆ ಕಪ್ಪುಚುಕ್ಕೆಯಾಗಿದೆ.
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಸ್ಥಳೀಯ ಮಟ್ಟದಲ್ಲಿರುವ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಹೊರಗುತ್ತಿಗೆ ನೌಕರರ ಕರ್ತವ್ಯದ ಬಗ್ಗೆ ತನಿಖೆ ನಡೆಸಲು ಅರಣ್ಯ ಸಂಚಾರಿ ದಳದ ಎಸಿಎಫ್ ಗಾನಶ್ರೀ ಅವರಿಗೆ ನಿರ್ದೇಶನ ನೀಡಲಾಗಿತ್ತು.
ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಷ್ಣಿ ಅವರ ನಿರ್ದೇಶನದಂತೆ ಗಾನಶ್ರೀ ಅವರು ತನಿಖೆ ನಡೆಸಿದ್ದು, ಇದರಲ್ಲಿ ಉಪ ವಲಯ ಅರಣ್ಯಾಧಿಕಾರಿ ಚಂದ್ರೇಶ್ ಅವರ ಕರ್ತವ್ಯ ಲೋಪ ಕಂಡುಬAದಿರುವ ಹಿನ್ನೆಲೆ, ಸೇವೆಯಿಂದ ಅಮಾನತು ಮಾಡಲಾಗಿದೆ.
ಈ ಮಧ್ಯೆ ಅರಣ್ಯ ಭೂಮಿಯಲ್ಲಿನ ಬೆಲೆಬಾಳುವ ೩೦ಕ್ಕೂ ಅಧಿಕ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಲಾಗಿರುವ ಪ್ರಕರಣದಲ್ಲಿ, ಅರಣ್ಯ ಅಧಿಕಾರಿಗಳು ಪ್ರಕರಣ ದಾಖಲಿಸಿರುವುದು ಸರಿಯಷ್ಟೆ. ಆದರೆ, ಸದರಿ ಪ್ರಕರಣದಲ್ಲಿ ಅರಣ್ಯ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಇಲಾಖೆಯಿಂದ ಸೂಕ್ತವಾದ ಕಾನೂನು ಕ್ರಮ ಜರುಗಿಸದ ಕುರಿತು ಮತ್ತು ಇಲಾಖಾ ಅಧಿಕಾರಿಗಳ ನಿರ್ಲಕ್ಷ್ಯ, ಕರ್ತವ್ಯ ಲೋಪ, ಅಧಿಕಾರ ದುರುಪಯೋಗ, ಅಕ್ರಮದಂತಹ ಅನುಮಾನ ವ್ಯಕ್ತಪಡಿಸಿ, ಮಾಧ್ಯಮಗಳಲ್ಲಿ ವರದಿಯಾಗಿರುವುದು ತನ್ನ ಗಮನಕ್ಕೆ ಬಂದಿದ್ದು, ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ, ಸದರಿ ಪ್ರಕರಣದ ಕುರಿತು ಅರಣ್ಯ ಸಂಚಾರಿ ದಳದಿಂದ ತನಿಖೆ ನಡೆಸಿ, ಪ್ರಾಥಮಿಕ ವರದಿಯನ್ನು ಒಂದು ವಾರದೊಳಗಾಗಿ ಸಲ್ಲಿಸಲು ಹಾಗೂ ಸದರಿ ಪ್ರಕರಣದಲ್ಲಿ ಈವರೆಗೆ ಕೈಗೊಳ್ಳಲಾಗಿರುವ ಕ್ರಮಗಳು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ವರದಿಯೊಂದಿಗೆ ಕಡತ ಮಂಡಿಸುವAತೆ ತಾ. ೨೭.೧೨.೨೦೨೫ರಂದು ರಾಜ್ಯ ಅರಣ್ಯ, ವನ್ಯಜೀವಿ ಮತ್ತು ಪರಿಸರ ಇಲಾಖಾ ಸಚಿವ ಈಶ್ವರ ಬಿ. ಖಂಡ್ರೆ ಅವರು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಆದೇಶಿಸಿದ್ದರು.
ಈ ಆದೇಶ ಬಂದ ೫ ದಿನಗಳ ತರುವಾಯ ಪ್ರಕರಣಕ್ಕೆ ಸಂಬAಧಿಸಿದAತೆ ಡಿಆರ್ಎಫ್ಓ ಚಂದ್ರೇಶ್ ಅವರ ತಲೆದಂಡವಾಗಿದೆ. ಕೃತ್ಯ ನಡೆದ ಸ್ಥಳಕ್ಕೆ ಹುದುಗೂರು ಹಾಗೂ ಮಾದಾಪುರ ಶಾಖೆಗಳು ಒಳಪಡುತ್ತಿದ್ದು, ಈ ಎರಡೂ ಶಾಖೆಗಳ ತಲಾ ಓರ್ವ ಫಾರೆಸ್ಟರ್, ಓರ್ವ ಗಾರ್ಡ್, ರ್ಯಾಪಿಡ್ ರೆಸ್ಪಾನ್ಸ್ ಟೀಂನ ನಾಲ್ಕು ಹಾಗೂ ಎಲಿಫೆಂಟ್ ಟಾಸ್ಕ್ ಫೋರ್ಸ್ನ ನಾಲ್ವರು ಸಿಬ್ಬಂದಿಗಳು ಸೇರಿದಂತೆ ಒಟ್ಟು ೧೨ ಮಂದಿಯ ವಿರುದ್ಧ ಇಲಾಖಾ ಮಟ್ಟದಲ್ಲಿ ಆಂತರಿಕ ತನಿಖೆ ನಡೆದಿದೆ.