ಮಡಿಕೇರಿ, ಜ. ೨: ಕೊಡವ ಭಾಷೆಯನ್ನು ಭಾರತ ಸಂವಿಧಾನದ ೮ನೇ ಪರಿಚ್ಛೇದದಲ್ಲಿ ಸೇರ್ಪಡಿಸುವ ಕುರಿತಾಗಿ ರಾಜ್ಯದ ಉಭಯ ಸದನಗಳಲ್ಲಿ ಅಧಿಕೃತ ನಿರ್ಣಯವನ್ನು ಮಂಡಿಸಿ ಶಿಫಾರಸ್ಸು ಮಾಡಬೇಕಾಗಿರುವುದರಿಂದ, ಕೊಡವ ಭಾಷೆಯ ಐತಿಹಾಸಿಕ ಹಿನ್ನಲೆ ಹಾಗೂ ಕೊಡವ ಸಂಸ್ಕೃತಿಯ ಕುರಿತು ತಜ್ಞರಿಂದ ವರದಿಯನ್ನು ನೀಡಬೇಕಾಗಿ ರಾಜ್ಯದ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳ ಪತ್ರದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಗೆ ಪತ್ರ ಬಂದಿದೆ. ಇದರಂತೆ ತಾ. ೫ ರಂದು ಬೆಳಿಗ್ಗೆ ೧೦ ಗಂಟೆಗೆ ವೀರಾಜಪೇಟೆ ಕೊಡವ ಸಮಾಜದಲ್ಲಿ ಮಹತ್ವದ ಸಭೆಯನ್ನು ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡರ ಉಪಸ್ಥಿತಿಯಲ್ಲಿ, ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ. ಸಭೆಗೆ ಕೊಡವ ಭಾಷಾಭಿಮಾನಿಗಳು, ಎಲ್ಲಾ ಸಂಘ, ಸಂಸ್ಥೆ, ಸಮಾಜಗಳ ಅಧ್ಯಕ್ಷರುಗಳು, ಭಾಷಾ ತಜ್ಞರು, ಸಾಹಿತಿಗಳು, ಬರಹಗಾರರು, ಕಲಾವಿದರು, ತಮ್ಮ ತಮ್ಮಲ್ಲಿ ಇರುವ ಕೊಡವ ಭಾಷೆ, ಸಂಸ್ಕೃತಿಯ ಬಗೆಗಿನ ಮಾಹಿತಿ, ಸಾಕ್ಷಾö್ಯಧಾರಗಳು, ಓಲೆಗರಿಗಳು, ಅರಸರು ಹಾಗೂ ಬ್ರಿಟೀಷರ ಕಾಲದ ಕೊಡವ ಭಾಷೆ, ಸಂಸ್ಕೃತಿಯ ಬಗೆಗಿನ ಬರಹಗಳು ಇದ್ದಲ್ಲಿ ಸಭೆಗೆ ತಂದು ಸಹಕರಿಸಬೇಕಾಗಿ ಅಕಾಡೆಮಿ ರಿಜಿಸ್ಟಾçರ್ ಚಿನ್ನಸ್ವಾಮಿ ಮನವಿ ಮಾಡಿದ್ದಾರೆ.