ಮಡಿಕೇರಿ, ಜ. ೨: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು ಮಡಿಕೇರಿಯಲ್ಲಿ ಬಾಕಿ ಉಳಿದಿರುವ ಪ್ರಥಮ ವರ್ಷದ ಬಿ.ಎಸ್ಸಿ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ-೧೧, ಬಿ.ಎಸ್ಸಿ ಮೆಡಿಕಲ್ ಇಮ್ಯಾಜಿಂಗ್ ಟೆಕ್ನಾಲಜಿ-೨೦, ಬಿಎಸ್ಸಿ ಆಪ್ಟೋಮೆಟ್ರಿ-೨೦, ಬಿಎಸ್ಸಿ ರೆಸ್ಪಿರೆಟರಿ ಕೇರ್ ಟೆಕ್ನಾಲಜಿ-೧೯ ಸೀಟುಗಳನ್ನು ಹಾಗೂ ದ್ವಿತೀಯ ವರ್ಷದ ಬಿಎಸ್ಸಿ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ-೧೫, ಬಿಎಸ್ಸಿ ಅನಸ್ತೇಸಿಯಾ ಮತ್ತು ಆಪರೇಷನ್ ಥಿಯೇಟರ್ ಟೆಕ್ನಾಲಜಿ-೧೧, ಬಿಎಸ್ಸಿ ಮೆಡಿಕಲ್ ಇಮ್ಯಾಜಿಂಗ್ ಟೆಕ್ನಾಲಜಿ-೧೯, ಬಿಎಸ್ಸಿ ರೆಸ್ಪಿರೆಟರಿ ಕೇರ್ ಟೆಕ್ನಾಲಜಿ-೨೦, ಬಿಎಸ್ಸಿ ಆಪ್ಟೋಮೆಟ್ರಿ-೧೮ ಸೀಟುಗಳಿಗೆ ನೇರ ಆಯ್ಕೆ (ವಾಕ್ ಇನ್ ಅಡ್ಮಿಷನ್) ಆಹ್ವಾನಿಸಲಾಗಿದೆ. ಮೆರಿಟ್ ಆಧಾರದ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು. ಕೆಇಎ ಹಾಗೂ ಆರ್ಜಿಯುಎಚ್ಎಸ್ ಮಾನದಂಡಗಳ ಪ್ರವೇಶಾತಿಯ ಅರ್ಹತೆಯನ್ನು ಹೊಂದಿರುವ ವಿದ್ಯಾರ್ಥಿಗಳು ದಾಖಲಾತಿಗಳೊಂದಿಗೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ ಇಲ್ಲಿಗೆ ತಾ. ೮ ರಂದು ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೪ ಗಂಟೆಯೊಳಗೆ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳೊಂದಿಗೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿಯಲ್ಲಿ ಹಾಜರಾಗಿ ನೋಂದಣಿ ಪಡೆಯಬಹುದು.