ವೀರಾಜಪೇಟೆ, ಜ. ೨: ಕೊಡಗಿನಲ್ಲಿ ಒಂದು ವರ್ಷದ ಅವಧಿಗೆ ೨೦೨೫ ನವೆಂಬರ್‌ನಿAದ ೨೦೨೬ ನವೆಂಬರ್‌ವರೆಗೆ ಕೊಡಗಿನ ವಿವಿಧ ಭಾಗಗಳಲ್ಲಿ ನಾಲ್ಕು ಸಾರ್ವಜನಿಕ ಕಾರ್ಯಕ್ರಮ ಹಾಗೂ ೧೫ ಪದವಿ ಕಾಲೇಜುಗಳಲ್ಲಿ ನುಡಿ ಉತ್ಸವ ಕಾರ್ಯಕ್ರಮ ಜರುಗಲಿದೆ ಎಂದು ಕೊಡಗು ಜಿಲ್ಲಾ ದಸಾಪದ ಅಧ್ಯಕ್ಷ ಹಾಗೂ ನುಡಿ ಉತ್ಸವ ಸಮಿತಿಯ ಅಧ್ಯಕ್ಷ ಅರ್ಜುನ್ ಮೌರ್ಯ ಮಾಹಿತಿ ನೀಡಿದರು.

ವೀರಾಜಪೇಟೆಯ ಪ್ರವಾಸಿ ಮಂದಿರದಲ್ಲಿ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು ನುಡಿ ನಡೆ ಯುವಜನರ ಕಡೆ ಎಂಬ ಧ್ಯೇಯ ವಾಕ್ಯದೊಂದಿಗೆ ನುಡಿ ಗೀತಗಾಯನ, ನುಡಿ ಸಾಹಿತ್ಯ ಲಹರಿ, ನುಡಿ ನೃತ್ಯ ಸಂಭ್ರಮ, ನುಡಿ ಸಂಸ್ಕöÈತಿಗಳAತಹ ಸ್ಪರ್ಧೆಗಳೊಂದಿಗೆ ಪದವಿ ಹಂತದ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದರ ಮುಖ್ಯ ಉದ್ದೇಶ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಕುಂಠಿತವಾಗುತ್ತಿರುವ ಭಾಷೆಯ ಬಳಕೆ, ಭಾಷಾಭಿಮಾನ, ಸಾಹಿತ್ಯ ಅಭಿಮಾನಗಳನ್ನು ಯುವ ಜನರಲ್ಲಿ ಬೆಳೆಸುವುದ ರೊಂದಿಗೆ ಶ್ರೀಮಂತವಾದ ಕನ್ನಡ ನಾಡು ನುಡಿ, ಸಂಸ್ಕöÈತಿ ಸಾಹಿತ್ಯ, ಪರಂಪರೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವು ದಾಗಿದೆ.

ಈಗಾಗಲೇ ಲಾಂಛನವನ್ನು ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಬಿಡುಗಡೆ ಮಾಡಲಾಗಿದ್ದು ತದನಂತರ ನುಡಿ ಗೀತ ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿದೆ, ವೀರಾಜಪೇಟೆ ಸರಕಾರಿ ಪದವಿ ಕಾಲೇಜಿನಲ್ಲಿ ಉಪನ್ಯಾಸವನ್ನು ಆಯೋಜಿಸಿದ್ದೇವೆ ಎಂದು ಹೇಳಿದರು.

ಪದವಿ, ಸ್ನಾತ್ತಕೋತ್ತರ ಪದವಿ ಹಾಗೂ ತತ್ಸಮಾನ ವಿದ್ಯಾರ್ಥಿಗಳಿಗೆ ಮಾರ್ಚ್ ಕೊನೆಯ ವಾರದಲ್ಲಿ ಅಂತರ ಕಾಲೇಜು ನೃತ್ಯ ಸ್ಪರ್ಧೆ, ನುಡಿ ನೃತ್ಯ ಸಂಭ್ರಮವನ್ನು ಏರ್ಪಡಿಸಲಾಗುವುದು ಪ್ರಥಮ ರೂ. ೨೫,೦೦೦ ಹಾಗೂ ದ್ವಿತೀಯ ರೂ. ೧೫,೦೦೦ ನಗದನ್ನು ಹಾಗೂ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಕನ್ನಡದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು ಎಂದು ಹೇಳಿದರು.

ನುಡಿ ಉತ್ಸವ ಸಮಿತಿ ಹಾಗೂ ಜಿಲ್ಲಾ ದಸಾಪದ ಕಾರ್ಯದರ್ಶಿ ಲಿಖಿತ್ ರೈ ಮಾತನಾಡಿ, ಯುವಜನರಿಗೆ ಭಾಷೆ ತಲುಪಬೇಕಾಗಿದೆ. ಭಾಷೆಯ ಬಗ್ಗೆ ಹೆಮ್ಮೆ ಮೂಡಿಸಲು, ಅಭಿಮಾನ ಮೂಡಿಸಲು ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವೈಚಾರಿಕ ಸಾಹಿತ್ಯದ ಜೊತೆಗೆ ವಿದ್ಯಾರ್ಥಿಗಳಿಗೆ ಇತಿಹಾಸದ ಬಗ್ಗೆಯೂ ಅರಿವು ಮೂಡಿಸುವ ಪ್ರಯತ್ನ ಇದಾಗಿದೆ.

ವಿಶ್ವ ಸಾಹಿತ್ಯವನ್ನು ಕನ್ನಡದಲ್ಲಿ ಓದುವಂತಾಗಬೇಕು. ಕನ್ನಡ ಸಾಹಿತ್ಯದ ಗಟ್ಟಿತನ ಎಲ್ಲರಿಗೂ ತಲುಪಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಈ ಸಂದರ್ಭ ನುಡಿ ಉತ್ಸವ ಸಮಿತಿಯ ಸಂಚಾಲಕ ಅಬ್ದುಲ್ ರೆಹಮಾನ್ ಉಪಸ್ಥಿತರಿದ್ದರು.