ಪೊನ್ನಂಪೇಟೆ, ಜ. ೨: ಕೊಡವ ಕುಟುಂಬಗಳ ನಡುವೆ ಕಂಡAಗಾಲದ ಮುಲ್ಲೇಂಗಡ ಕುಟುಂಬಸ್ಥರು ಮುಲ್ಲೇಂಗಡ ಕಪ್ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸುತ್ತಿದ್ದು, ಈ ಪಂದ್ಯಾವಳಿಯ ಲಾಂಛನ ಬಿಡುಗಡೆ ಕಾರ್ಯಕ್ರಮ ಕುಟುಂಬದ ಐನ್‌ಮನೆಯಲ್ಲಿ ಜರುಗಿತು.
ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಅವರು ಲಾಂಛನ ಬಿಡುಗಡೆಗೊಳಿಸಿದರು. ಕುಟುಂಬದ ಅಧ್ಯಕ್ಷ ಶಂಕರಿ ಪೊನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರು, ಗ್ರಾಮೀಣ ಕ್ರೀಡೆಯಾದ ಕಬಡ್ಡಿಯನ್ನು ಕೊಡವ ಕುಟುಂಬಗಳ ನಡುವೆ ಆಯೋಜಿಸಿರುವುದು ಸಂತೋಷದ ವಿಚಾರ.ರಾಜ್ಯ, ರಾಷ್ಟç, ಅಂತರರಾಷ್ಟಿçÃಯ ಮಟ್ಟದಲ್ಲಿ ಕೊಡಗಿನ ಕ್ರೀಡಾಪಟುಗಳು ಕಾಣಸಿಗುವುದು ಅಪರೂಪವಾಗಿದೆ.
ಗ್ರಾಮೀಣ ಭಾಗದಲ್ಲಿ ಹಲವು ಕ್ರೀಡಾ ಪ್ರತಿಭೆಗಳು ಕಾಣಸಿಗುತ್ತವೆ ಈ ಪ್ರತಿಭೆಗಳು ಮುಂದುವರಿಯಲು ಅವಕಾಶದ ಕೊರತೆಯೋ ಶಿಸ್ತಿನ ಕೊರತೆಯೋ ತಿಳಿಯುತ್ತಿಲ್ಲ. ಮುಂದಿನ ದಿನಗಳಲ್ಲಿ ಕೊಡಗಿನ ಅಂತರರಾಷ್ಟಿçÃಯ ಮಟ್ಟದ ಕ್ರೀಡಾಪಟುಗಳ ಜೊತೆ ಚರ್ಚಿಸಿ, ಕೊಡಗಿನ ಪ್ರತಿಭೆಗಳು ಅಂತರರಾಷ್ಟಿçÃಯ ಮಟ್ಟದಲ್ಲಿ ಕ್ರೀಡೆಯಲ್ಲಿ ಭಾಗವಹಿಸಲು ಬೇಕಾದ ತರಬೇತಿಯ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗಿದೆ. ಕ್ರೀಡೆಯಲ್ಲಿಯೂ ಉತ್ತಮ ಭವಿಷ್ಯವಿದೆ ಎಂಬುದನ್ನು ಮಕ್ಕಳಿಗೆ ಮನದಟ್ಟು ಮಾಡಿಕೊಡಬೇಕು. ಹಾಗೆ ಕೊಡವ ಕುಟುಂಬಗಳ ನಡುವೆ ನಡೆಯುವ ಈ ಕಬ್ಬಡಿ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಲು ಬೇಕಾದ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಪಾಂಡAಡ ಕುಟ್ಟಣಿ ಅವರು ಆಯೋಜಿಸಿದ ಕೊಡವ ಕುಟುಂಬಗಳ ನಡುವಿನ ಹಾಕಿ ಕ್ರೀಡೆಯಿಂದ ಇತರ ಕ್ರೀಡೆಗಳಿಗೂ ಉತ್ತೇಜನ ದೊರೆಯಿತು. ಕ್ರೀಡೆಯಿಂದ ಕೊಡವ ಕುಟುಂಬಗಳ ನಡುವೆ ಉತ್ತಮ ಬಾಂಧವ್ಯ ಬೆಳೆಯಲು ಕಾರಣವಾಯಿತು. ಕೊಡವ ಕುಟುಂಬಗಳ ನಡುವೆ ನಡೆಯುವ ಈ ಕಬಡ್ಡಿ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.
ಮುಲ್ಲೇಂಗಡ ಕಬಡ್ಡಿ ಪಂದ್ಯಾವಳಿಯ ಅಧ್ಯಕ್ಷ ಮಧೋಶ್ ಪೂವಯ್ಯ ಮಾತನಾಡಿ, ಮುಲ್ಲೇಂಗಡ ಚಿಕ್ಕ ಕುಟುಂಬವಾದರೂ ಸ್ವತಂತ್ರ ಪೂರ್ವ ಕಾಲದಿಂದಲೂ ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿ ಜಿಲ್ಲೆಗೆ ಅತಿ ಹೆಚ್ಚು ಉಪಾದ್ರಿಯರನ್ನು ನೀಡಿದೆ. ಹಿಂದಿನ ಕಾಲದಲ್ಲಿಯೇ ಪರವಾನಿಗೆ ಹೊಂದಿ ಶಾಲೆ ಸ್ಥಾಪಿಸಿದಂತಹ ಕುಟುಂಬವಾಗಿದ್ದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಮುಂದುವರಿದುಕೊAಡು ಬಂದಿದೆ. ಮೊದಲ ಬಾರಿ ಹಾಕಿ ಕ್ರೀಡಾಕೂಟ ಆಯೋಜನೆಗೊಂಡಿದ್ದಾಗ ೬೨ ತಂಡಗಳಲ್ಲಿ ಈ ಕುಟುಂಬವೂ ಭಾಗವಹಿಸಿತ್ತು. ತನ್ನದೇ ಇತಿಹಾಸ ಹೊಂದಿರುವ ರಾಷ್ಟçಮಟ್ಟದ ಕ್ರೀಡೆಯಾದ ಕಬಡ್ಡಿ ಕ್ರೀಡೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೊಡಗಿನಲ್ಲಿ ಕೊಡವ ಕುಟುಂಬಗಳ ನಡುವೆ ಈ ಕ್ರೀಡಾಕೂಟವನ್ನು ಆಯೋಜಿಸಿದ್ದೇವೆ ಎಂದರು.
ಕುಟುAಬದ ಅಧ್ಯಕ್ಷ ಶಂಕರಿ ಪೊನ್ನಪ್ಪ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಕೊಡವರು ಹಾಗೂ ಇತರ ಕೊಡವ ಭಾಷಿಕರು ಇದ್ದಾರೆ. ಮುಲ್ಲೆಂಗಡ ಕುಟುಂಬವು ಸಣ್ಣ ಕುಟುಂಬವಾಗಿದ್ದರು, ಹೊಸದಾಗಿ ಕೊಡವ ಕುಟುಂಬಗಳ ನಡುವಿನ ಕಬಡ್ಡಿ ಪಂದ್ಯಾವಳಿ ಏರ್ಪಡಿಸಿದ್ದು, ಕೊಡವ ಕುಟುಂಬದ ಸ್ಪರ್ಧಾಳುಗಳು ಭಾಗವಹಿಸಿ ಯಶಸ್ವಿಗೊಳಿಸಿಕೊಡಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭ ಕಾರ್ಯದರ್ಶಿ ಕಿಟ್ಟು ಕುಟ್ಟಪ್ಪ, ಸುರೇಶ್ ಭೀಮಯ್ಯ, ಕೋಲತಂಡ ಬೋಪಯ್ಯ, ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಲ್ಲಿರ ಬೋಪಣ್ಣ, ಕಾಳಿಮಾಡ ಡಾ. ಶಿವಪ್ಪ, ಮುಲ್ಲೆಂಗಡ ಕುಟುಂಬಸ್ಥರು, ತವರುಮನೆ ಹೆಣ್ಣುಮಕ್ಕಳು, ಊರಿನವರಾದ ನಂಬುಡುಮಾಡ, ಅಪ್ಪಂಡೇರAಡ, ಚಂದುರ, ಕುಂಞÂರ ಕುಟುಂಬಸ್ಥರು ಹಾಗೂ ವೀರಾಜಪೇಟೆ ಮತ್ತು ಪೋನ್ನಂಪೇಟೆ ತಾಲೂಕು ಹಿರಿಯ ನಾಗರಿಕ ವೇದಿಕೆಯ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಮುನ್ನ ಗುರುಹಿರಿಯರನ್ನು ಪ್ರಾರ್ಥಿಸಿ, ಜ್ಯೋತಿ ಬೆಳಗಿ ಅಕ್ಕಿ ಹಾಕಲಾಯಿತು.