ಶನಿವಾರಸAತೆ, ಜ. ೩ : ಜೆಸಿಐ ಶನಿವಾರಸಂತೆ ಸಿರಿ ಸಂಸ್ಥೆಯ ಪದಗ್ರಹಣ ಸಮಾರಂಭ ತಾ..೪ ರಂದು (ಇಂದು) ಸಂಜೆ ೬.೩೦ಕ್ಕೆ ಪಟ್ಟಣದ ಚಿನ್ನಳ್ಳಿ ರಸ್ತೆಯ ಏರಿ ರೆಸಾರ್ಟ್ನಲ್ಲಿ ನಡೆಯಲಿದೆ.
ಜೆಸಿಐ ಇಂಡಿಯಾ ಜೋನ್-೧೪ರ ಜೋನ್ ಅಧ್ಯಕ್ಷ ಪ್ರಜ್ವಲ್ ಎಸ್.ಜೈನ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವ ಸಮಾರಂಭವನ್ನು ಜೆಸಿಐ ಇಂಡಿಯಾ ಸೆನೆಟ್ ಬೋರ್ಡ್ ಸದಸ್ಯ ಕೆ.ಎಸ್.ಕುಮಾರ್ ಉದ್ಘಾಟಿಸಲಿದ್ದಾರೆ. ಅತಿಥಿಯಾಗಿ ಸಾಹಿತಿ ಹಾಗೂ ಪತ್ರಕರ್ತೆ ಶ.ಗ. ನಯನತಾರಾ, ಇಂಡಕ್ಷನ್ ಅಧಿಕಾರಿಯಾಗಿ ಜೆಸಿಐ ಇಂಡಿಯಾ ಜೋನ್ ೧೪ರ ಜೋನ್ ಉಪಾಧ್ಯಕ್ಷ ವಿ.ಎಸ್. ಅಶೋಕ್ ಪಾಲ್ಗೊಳ್ಳಲಿದ್ದು, ಜೆಸಿಐ ಶನಿವಾರಸಂತೆ ಸಿರಿ ಅಧ್ಯಕ್ಷ ಸಿ. ರವಿ, ಜೆಸಿಐ ಕುಶಾಲನಗರ ಕಾವೇರಿ ಸ್ಪಾನ್ಸರ್ ಲೊ ಅಧ್ಯಕ್ಷೆ ತೇಜ ದಿನೇಶ್ ಹಾಗೂ ಜೆಸಿಐ ಶನಿವಾರಸಂತೆ ಸಿರಿ ಕಾರ್ಯದರ್ಶಿ ಸಿ.ಎಸ್. ಪ್ರತಾಪ್ ಉಪಸ್ಥಿತರಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.