ಮಡಿಕೇರಿ: ಹೊಸ ವರ್ಷಾಚರಣೆಯ ಸಂಭ್ರಮ ಬುಧವಾರ ನಡುರಾತ್ರಿ ಎಲ್ಲೆಡೆ ನಡೆದಿತ್ತು.
ಸರಿಯಾಗಿ ೧೨ ಗಂಟೆ ಸುಮಾರಿಗೆ ಜನರು ಪರಸ್ಪರ ಶುಭಾಶಯ ವಿನಿಮಯ, ಕೇಕ್ ಕತ್ತರಿಸುವುದು, ಬಾನಂಗಳದಲ್ಲಿ ಸಿಡಿಮದ್ದಿನ ಚಿತ್ತಾರದ ಸಂಭ್ರಮದಲ್ಲಿ ಹೊಸ ವರ್ಷಕ್ಕೆ ಸ್ವಾಗತ ಕೋರುತ್ತಿದ್ದರು.
ಈ ವೇಳೆ ರಾತ್ರಿ ಕರ್ತವ್ಯ ನಿರತರಾಗಿದ್ದ ಮಡಿಕೇರಿ ನಗರ ವೃತ್ತ ನಿರೀಕ್ಷಕ ಪಿ.ಕೆ. ರಾಜು ಹಾಗೂ ಸಿಬ್ಬಂದಿ ತೋಟಗಾರಿಕಾ ಇಲಾಖಾ ಕಚೇರಿ ಎದುರು ಸಾಗುತ್ತಿದ್ದಾಗ ಕೆಲವು ಕಾರ್ಮಿಕರು ಆ ಸಮಯದಲ್ಲಿ ಸಂಭ್ರಮಾಚರಣೆಯಿAದ ಹೊರತಾಗಿ ತಮ್ಮ ಪಾಡಿಗೆ ರಸ್ತೆ ಬದಿಯಲ್ಲಿ ಗುಂಡಿ ತೆಗೆಯುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.
ಇದನ್ನು ಗಮನಿಸಿದ ರಾಜು ಹಾಗೂ ಸಿಬ್ಬಂದಿ ಜೀಪ್ ನಿಲ್ಲಿಸಿ ತಮಗೆ ಯಾರೋ ನೀಡಿದ್ದ ಸಿಹಿ ತಿಂಡಿಯನ್ನು ಈ ಶ್ರಮಿಕರಿಗೆ ವಿತರಿಸಿ ಅವರೊಂದಿಗೆ ಶುಭಾಶಯ ಹಂಚಿಕೊAಡು ಹೊಸ ವರ್ಷಾಚರಣೆ ಮಾಡಿ ವಿಶೇಷತೆ ಮೆರೆದರು.ಶನಿವಾರಸಂತೆ: ಸಮೀಪದ ಗೋಪಾಲಪುರದ ಸಂತ ಅಂಥೋಣಿ ಚರ್ಚ್ನಲ್ಲಿ ನೂತನ ವರ್ಷಾಚರಣೆಯನ್ನು ರೋಮನ್ ಕ್ಯಾಥೋಲಿಕ್ ಸಮುದಾಯದವರು ಆಚರಿಸಿದರು.
ಚರ್ಚ್ನ ಫಾದರ್ ಕ್ರಿಸ್ಟೋಫರ್ ಸಗಯ್ ರಾಜ್ ನೇತೃತ್ವದಲ್ಲಿ ದೇವರಿಗೆ ಕೃತಜ್ಞತೆ ಸಲ್ಲಿಸಿ, ಹೊಸ ವರ್ಷಕ್ಕೆ ಆಶೀರ್ವಾದ ಬೇಡಿ ನಂತರ ದಿವ್ಯ ಬಲಿ ಪೂಜೆಯನ್ನು ನೆರವೇರಿಸಿದರು. ಭಕ್ತ ವೃಂದಕ್ಕೆ ತೀರ್ಥ ವಿನಿಯೋಗದ ನಂತರ ಕೇಕ್ ಹಂಚಲಾಯಿತು.
ಬೆಳಿಗ್ಗೆ ನಡೆದ ಸಮಾರಂಭದಲ್ಲಿ ಚರ್ಚ್ ಆವರಣದಲ್ಲಿ ಸುಂದರವಾದ ಗೋದಲಿ ನಿರ್ಮಿಸಿದವರಿಗೆ ಹಾಗೂ ಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ಫಾದರ್ ಕ್ರಿಸ್ಟೋಫರ್ ಸಗಯ್ ರಾಜ್, ದೇವರು ಎಲ್ಲರಿಗೂ ಶಾಂತಿ, ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥಿಸಿದರು.
ಪೂಜಾ ಕಾರ್ಯಕ್ರಮದಲ್ಲಿ ಮೈಸೂರಿನ ಧರ್ಮಗುರು ರಾವುಲ್ ರಾಜ್ ಉಪಸ್ಥಿತರಿದ್ದರು.ಚೆಯ್ಯಂಡಾಣೆ: ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲಡಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನಾಲಡಿಯ ಗ್ರಾಮಸ್ಥರು ಹೊಸ ವರ್ಷದ ಪ್ರಯುಕ್ತ ಟ್ರ್ಯಾಕ್ ಸೂಟ್ ಅನ್ನು ಕೊಡುಗೆಯಾಗಿ ನೀಡಿದರು.
ಗ್ರಾಮಸ್ಥರು ಉದಾರವಾಗಿ ನೀಡಿದ ಟ್ರಾö್ಯಕ್ಸೂಟನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ವಿತರಿಸಿದರು.
ಈ ಸಂದರ್ಭ ಶಾಲೆಯ ಅತಿಥಿ ಶಿಕ್ಷಕರಾದ ಗೌರಮ್ಮ, ಶಾರಿಕ, ಸಿಬ್ಬಂದಿ ವೀಣಾ ಉಪಸ್ಥಿತರಿದ್ದರು.ಚೆಯ್ಯಂಡಾಣೆ : ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇತು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ೨೦೨೬ರ ಹೊಸ ವರ್ಷಾಚರಣೆಯನ್ನು ಸಂಭ್ರಮದಿAದ ಆಚರಿಸಲಾಯಿತು.
ಅಂಗನವಾಡಿ ಕೇಂದ್ರದಲ್ಲಿ ಪುಟಾಣಿ ಮಕ್ಕಳು ಕೇಕ್ ಕತ್ತರಿಸಿ ಪರಸ್ಪರ ಹಂಚುವ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡರು.
ಈ ಸಂದರ್ಭ ಅಂಗನವಾಡಿ ಕಾರ್ಯಕರ್ತೆ ಆಶಾ, ಸಹಾಯಕಿ ಲೀಲಾವತಿ ಹಾಜರಿದ್ದರು.ಸಿದ್ದಾಪುರ: ಸಿದ್ದಾಪುರ ಸಮೀಪದ ಆನಂದಪುರದಲ್ಲಿ ಇರುವ ಶ್ರೀ ಈಶ್ವರ ದೇವಾಲಯದಲ್ಲಿ ಹೊಸ ವರ್ಷದ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಿತು. ವಿವಿಧ ಗ್ರಾಮಗಳಿಂದ ಭಕ್ತಾದಿಗಳು ಭಾಗವಹಿಸಿದ್ದರು. ಭಕ್ತಾದಿಗಳಿಗೆ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ಸೋಮವಾರಪೇಟೆ: ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಇಲ್ಲಿನ ಅಪ್ಪು ಅಭಿಮಾನಿಗಳ ಬಳಗದ ಅಧ್ಯಕ್ಷ ಅಬ್ಬೂರುಕಟ್ಟೆ ರವಿಕುಮಾರ್ ಅವರು ಹೊಸ ವರ್ಷ ಹಾಗೂ ತನ್ನ ಹುಟ್ಟುಹಬ್ಬದ ಅಂಗವಾಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಮಧ್ಯಾಹ್ನದ ಊಟ ವಿತರಿಸಿದರು.
ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬ, ಸ್ಮರಣೆಯಂದು ಆಸ್ಪತ್ರೆಗೆ ರೋಗಿಗಳಿಗೆ ಊಟ ನೀಡುತ್ತಾ ಬಂದಿರುವ ರವಿಕುಮಾರ್ ಅವರು, ತಮ್ಮ ಹುಟ್ಟು ಹಬ್ಬದಂದೂ ಸಹ ಮಧ್ಯಾಹ್ನದ ಊಟದ ವ್ಯವಸ್ಥೆ ಒದಗಿಸಿ ಮಾದರಿಯಾದರು. ಇದೇ ಸಂದರ್ಭ ಅಪ್ಪು ಅಭಿಮಾನಿಗಳ ಬಳಗ ದಿಂದ ಹೊರತರ ಲಾಗಿರುವ ಕ್ಯಾಲೆಂಡರ್ನ್ನು ಅರ್ಚಕ ಚಂದ್ರಶೇಖರ್ ಭಟ್ ಬಿಡುಗಡೆ ಮಾಡಲಾಯಿತು.
ಈ ಸಂದರ್ಭ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಜಮೀರ್ ಅಹ್ಮದ್, ವೈದ್ಯರುಗಳಾದ ಡಾ. ಶಿವಪ್ರಸಾದ್, ಡಾ. ಕಿರಣ್, ಪ್ರವೀಣ್ ಶೆಟ್ಟಿ ಬಣದ ಕರವೇ ಜಿಲ್ಲಾಧ್ಯಕ್ಷ ಕೆ.ಎನ್. ದೀಪಕ್, ಆಟೋ ಚಾಲಕರ ಸಂಘದ ಮಾಜೀ ಅಧ್ಯಕ್ಷ ಮೋಹನ್, ಚಂದ್ರಶೇಖರ್ ಭಟ್, ಮೊಗೇರ ಸಮಾಜದ ಮುಖಂಡ ದಾಮೋದÀರ್ ಸೇರಿದಂತೆ ಇತರರು ಇದ್ದರು.ನಾಪೋಕ್ಲು: ಇಲ್ಲಿಗೆ ಸಮೀಪದ ಹಳೆ ತಾಲೂಕಿನ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ನೂತನ ವರ್ಷಾಚರಣೆಯನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
ಬಾಲ ವಿಕಾಸ ಸಲಹಾ ಸಮಿತಿ ಅಧ್ಯಕ್ಷರಾದ ಸೋನಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅಂಗನವಾಡಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಇದರಲ್ಲಿ ತರಕಾರಿಗಳ ಬಳಕೆ ಹಾಗೂ ಉಪಯೋಗಗಳ ಬಗ್ಗೆ ನೃತ್ಯ ರೂಪಕ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದ ಅತಿಥಿಗಳಾಗಿ ಕೊಳಕೇರಿ ಗ್ರಾಮದ ಕಾಫಿ ಬೆಳೆಗಾರ ಕುಂಡ್ಯೋಳAಡ ಬಿಪಿನ್ ಮತ್ತು ತಾಲೂಕು ಸ್ತಿçÃಶಕ್ತಿ ಗುಂಪಿನ ಕಾರ್ಯದರ್ಶಿ ಅನಿತಾ ಹಾಗೂ ಪ್ರಮುಖರು ಭಾಗವಹಿಸಿದ್ದರು. ಕೇಕ್ ಕತ್ತರಿಸಿ ದಿನದ ಮಹತ್ವದ ಬಗ್ಗೆ ಮಾತನಾಡಿ, ತಮ್ಮ ಅನಿಸಿಕೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಮಕ್ಕಳ ಪ್ರಾರ್ಥನೆಯೊಂದಿಗೆ ಪ್ರಾರಂಭಗೊAಡ ಕಾರ್ಯಕ್ರಮವನ್ನು ಅಂಗನವಾಡಿ ಕಾರ್ಯಕರ್ತೆ ಭಾಗ್ಯವತಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಈ ಸಂದರ್ಭ ಸ್ತಿçÃಶಕ್ತಿ ಗುಂಪಿನ ಹಾಗೂ ಬಾಲ ವಿಕಾಸ ಸಮಿತಿ ಸದಸ್ಯರು ಪೋಷಕರು ಉಪಸ್ಥಿತರಿದ್ದರು. ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆಯ ಐ.ಪಿ.ಸಿ. ಚರ್ಚ್ನಲ್ಲಿ ಕ್ರೆöÊಸ್ತ ಸಮುದಾಯದ ಭಕ್ತಾದಿಗಳು ಹೊಸ ವರ್ಷವನ್ನು ದೇವರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಸಂಭ್ರಮದಿAದ ಆಚರಿಸಿದರು.
ಚರ್ಚ್ನ ಸಭಾ ಪಾಲಕರಾದ ಪಾಸ್ಟರ್ ಪಿ.ಸಿ. ಫ್ರೆಡ್ಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಸ್ತುತಿ - ಆರಾಧನೆ ವಾಕ್ಯದ ಸಂದೇಶ ಹಾಗೂ ಸಾಕ್ಷö್ಯಗಳ ಮೂಲಕ ದೇವರಿಗೆ ಮಹಿಮೆ ಸಲ್ಲಿಸಿದರು. ತಮ್ಮ ಧರ್ಮ ಬೋಧನೆಯಲ್ಲಿ ಹೊಸ ವರ್ಷವು ಬದಲಾಗುವ ಕಾಲದ ಮಧ್ಯೆಯೂ ಬದಲಾಗದ ದೇವರನ್ನು ನೆನಪಿಸುವ ಸಮಯವಾಗಿದೆ. ವರ್ಷಗಳು, ಪರಿಸ್ಥಿತಿಗಳು ಬದಲಾಗುತ್ತವೆ. ಆದರೆ, ನಮ್ಮ ದೇವರು ಎಂದಿಗೂ ಬದಲಾಗುವುದಿಲ್ಲ. ಆತನ ನಿಷ್ಠೆ, ಪ್ರೀತಿ, ಆಶೀರ್ವಾದಗಳು ಹೊಸ ವರ್ಷದಲ್ಲೂ ನಮ್ಮೊಂದಿಗೆ ಇರುತ್ತವೆ.
ಹೊಸ ವರ್ಷವನ್ನು ದೇವರ ಮೇಲೆ ಸಂಪೂರ್ಣ ಭರವಸೆ ಇಟ್ಟು ಆತನ ಮಾರ್ಗದರ್ಶನದಲ್ಲಿ ನಡೆಯುವ ಸಂಕಲ್ಪದೊAದಿಗೆ ಆರಂಭಿಸೋಣ ಎಂದು ಹೇಳಿದರು.
ನೂತನ ವಸ್ತç ಧರಿಸಿದ್ದ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತಾದಿಗಳು ಪೂಜೆ ಹಾಗೂ ಪ್ರಾರ್ಥನೆಯಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದು, ಸಿಹಿ ತಿಂಡಿಗಳನ್ನು ಹಂಚಿ ಸಂಭ್ರಮಿಸಿದರು. ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.